
ದೇವನಹಳ್ಳಿ (ಡಿ.14): ‘ಇಕ್ಬಾಲ್ ಹುಸೇನ್ ಗೆ ಮಾತನಾಡುವ ಚಟ. ಅವರ ಮಾತನ್ನು ಯಾರೂ ಸೀರಿಯಸ್ಸಾಗಿ ತಗೋಬೇಡಿ. ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ತಮ್ಮ ಆಪ್ತ, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗರಂ ಆಗಿದ್ದಾರೆ. ದೆಹಲಿಗೆ ತೆರಳುವುದಕ್ಕೂ ಮೊದಲು ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜ.6 ರಂದು ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ’ ಎಂಬ ಶಾಸಕರ ಹೇಳಿಕೆಗೆ ಗರಂ ಆದರು. ‘ಯಾವ ಇಕ್ಬಾಲ್ ಹುಸೇನ್? ಅವರಿಗೆ ಮಾತಿನ ಚಟ. ಅವರ ಮಾತನ್ನು ಯಾರೂ ನಂಬೋಕೆ ಹೋಗಬೇಡಿ. ಅವರ ಮಾತನ್ನು ಯಾರೂ ಸಿರಿಯಸ್ಸಾಗಿ ತೆಗೆದುಕೊಳ್ಳಬೇಡಿ. ಮೊದಲು ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ಕಿಡಿ ಕಾರಿದರು.
ಇಕ್ಬಾಲ್‌ಗೆ ಮಾತಿನ ಚಟ, ಸೀರಿಯಸ್ ಆಗಿ ತಗೋಬೇಡಿ: ‘ಯಾವ ಇಕ್ಬಾಲ್ ಹುಸೇನ್? ‘ಇಕ್ಬಾಲ್ ಹುಸೇನ್ ಗೆ ಮಾತನಾಡುವ ಚಟ. ಅವರ ಮಾತನ್ನು ಯಾರೂ ಸೀರಿಯಸ್ಸಾಗಿ ತಗೋಬೇಡಿ. ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು’
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಶಾಸಕ ಇಕ್ಬಾಲ್ ಹುಸೇನ್ ಅವರು ಜ.6 ರಂದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ ಎಂದು ನೀಡಿರುವ ಹೇಳಿಕೆ ಕುರಿತು ಪ್ರಶ್ನಿಸಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ನೇರ ಪ್ರತಿಕ್ರಿಯೆ ನೀಡದೆ ನಿರ್ಗಮಿಸಿದ ಘಟನೆ ಶನಿವಾರ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆಯಿತು.
ಲಕ್ಷ್ಮೇಶ್ವರದ ಸ್ಕೂಲ್ ಚಂದನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮುಖ್ಯಮಂತ್ರಿಯನ್ನು ಸುದ್ದಿಗಾರರು, ಇತ್ತೀಚಿಗೆ ಚರ್ಚೆಯಲ್ಲಿರುವ ಇಕ್ಬಾಲ್ ಹುಸೇನ್ ಹೇಳಿಕೆ ಬಗ್ಗೆ ಸ್ಪಷ್ಟನೆ ಕೇಳಿದರು. ಈ ವೇಳೆ ಸಿಎಂ ಅವರು ಪ್ರತಿಕ್ರಿಯೆ ನೀಡದೆ ಮುಂದೆ ಸಾಗಿದರು. ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಕುರಿತಾದ ಪ್ರಶ್ನೆಗಳಿಗೆ ಮೌನ ವಹಿಸಿದ ಸಿದ್ದರಾಮಯ್ಯ ಅವರು, ಹೈ ಕಮಾಂಡ್ ಹೇಳಿದಂತೆ ಎಂದು ಮಾತ್ರ ಹೇಳಿ ಹೆಜ್ಜೆ ಹಾಕಿದರು.
ಇದೇ ವೇಳೆ, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಕೇಳಿದಾಗ, ಸಿಎಂ ಅವರು ಕಳಸಾ ಬಂಡೂರಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮುಂಬರುವ ವಿಧಾನಮಂಡಲದ ಸದನದಲ್ಲಿ (ಅಧಿವೇಶನದಲ್ಲಿ) ವಿಸ್ತೃತವಾಗಿ ಮಾತನಾಡುತ್ತೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.