ಜಿಲ್ಲೆಯ ಹಿರಿಯೂರು ಪಟ್ಟಣದ ನೆಹರೂ ಮೈದಾನದಲ್ಲಿ ಒಕ್ಕಲಿಗ ಸಮುದಾಯದಿಂದ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದಿಂದ ಬೃಹತ್ ಒಕ್ಕಲಿಗರ ಸಮಾವೇಶ ನಡೆಯಿತು.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಆ.19): ಜಿಲ್ಲೆಯ ಹಿರಿಯೂರು ಪಟ್ಟಣದ ನೆಹರೂ ಮೈದಾನದಲ್ಲಿ ಒಕ್ಕಲಿಗ ಸಮುದಾಯದಿಂದ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದಿಂದ ಬೃಹತ್ ಒಕ್ಕಲಿಗರ ಸಮಾವೇಶ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮುದಾಯ ಇಬ್ಬರು ಸ್ವಾಮೀಜಿಗಳಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶ್ರೀ ನಂಜಾವಧೂತ ಸ್ವಾಮೀಜಿ ಭಾಗವಹಿಸಿದ್ದರು. ಹಾಗು ಈ ಸಮಾವೇಶದಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಾದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಜರಿದ್ದರು.
undefined
ಈ ವೇಳೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಇಬ್ಬರು ನಾಯಕರು ಕೂಡ ಮುಂದಿನ ಬಾರಿ ಸಿಎಂ ಆಗುವ ಕನಸನ್ನು ಬಿಚ್ಚಿಟ್ಟರು. ಮೊದಲು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತೊಮ್ಮೆ ತಾವು ಸಿಎಂ ಆಗುವ ಕನಸು ಬಿಚ್ಚಿಟ್ಟರು. ನಮ್ಮ ಸಮುದಾಯ ನಾಯಕರುಗಳನ್ನು ತಯಾರು ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಅನೇಕ ಅವಕಾಶಗಳು ಬರುತ್ತದೆ. ನಿಮ್ಮ ವಿವೇಚನೆಗೆ ಬಿಡುತ್ತೀನಿ ನಾನು ಎಂದ ಡಿಕೆಶಿ.ಶ್ರೀಗಳಿಗೆ ಹೇಳಿದ್ದೀನಿ. ಬೆಳಕು ಕಿಟಕಿ, ಬಾಗಿಲು ತೆರೆದು ಮನೆ ಬಾಗಿಲಿಗೆ ಬರ್ತಿದೆ. ಕರ್ಕೊಂಡ್ ಮನೆ ಬಾಗಿಲಿಗೆ ಬರೋ ಲಕ್ಷ್ಮಿಯನ್ನು ಸರಿಯಾಗಿ ಮನೆಗೆ ಸೇರಿಸಿಕೊಳ್ಳಿ.
Chitradurga; ಸ್ಟೇಡಿಯಂಗಳಲ್ಲಿ ಆಟ ಆಡ್ಬೇಕಂದ್ರೆ ದುಡ್ಡು ಕೊಡ್ಬೇಕು ಆದೇಶಕ್ಕೆ ಕ್ರೀಡಾರ್ಥಿಗಳ ಆಕ್ರೋಶ
ಈ ಕುರಿತು ಶ್ರೀಗಳಿಗೆ ನಾನು ಕೈ ಮುಗಿದು ಹೇಳಿದ್ದೀನಿ. ಅವರು ಮುಚ್ಚಿ ಬಿಡ್ಲಿ ಇಲ್ಲ ವಾಪಾಸ್ ಓಡಿಸಲಿ ಅವರಿಗೆ ಬಿಟ್ಟಿದ್ದು. ನಾನು ಬೇರೆ ಸಂದರ್ಭದಲ್ಲಿಯೂ ರಾಜಕಾರಣ ಮಾತಾಡೇ ಮಾತಾಡ್ತೀನಿ. ನಮ್ಮಲ್ಲಿಯೂ ಕೂಡ ಜನರು ಪ್ರೀತಿ ವಿಶ್ವಾಸ ಇಟ್ಕೊಂಡಿದ್ದೀರಿ ಎಂದರು. ಸಮರ್ಥ ನಾಯಕರನ್ನು ಸಮಾಜಕ್ಕೆ ಕೊಟ್ಟು ಸಾಕ್ಷಿಗುಡ್ಡೆ ಮಾಡಬೇಕು ಎಂದು ಆಸೆ ನಿಮ್ಮಲ್ಲಿಯೂ ಇದೆ. ಒಂದು ಛಲ ಇದೆ, ಇದಕ್ಕೆ ನಿಮ್ಮ ಆಶೀರ್ವಾದ ಬೇಕಾಗಿದೆ. ಬೇರೆ ದಿನ ಬಂದು ಇದಕ್ಕಿಂತ ಅನೇಕ ವಿಚಾರಗಳನ್ನು ನಿಮ್ಮ ಜೊತೆ ಹಂಚಿಕೊಳ್ತೀನಿ. ಈ ಡಿಕೆ ಶಿವಕುಮಾರ್ ನಿಮ್ಮ ಮಗ, ನನ್ನ ಕಷ್ಟ ಕಾಲದಲ್ಲಿ ನಿಂತಿದ್ದೀರಿ ಮುಂದಕ್ಕೂ ನಿಂತು ಕೊಳ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಡಿಕೆಶಿ ಹೇಳಿದರು.
