7 ರಾಜ್ಯಗಳ ಎಲೆಕ್ಷನ್ ಹಾಗೂ ಲೋಕಸಭಾ ಚುನಾವಣೆ ಗುರಿಯಾಗಿಸಿಕೊಂಡು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ

By Govindaraj SFirst Published Aug 18, 2022, 10:09 PM IST
Highlights

ವಿವಿಧ ರಾಜ್ಯಗಳ ಚುನಾವಣಾ ಹಾಗೂ ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಬೃಹತ್ ಚುನಾವಣಾ ಪಾದಯಾತ್ರೆಗೆ ಕಾಂಗ್ರೆಸ್ ಮುಂದಾಗಿದೆ. ಸೆಪ್ಟೆಂಬರ್ 7ರಿಂದ ಚುನಾವಣಾ ದಂಡಯಾತ್ರೆಗೆ ಸಜ್ಜಾಗಿರುವ ಕಾಂಗ್ರೆಸ್, ಭಾರತ್ ಜೋಡೋ ಪಾದಯಾತ್ರೆ ಮಾಡ್ತಿದೆ. 

ಬೆಂಗಳೂರು (ಆ.18): ವಿವಿಧ ರಾಜ್ಯಗಳ ಚುನಾವಣಾ ಹಾಗೂ ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಬೃಹತ್ ಚುನಾವಣಾ ಪಾದಯಾತ್ರೆಗೆ ಕಾಂಗ್ರೆಸ್ ಮುಂದಾಗಿದೆ. ಸೆಪ್ಟೆಂಬರ್ 7ರಿಂದ ಚುನಾವಣಾ ದಂಡಯಾತ್ರೆಗೆ ಸಜ್ಜಾಗಿರುವ ಕಾಂಗ್ರೆಸ್, ಭಾರತ್ ಜೋಡೋ ಪಾದಯಾತ್ರೆ ಮಾಡ್ತಿದೆ. ಒಟ್ಟು ಹನ್ನೆರಡು ರಾಜ್ಯಗಳಲ್ಲಿ ಭಾರತ್ ಜೋಡೋ ಯಾತ್ರೆ ನಡೆಯಲಿದೆ. ಏಳು ರಾಜ್ಯಗಳ ಎಲೆಕ್ಷನ್ ಹಾಗೂ ಲೋಕಸಭಾ ಎಲೆಕ್ಷನ್ ಗುರಿಯಾಗಿಸಿಕೊಂಡು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಕೈಗೊಂಡಿದೆ. 

ಕನ್ಯಾಕುಮಾರಿಯಿಂದ ಆರಂಭ ಆಗಲಿರುವ ಭಾರತ್ ಜೋಡೋ ಪಾದಯಾತ್ರೆ ಜಮ್ಮು ಕಾಶ್ಮೀರವರೆಗೂ ನಡೆಯಲಿದೆ. ಮುಂದೆ ಸಾರ್ವತ್ರಿಕ ಚುನಾವಣೆಗಳಿರುವ ರಾಜ್ಯಗಳಲ್ಲಿ ಹೆಚ್ಚು ಸಂಚಾರ ನಡೆಸಲಿರುವ ಭಾರತ್ ಜೋಡೋ ಯಾತ್ರೆ. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಹರಿಯಾಣ ರಾಜ್ಯಗಳಲ್ಲಿ ಮುಂದೆ ಸಾರ್ವತ್ರಿಕ ಚುನಾವಣೆಗಳು ಬರಲಿವೆ. ಹೀಗಾಗಿ ಈ ರಾಜ್ಯದಲ್ಲಿ ಹೆಚ್ಚು ದಿನಗಳ ವರೆಗೆ ಪಾದಯಾತ್ರೆ ನಡೆಯಲಿದೆ. 

ನಿತ್ಯಾನಂದ ಸ್ವಾಮೀಜಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಕರ್ನಾಟಕದಲ್ಲಿ 21 ದಿನ, 511 ಕಿ.ಮೀ ಯಾತ್ರೆ: ರಾಜ್ಯದಲ್ಲಿ ಕಾಂಗ್ರೆಸ್ ಈಗಾಗಲೇ ಚುನಾವಣೆ ರಣ ಕಣ ಸಿದ್ದಪಡಿಸುವತ್ತಾ ಸಾಗುತ್ತಿದೆ. ಇದಕ್ಕೆ ಮತ್ತೊಂದು ಸೇರ್ಪಡೆ ಎನ್ನುವಂತೆ ಕರ್ನಾಟಕದಲ್ಲಿ 21 ದಿನ ಪಾದಯಾತ್ರೆ ನಡೆಯಲಿದ್ದು, 511 ಕಿಲೋಮೀಟರ್ ಯಾತ್ರೆ ಸಾಗಲಿದೆ. ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಚುನಾವಣೆಗಳಿರುವ  ರಾಜ್ಯಗಳಲ್ಲಿ 15-20 ದಿನಗಳ ಕಾಲ ಪಾದಯಾತ್ರೆ ಹಾದು ಹೋಗಲಿದೆ. ಉಳಿದಂತೆ ಇತರೆ ರಾಜ್ಯಗಳಲ್ಲಿ 3 ರಿಂದ 5 ದಿನ ಮಾತ್ರ ಪಾದಯಾತ್ರೆ ನಡೆಸಲು ಪ್ಲಾನ್ ಮಾಡಿದ್ದಾರೆ ಕಾಂಗ್ರೆಸ್ ನಾಯಕರು. ರಾಜ್ಯದಲ್ಲಿ ಎಂಟು ಜಿಲ್ಲೆಗಳಲ್ಲಿ ಸಂಚಾರ ಮಾಡಲಿರುವ ಭಾರತ್ ಜೋಡೋ, ಚಾಮರಾಜನಗರ, ಮೈಸೂರು ನಗರ, ಗ್ರಾಮಾಂತರ, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರಿನಲ್ಲಿ ಪಾದಯಾತ್ರೆ ಮಾಡಲಾಗುತ್ತದೆ.

