ಧರ್ಮಸ್ಥಳ ಪ್ರಕರಣದ ಹಿಂದೆ ಏನೋ ಪಿತೂರಿ ಇದೆ: ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ

Published : Aug 10, 2025, 12:54 PM IST
Shivaganga Basavaraj

ಸಾರಾಂಶ

ಹೆಣ್ಣುಮಕ್ಕಳು ಸ್ವಾವಲಂಬನೆಯಿಂದ ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು ಎಂಬ ಧ್ಯೇಯ ಇಟ್ಟುಕೊಂಡವರು ವೀರೇಂದ್ರ ಹೆಗ್ಗಡೆ. ಅವರ ಮನೆಯೊಳಗೆ ಈ ರೀತಿ ನಡೆಯುತ್ತೆ ಅಂದ್ರೆ ನಮಗೂ ನಂಬಕ್ಕಾಗಲ್ಲ ಎಂದರು ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ.

ದಾವಣಗೆರೆ (ಆ.10): ಧರ್ಮಸ್ಥಳದ ಅರಣ್ಯದಲ್ಲಿ ಶವ ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿತೂರಿ ಮಾಡುವವರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಒತ್ತಾಯಿಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಜನಪರ ಕೆಲಸ ಮಾಡುತ್ತ ಬಂದಿದ್ದಾರೆ. ಸರ್ಕಾರ ಮಾಡುವ ಕೆಲಸ ಸ್ವಹಿತಾಸಕ್ತಿಯಿಂದ ಮಾಡುತ್ತಿದ್ದಾರೆ. ರೈತರಿಗೆ, ಬಡವರಿಗೆ, ಮಹಿಳೆಯರಿಗೆ ನೆರವಾಗುವ ಕಾರ್ಯಕ್ರಮ. ಆದ್ರೆ ಇಂದಿನ ವ್ಯವಸ್ಥೆಯಲ್ಲಿ ಇದು ದುಃಖಕರ ವಿಷಯ. ಯಾರ್ಯಾರು ಆರೋಪ ಮಾಡಿದ್ರು ಆ ಬಗ್ಗೆ SIT ತನಿಖೆ ನಡೀತಿದೆ. ಆದ್ರೆ ಆರೋಪ ಮಾಡುವವರಿಗೆ ಇಂತಹ ಮನಸ್ಥಿತಿ ಏಕೆ ಬಂತು ಗೊತ್ತಿಲ್ಲ ಎಂದರು.

ಹೆಣ್ಣುಮಕ್ಕಳು ಸ್ವಾವಲಂಬನೆಯಿಂದ ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು ಎಂಬ ಧ್ಯೇಯ ಇಟ್ಟುಕೊಂಡವರು ವೀರೇಂದ್ರ ಹೆಗ್ಗಡೆ. ಅವರ ಮನೆಯೊಳಗೆ ಈ ರೀತಿ ನಡೆಯುತ್ತೆ ಅಂದ್ರೆ ನಮಗೂ ನಂಬಕ್ಕಾಗಲ್ಲ. ಆದರೂ ಸಹ ಎಸ್ಐಟಿ ತನಿಖೆ ನಡೆಯುತ್ತಿದೆ. ಆರೋಪ ಮಾಡಿದವರು ತೋರಿಸಿದ ಜಾಗದಲ್ಲಿ ಏನು ಸಿಕ್ಕಿಲ್ಲ. ಯಾವುದೇ ಶವ ಆಗಲಿ, ಅವಶೇಷವಾಗಲಿ ಸಿಕ್ಕಿಲ್ಲ. ಇದರ ಹಿಂದೆ ಏನೋ ಪಿತೂರಿ ಇದೆ ಅಂತಾ ಗೊತ್ತಾಗುತ್ತಿದೆ. ದಯಮಾಡಿ ಸರ್ಕಾರ ಈ ಬಗ್ಗೆ ಪರಿಶೀಲನೆ ಮಾಡಬೇಕು. ಧರ್ಮಸ್ಥಳ ರಾಜ್ಯದ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ಪಿತೂರಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಿವಗಂಗಾ ಬಸವರಾಜ ಒತ್ತಾಯ ಮಾಡಿದರು.

ಶಾಮಿಯಾನ ವ್ಯವಹಾರಸ್ಥರು ಒಗ್ಗಟ್ಟಿನಿಂದ ದುಡಿಯಬೇಕು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವ್ಯಾಪಾರ- ವ್ಯವಹಾರಗಳನ್ನು ಮಾಡುವುದು ತಂಬ ಕಷ್ಟವಾಗಿದೆ. ವ್ಯಾಪಾರದ ಜೊತೆಗೆ ಒಬ್ಬರಿಗೊಬ್ಬರು ಸಹಕಾರ ಮನೋಭಾವನೆಗಳಿಂದ ನಿಮ್ಮ ವ್ಯವಹಾರಗಳನ್ನು ಮುಂದುವರಿಸಿಕೊಂಡು ಹೋದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಜೀವಿಸಲು ಸಾಧ್ಯ ಹೇಳಿದರು. ಪಟ್ಟಣದ ರುಕ್ಕುಮಯಿ ಕಲ್ಯಾಣ ಮಂಟಪದಲ್ಲಿ ತಾಲೂಕು ಶಾಮಿಯಾನ, ಸೌಂಡ್ಸ್ ಅಂಡ್ ಡೆಕೊರೇಷನ್ ಮತ್ತು ದೀಪಾಲಂಕಾರ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ನಾವು ಮಾಡುವ ವ್ಯವಹಾರಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆ ಮುಖ್ಯವಾಗಿದೆ. ತಾಲೂಕಿನಲ್ಲಿರುವ 190 ಶಾಮಿಯಾನದ ಅಂಗಡಿಯವರು ಸೇರಿ ಸಂಘ ಮಾಡಿಕೊಂಡಿರುವುದು ಶ್ಲಾಘನೀಯ ಎಂದರು. ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಶಾಮಿಯಾನ ಮಾಲೀಕರು ಸಂಘಟಿತರಾಗಿರುವುದು ಸಂತೋಷದ ವಿಷಯ. ನೀವು ಮಾಡುವ ವ್ಯಾಪಾರದಲ್ಲಿ ಪರಸ್ಪರ ಸ್ಪರ್ಧೆ ಮಾಡದೇ ಒಗ್ಗಟ್ಟಾಗಿರಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!