
ನವದೆಹಲಿ/ಬೆಂಗಳೂರು, (ಜ.25): ಶತಾಯಗತಾವಾಗಿ ಕೆಪಿಸಿಸಿ ಅಧ್ಯಕ್ಷ ಕುರ್ಚಿ ಮೇಲೆ ಕೂರಲು ಕಸರತ್ತು ನಡೆಸಿರುವ ಡಿಕೆ ಶಿವಕುಮಾರ್ ಮಧ್ಯಪ್ರದೇಶದ ಬಗಲಾಮುಖಿಗೆ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ದೆಹಲಿ ವಿಮಾನ ಏರಿದ್ದು, ಇಂದು (ಶನಿವಾರ) ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಜತೆ ಮಾತುಕತೆ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಹುದ್ದೆ: ವೇಣುಗೋಪಾಲ್ ಭೇಟಿ ಬಳಿಕ ಡಿಕೆಶಿ ಫಸ್ಟ್ ರಿಯಾಕ್ಷನ್
ಯಾರನ್ನು ಭೇಟಿಯಾಗಲು ದೆಹಲಿ ಬಂದಿಲ್ಲ ಎನ್ನುತ್ತಲೇ ಶನಿವಾರ ಬೆಳಗ್ಗೆ ಎಐಸಿಸಿ ಕಚೇರಿಗೆ ಭೇಟಿ ನೀಡಿ. ವೇಣುಗೋಪಾಲ್ ಜತೆ 10 ನಿಮಿಷ ಮಾತುಕತೆ ನಡೆಸಿದರು.
ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಟಿಯೇ ಬೇಡ ಎಂದು ಪಟ್ಟು ಹಿಡಿದಿರುವ ಡಿಕೆಶಿ, ಕಾರ್ಯಧ್ಯಕ್ಷರ ನೇಮಕದಿಂದಾಗುವ ದುಷ್ಟಪರಿಣಾಮಗಳನ್ನು ವೇಣುಗೋಪಾಲ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನುವ ಮಾಹಿತಿ ಉನ್ನತ ಮಾಹಿತಿಗಳಿಂದ ತಿಳಿದುಬಂದಿದೆ. ಹಾಗಾದ್ರೆ ಡಿಕೆಶಿ ಏನೆಲ್ಲಾ ಮಾತನಾಡಿದ್ದಾರೆ. ಈ ಕೆಳಗಿನಂತಿದೆ.
* ಮೂರ್ನಾಲ್ಕು ಕಾರ್ಯಾಧ್ಯಕ್ಷರ ನೇಮಕದಿಂದ ಪಕ್ಷದ ಸಂಘಟನೆ ಕಷ್ಟ ಕಷ್ಟವಾಗುತ್ತದೆ.
* ಕಾರ್ಯಾಧ್ಯಕ್ಷರ ಹುದ್ದೆಗಳು ಜಾಸ್ತಿಯದಂತೆ ಪವರ್ ಸೆಂಟರ್‌ಗಳು ಹೆಚ್ಚಾಗುತ್ತವೆ.
* ಬಣ ರಾಜಕಾರಣ ಶುರುವಾಗುತ್ತದೆ
* ರಾಜಕಾರಣದಲ್ಲಿ ಯಾರ ಮೇಲೆ ಕೇಸ್ ಇಲ್ಲ ಹೇಳಿ.. ಈ ಬಗ್ಗೆ ಯೋಚನೆ ಅನಗತ್ಯ.
ಹೀಗೆ ಡಿಕೆ ಶಿವಕುಮಾರ್ ತಮ್ಮ ಅಭಿಪ್ರಾಯಗಳನ್ನು ವೇಣುಗೋಪಾಲ್ ಮುಂದೆ ಹೇಳಿದರು. ಬಳಿಕ ವೇಣುಗೋಪಾಲ್ ನಿಮ್ಮೆಲ್ಲಾ ಅಭಿಪ್ರಾಯವನ್ನು ಮೇಡಂಗೆ (ಸೋನಿಯಾ ಗಾಂಧಿ) ತಿಳಿಸುತ್ತೇನೆ ಎಂದು ಹೇಳಿ ತೆರಳಿದರು.
ಅತ್ತ ದೆಹಲಿಯಲ್ಲಿ ಡಿಕೆಶಿ ಬ್ಯಾಟಿಂಗ್: ಇತ್ತ ಬೆಂಗ್ಳೂರಲ್ಲಿ ಸಿದ್ದು ಬಣ ಮೀಟಿಂಗ್
ಅತ್ತ ದೆಹಲಿಯಲ್ಲಿ ಡಿಕೆಶಿ ಬ್ಯಾಟಿಂಗ್ ಮಾಡುತ್ತಿದ್ರೆ, ಇತ್ತ ಮಾಜಿ ಸಿದ್ದರಾಮಯ್ಯನವರ ತಂಡದಲ್ಲಿ ಗುರುತಿಸಿಕೊಂಡಿರುವ ನಾಯಕರು ಗುಪ್ತ್ ಗುಪ್ತ್ ಸಭೆ ನಡೆಸಿದ್ದಾರೆ.
ಒಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕಾಂಗ್ರೆಸ್‌ನಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಕಾರ್ಯಧ್ಯಕ್ಷರ ನೇಮಕವಾಗುತ್ತಾ ಅಥವಾ ಇಲ್ಲ ಎನ್ನುವುದನ್ನು ಇನ್ನಷ್ಟು ದಿನಗಳು ಕಾಯಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.