ದೇಶಾದ್ಯಂತ ಒಟ್ಟು 3,571 ಕಿಲೋ ಮೀಟರ್ ಹೆಜ್ಜೆ: ಭಾರತ್ ಜೋಡೋ ಪಾದಯಾತ್ರೆ ಬರೋಬ್ಬರಿ 3,571 ಕಿಮೀ ನಡೆಯಲಿದೆ. 148 ದಿನಗಳ ಕಾಲ ಭಾರತ್ ಜೋಡೋ ಯಾತ್ರೆ ನಡೆಯಲಿದ್ದು, ಒಟ್ಟು 68 ಲೋಕಸಭಾ ಕ್ಷೇತ್ರಗಳು, 203 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಾದು ಹೋಗಲಿದೆ.

ಕಾಂಗ್ರೆಸ್‌ಗೆ ಉತ್ಸಾಹ ಹೆಚ್ಚಿಸಿದ ಸಮಾವೇಶಗಳು: ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಹಾಗೂ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಕಾಂಗ್ರೆಸ್ ಪಾಳಯಕ್ಕೆ ಚುನಾವಣೆಯ ಕಿಚ್ಚು ಹೆಚ್ಚಿಸಿದೆ. ಈ ಎರಡೂ ಕಾರ್ಯಕ್ರಮಗಳಿಂದ ಕಾಂಗ್ರೆಸ್ ‌ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದೆ. ಇದೇ ಜೋಶ್ ಚುನಾವಣೆ ತನಕ ಉಳಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ ತಿಂಗಳಿಗೊಂದು ಕಾರ್ಯಕ್ರಮ ರೂಪಿಸಲು ಕಾಂಗ್ರೆಸ್ ‌ಮುಂದಾಗಿದೆ. 

ಬಿಸಿಯೂಟ ಯೋಜನೆ ಗುತ್ತಿಗೆ ಕಾರ್ಮಿಕರು ಕನಿಷ್ಠ ವೇತನ ಕಾಯ್ದೆಯಡಿ ಸಂಬಳ ಪಡೆಯಲು ಅರ್ಹರಲ್ಲ: ಹೈಕೋರ್ಟ್

ಚುನಾವಣೆಗೆ ಸಿಕ್ಕಿಲ್ಲ ಕಾಂಗ್ರೆಸ್ ಗೆ ಬ್ರಹ್ಮಾಸ್ತ್ರ: ಸಿದ್ದರಾಮೋತ್ಸವ, ಸ್ವಾತಂತ್ರ್ಯ ನಡಿಗೆ ಕಾಂಗ್ರೆಸ್ ಲಾಭ ತಂದುಕೊಟ್ಟಿದ್ದರೂ ಚುನಾವಣೆಗೆ ವಸ್ತು ವಿಷಯಕ್ಕಾಗಿ ಕಾಂಗ್ರೆಸ್ ‌ಹುಡುಕಾಟ ನಡೆಸ್ತಿದೆ‌. 2013 ಚುನಾವಣೆ ವೇಳೆ ಕಾಂಗ್ರೆಸ್ ಸಿಕ್ಕಿದ್ದ ಅಕ್ರಮ ಗಣಿಗಾರಿಕೆಯಂತ ವಿಚಾರಗಳು ಕಾಂಗ್ರೆಸ್ ‌ಗೆ ಸಿಕ್ಕಿಲ್ಲ. ಬೆಲೆ ಏರಿಕೆ, 40% ಕಮಿಷನ್ ವಿಚಾರದಲ್ಲಿಯೂ ಕಾಂಗ್ರೆಸ್ ಬೃಹತ್ ಹೋರಾಟ ಸೆಟ್ ಮಾಡುವಲ್ಲಿ ಸೋತಿದೆ. ಹೀಗಾಗಿ ಚುನಾವಣೆಗೆ ವಿಷಯ ವಸ್ತು ಹುಡುಕಾಟದಲ್ಲಿ ಕಾಂಗ್ರೆಸ್ ನಿರತವಾಗಿದೆ.

click me!