ಇನ್ನೂ ನಂತರದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ಭಗವಂತನ ಇಚ್ಚೆ, ಪರಮಪೂಜ್ಯ ಶ್ರೀಗಳ ಇಚ್ಚೆ ಆಗಿದೆ. ಡಿಕೆಶಿ ಅವರ ಪಕ್ಷದಿಂದ ಹೋರಾಟ ಮಾಡಲಿ, ನಾನು ನಮ್ಮ ಪಕ್ಷದಿಂದ ಹೋರಾಟ ಮಾಡ್ತೀನಿ. ಭಗವಂತನ ಇಚ್ಚೆಯಲ್ಲಿ ಅವರು ಸಿಎಂ ಆಗಬೆಂಕಿಂದಿದ್ದರೆ ಅವರೇ ಸಿಎಂ ಆಗಲಿ ನನ್ನ ಸಹಕಾರವಿದೆ ಎಂದು ಹೇಳಿದರು. ಜೊತೆಗೆ ನಿಮ್ಮೆಲ್ಲರ ಆಶೀರ್ವಾದ, ತಂದೆ ತಾಯಿಯ ಪುಣ್ಯದಿಂದ ನಾನು ಈಗಾಗಲೇ ಎರಡು ಬಾರಿ ಸಿಎಂ ಅಗಿದ್ದೇನೆ. ಜನಪರ ಕಾರ್ಯಕ್ರಮ ಕೊಟ್ಟಿರೋದೇ ನನ್ನ ಆಸ್ತಿ ಎಂದರು. ನಮ್ಮದೊಂದು ಸಣ್ಣ ಪಕ್ಷ, ರಾಜ್ಯಕ್ಕೆ ಸೀಮಿತವಾದ ಪಕ್ಷ. ಈ ಬಾರಿಯೂ ನನಗೆ ನಂಬಿಕೆ ಇದೆ.
ಫಸಲಿಗೆ ಬಂದ ಅಡಿಕೆಗೆ ಕನ್ನ: ರಾತ್ರೋ ರಾತ್ರಿ ತೋಟಕ್ಕೆ ನುಗ್ಗಿ ಅಡಿಕೆ ಕದಿಯುತ್ತಿರುವ ಕಳ್ಳರು
ಕಳೆದ ಬಾರಿ ಕುತಂತ್ರದಿಂದ ನಮ್ಮ ಪಕ್ಷಕ್ಕೆ ಒಂದು ಸಮುದಾಯ ಮತ ಹಾಕದಂತೆ ಮಾಡಿದ್ರು. ಇಂದು ಆ ಸಮುದಾಯಕ್ಕೆ ಅದರ ಅರಿವಾಗಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ಕೊಟ್ಟರು. ಇವತ್ತು 20 ಸೀಟು, 15 ಅಂತ ಯಾರು ಏನಾದ್ರು ಬಡ್ಕಳ್ಳಲಿ. ಟಿವಿಯವರು ನನ್ನ ಹೆಸರು ಹೇಳೋದೇನು ಬೇಡ. ನನಗೆ ಗೊತ್ತು ನಾವು ಈ ಬಾರಿ ಎಲ್ಲಿಗೆ ಹೋಗಿ ರೀಚ್ ಆಗ್ತಿವಿ ಅಂತ. ಅದರ ಮೇಲೆ ಮುಂದೇನು ಆಗುತ್ತೆ ನೋಡೋಣ. ಈ ಬಾರಿ ಇಬ್ಬರೂ ನಮ್ಮ ನಮ್ಮ ಶ್ರಮ ಹಾಕೋಣ. ಈ ರಾಜ್ಯಕ್ಕೆ ಪ್ರಾಮಾಣಿಕ ಸರ್ಕಾರ ತರಲು ಅವರ ಶ್ರಮ ಅವರು ಹಾಕಲಿ, ನನ್ನ ಶ್ರಮ ನಾನು ಹಾಕುವೆ. ಹಿರಿಯೂರಿಂದ ನಮ್ಮ ಸಮುದಾಯ ಅಭ್ಯರ್ಥಿ ಆಯ್ಕೆ ಆಗಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು.