
ಹುಬ್ಬಳ್ಳಿ, (ಮಾ.07): ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ರಾಸಲೀಲೆ ಸಿ.ಡಿ. ಪ್ರಕರಣವನ್ನು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ವಾಪಸ್ ಪಡೆದುಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಹಲವು ಪ್ರಶ್ನೆಗಳ ಜೊತೆ ಅನುಮಾನಗಳು ಸಹ ಹುಟ್ಟಿಕೊಂಡಿವೆ.
"
ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಈ ಕೇಸ್‌ನ್ನು ದಿನೇಶ್ ಕಲ್ಲಹಳ್ಳಿ ಅವರು ದಿಢೀರ್ ವಾಪಸ್ ಪಡೆದುಕೊಂಡಿದ್ದೇಕೆ? ಏನಾದ್ರೂ ಒತ್ತಡಗಳಿಂದ ಕೇಸ್ ವಿತ್ ಡ್ರಾ ಮಾಡಿಕೊಂಡ್ರಾ? ಬೆದರಿಕೆಗಳಿಗೆ ಹೆದರಿದ್ರಾ..? ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ.
ಇನ್ನು ಇದಕ್ಕೆ ಸಂಬಂಧಿಸಿದಂತೆ ದೂರು ಹಿಂಪಡೆದ ಬಗ್ಗೆ ಸ್ವತಃ ದಿನೇಶ್ ಕಲ್ಲಹಳ್ಳಿ ಪ್ರತಿಕ್ರಿಯಿಸಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಡೀಲ್ ಆರೋಪದ ಹೇಳಿಕೆ ಬೇಸರ ತಂದಿದೆ. ದೂರು ನೀಡಿದ್ದವರನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.
ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್
ದೂರು ಹಿಂಪಡೆಯುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದೇನೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನಮ್ಮ ವಕೀಲರು ಹೋಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ದೂರುದಾರ 5 ಕೋಟಿ ತೆಗೆದುಕೊಂಡು ಡೀಲ್ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದರಿಂದ ನನಗೆ ತುಂಬ ಆಘಾತವಾಗಿದ್ದು, ಜನರಿಗೆ ನನ್ನ ಮೇಲೆ ಅನುಮಾನಗಳು ಹುಟ್ಟಿಕೊಂಡಿವೆ. ಮೊದಲ ಇದರಿಂದ ಹೊರಬರಬೇಕೆಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದರು.
ಕುಮಾರಸ್ವಾಮಿ ಅವರ ಹೇಳಿಕೆಯಿಂದ ಜನರು ನನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ. ಈ ಆರೋಪ ನನ್ನ ಸಾಮಾಜಿಕ ಹೋರಾಟಕ್ಕೆ ಹಿನ್ನಡೆ ಅಂತ ನಾನು ಅರ್ಥೈಸಿಕೊಂಡಿದ್ದೇನೆ. ಮಾಹಿತಿ ನೀಡುವವರನ್ನ ಟಾರ್ಗೆಟ್ ಮಾಡೋದು ಬಹಳ ನೋವಿನ ಸಂಗತಿ ಎಂದು ಬೇಸರ ಹೊರ ಹಾಕಿದರು.
'ಜಾರಕಿಹೊಳಿ ರಾಸಲೀಲೆಯಲ್ಲಿ ದೊಡ್ಡ ದೊಡ್ಡವರ ಕೈವಾಡ, 5 ಕೋಟಿ ಡೀಲ್ '
ಮಾರ್ಚ್ 2ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದು, ಇದೀಗ ಏಕಾಏಕಿ ವಾಪಸ್ ಪಡೆಯುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಸಿಡಿಮದ್ದಿನಂತೆ ಬಂದ ಕಲ್ಲಳ್ಳಿ ಉಲ್ಟಾಒಡೆದಿದ್ದು ಯಾಕೆ..? ಸಿಸಿಬಿ ಅಧಿಕಾರಿಗಳ ತನಿಖೆಗೆ ಬೆಚ್ಚಿ ಬಿದ್ರಾ ಕಲ್ಲಳ್ಳಿ..? ಸಿಡಿ ರಿಲಿಸ್ ಗೆ ನಡೆದಿತ್ತಾ ಶಡ್ಯಂತ್ರ..? ರಾಜ್ಯವನ್ನೇ ಹೊತ್ತಿ ಉರಿಸಿ ನನಗೇನು ನನಗೇನು ಅಂದಿದ್ಯಾಕೆ..? ಸಿಡಿ ರಿಲಿಸ್ ಮಾಡುವ ಉದ್ದೇಶದಿಂದಲೇ ಬಂದ್ರಾ ದಿನೇಶ್ ಕಲ್ಲಳ್ಳಿ..? ಸಂತ್ರಸ್ಥೆಯ ಜಾಡು ಹಿಡಿಯುತ್ತಿದ್ದಂತೆ ಕಲ್ಲಳ್ಳಿ ಉಲ್ಟಾ ಹೊಡೆದಿದ್ಯಾಕೆ ? ಪ್ರಕರಣದ ದಿಕ್ಕು ತಪ್ಪಿಸಲು ಮುಂದಾದ್ರ ಕಲ್ಲಳ್ಳಿ..? ಹೀಗೆ ಹತ್ತು ಹಲವು ಪ್ರಶ್ನೆಗಳು ಕಾಡುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.