ಸರ್ಕಾರಿ ಜಾಹೀರಾತುಗಳಲ್ಲಿ ಮಾತ್ರ ಅಭಿವೃದ್ಧಿ: ಕುಮಾರಸ್ವಾಮಿ

By Kannadaprabha News  |  First Published Mar 25, 2023, 11:30 PM IST

ಜಾಹೀರಾತುಗಳಿಗೆ ನೀಡುವ ಆದ್ಯತೆ ಅಭಿವೃದ್ಧಿ ಕಾರ್ಯಗಳಿಗೆ ತೋರಬೇಕಿತ್ತು, ಬಿಜೆಪಿ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಕೊರತೆ: ಎಚ್ಡಿಕೆ ಟಾಂಗ್‌
 


ಯಾದಗಿರಿ(ಮಾ.25):  ಸರ್ಕಾರ ನೀಡುವ ಜಾಹೀರಾತುಗಳಲ್ಲಿ ಮಾತ್ರ ರಾಜ್ಯದ ಅಭಿವೃದ್ಧಿ ಕಾಣಿಸುತ್ತಿದೆಯೇ ಹೊರತು, ವಾಸ್ತವದಲ್ಲಿ ಅಲ್ಲ ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಟೀಕಿಸಿದರು. ಯಾದಗಿರಿ ಜಿಲ್ಲೆಯ ಗುರುಮಠಕಲ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಜಾಹೀರಾತುಗಳಲ್ಲಿ ಅಭಿವೃದ್ಧಿ ಬಿಂಬಿಸಲಾಗುತ್ತಿದೆ. ಜಾಹೀರಾತುಗಳಿಗೆ ನೀಡುವ ಆದ್ಯತೆ ಜನತೆ ಮೇಲೆ ಮತ್ತು ರಾಜ್ಯದ ಅಭಿವೃದ್ಧಿಪರ ತೋರಿಸಬೇಕಾಗಿತ್ತು ಎಂದು ಎಚ್ಡಿಕೆ ಬೇಸರ ವ್ಯಕ್ತಪಡಿಸಿದರು.

ಮೋದಿ, ಶಾ ಉದ್ಘಾಟನೆ ಹಾಸ್ಯಾಸ್ಪದ:

Latest Videos

undefined

ರಾಜ್ಯದಲ್ಲಿ ಒಬ್ಬ ಇಲಾಖೆಯ ಅಧಿಕಾರಿ ಮತ್ತು ಶಾಸಕರು ಮಾಡಬೇಕಾದ ಶಂಕುಸ್ಥಾಪನೆಗಳು ಚುನಾವಣೆ ಹಿನ್ನೆಲೆಯಲ್ಲಿ ಅಮಿತ ಷಾ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಉದ್ಘಾಟನೆ ಮಾಡುತ್ತಿರುವುದು ಚುನಾವಣೆ ಪ್ರಚಾರದ ಹೊಸ ದಾರಿಗೆ ನಾಂದಿ ಹಾಡಿದಂತಾಗಿದೆ ಎಂದು ಟೀಕಿಸಿದ ಎಚ್ಡಿಕೆ, ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರ ಎಂದು ಜಂಭ ಕೊಚ್ಚಿಕೊಳ್ಳುತ್ತಿದೆ. ಅಭಿವೃದ್ಧಿ ಕಡೆಗೆಣಿಸಿರುವ ಕಾರಣಕ್ಕಾಗಿ ಸ್ಥಳೀಯ ನಾಯಕರ ಮೇಲೆ ಭರವಸೆ ಇಲ್ಲದಂತಾಗಿ, ಕೇಂದ್ರದಿಂದ ಸಚಿವರು ಮತ್ತು ಪ್ರಧಾನಿಗಳು ಬರುತ್ತಿರುವುದು ನೋಡಿದರೆ ಬಿಜೆಪಿ ಹತಾಶೆಗೊಳಗಾಗಿದೆ ಎಂದೆನ್ನಿಸುತ್ತದೆ ಎಂದು ಲೇವಡಿ ಮಾಡಿದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಾದರಿ ಯೋಜನೆ ಜಾರಿ: ಬಂಡೆಪ್ಪ ಖಾಶೆಂಪೂರ್

ಬಿಜೆಪಿ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಕೊರತೆ:

ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಿದ ಎಚ್ಡಿಕೆ, ಕಾಂಗ್ರೆಸ್‌ ಚುನಾವಣೆ ಮುಂಚೆ ಆಪರೇಷನ್‌ ಹಸ್ತ ಮಾಡುತ್ತಿದ್ದರೆ, ಚುನಾವಣೆ ಫಲಿತಾಂಶ ಬಂದ ನಂತರ ಬಿಜೆಪಿ ಆಪರೇಷನ್‌ ಕಮಲ ಮಾಡುತ್ತಾ ಬಂದಿದೆ ಎಂದು ರಾಷ್ಟಿ್ರೕಯ ಪಕ್ಷಗಳಿಗೆ ಕುಟುಕಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ, ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲದಿಲ್ಲ ಎಂಬುದು ಗಿಮಿಕ್‌ ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿಯುವುದಿಲ್ಲ ಎಂದರು.

ಮೋದಿ ಹೇಳಿದ ಮೇಲೆ ಆಯೋಗ ಚುನಾವಣೆ ದಿನಾಂಕದ ನಿರ್ಧಾರ

ಯಾದಗಿರಿ: ಪ್ರಧಾನಿ ಮೋದಿ ಅವರ ಎಲ್ಲ ಕಾರ್ಯಕ್ರಮಗಳು ಮತ್ತು ಶಂಕುಸ್ಥಾಪನೆಗಳು ಮುಗಿದ ಮೇಲೆ ಅವರು ಹೇಳಿದ ದಿನಾಂಕಕ್ಕೆ ಚುನಾವಣೆ ಆಯೋಗ ಚುನಾವಣೆ ದಿನಾಂಕದ ಮಹೂರ್ತ ಫಿಕ್ಸ್‌ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ ಅವರು, ಮೋದಿ ಹೇಳುವ ತನಕ ಚುನಾವಣೆ ಮಹೂರ್ತ ನಿಗದಿ ಮಾಡುವುದಿಲ್ಲ ಎಂದು ಅವರು ಆರೋಪಿಸಿದರು. ಜೆಡಿಎಸ್‌ ಪಕ್ಷವು ಯುವಕರಿಗೆ ಹೆಚ್ಚಿನ ಟಿಕೆಟ್‌ ನೀಡಿ ಹೊಸ ರಾಜಕೀಯಕ್ಕೆ ಹೊಸ ಆದ್ಯತೆ ನೀಡುತ್ತಿದ್ದೇನೆ. ನಮ್ಮ ಸರ್ಕಾರ ಅಧಿ​ಕಾರಕ್ಕೆ ಬರುತ್ತದೆ ಎಂದರು.

click me!