ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿ ಜೊತೆಗೆ ಜೆಡಿಎಸ್ ಕೈಜೋಡಿಸಿ ಮೈತ್ರಿಗೆ ಮುಂದಾಗಿದೆ. ಈ ಮೈತ್ರಿಗೆ ಕೆಲ ಜೆಡಿಎಸ್ ನ ಕೆಲ ಶಾಸಕರು ವಿರೋಧ ವ್ಯಕ್ತಪಡಿಸಲು ಶುರು ಮಾಡಿದ್ದಾರೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ಸೆ.24): ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿ ಜೊತೆಗೆ ಜೆಡಿಎಸ್ ಕೈಜೋಡಿಸಿ ಮೈತ್ರಿಗೆ ಮುಂದಾಗಿದೆ. ಈ ಮೈತ್ರಿಗೆ ಕೆಲ ಜೆಡಿಎಸ್ ನ ಕೆಲ ಶಾಸಕರು ವಿರೋಧ ವ್ಯಕ್ತಪಡಿಸಲು ಶುರು ಮಾಡಿದ್ದಾರೆ. ಅದರಂತೆ ರಾಯಚೂರು ಜಿಲ್ಲೆ ದೇವದುರ್ಗ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಆಗಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಗೆಲುವು ಸಾಧಿಸಿದ್ದಾರೆ. ಸದಾಕಾಲವೂ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ VS ಜೆಡಿಎಸ್ ನಡುವೆ ತಿಕ್ಕಾಟಗಳು ನಡೆದಿವೆ. ಈಗ ಏಕಾಏಕಿ ಜೆಡಿಎಸ್ ವರಿಷ್ಠರು ಬಿಜೆಪಿ ಜೊತೆಗೆ ಮೈತ್ರಿಗೆ ಮುಂದಾಗಿದ್ದು ದೇವದುರ್ಗ ಜೆಡಿಎಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಮೈತ್ರಿ ವಿಚಾರದ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ. ಜಿ.ನಾಯಕ, ನಾನು ಯಾವಾಗಲೂ ಜೆಡಿಎಸ್ ಬೇರೆ ಪಕ್ಷದ ಬಗ್ಗೆ ಮಾತನಾಡಲ್ಲ. ಕ್ಷೇತ್ರದ ಜನರು ನನಗೆ ಜಾತ್ಯಾತೀತವಾಗಿ ಮತ ಕೊಟ್ಟು ಗೆಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಭಾವನಾತ್ಮಕ ಸಂಬಂಧಗಳು ಇವೆ. ಮೈತ್ರಿ ಬಗ್ಗೆ ದಿಢೀರ್ ಆಗಿ ನಾವು ಒಬ್ಬರೇ ಮಾತನಾಡಲು ಆಗಲ್ಲ. ಕ್ಷೇತ್ರದ ಜನರ ಅಭಿಪ್ರಾಯ ಪಡೆಯುತ್ತೇನೆ.ಕ್ಷೇತ್ರದ ಜನ ಅಭಿಪ್ರಾಯ ಪಡೆದು ದೇವೇಗೌಡರಿಗೆ ಹಾಗೂ ಕುಮಾರಣ್ಣಗೆ ಮಾಹಿತಿ ನೀಡುತ್ತೇವೆ. ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿಸಲು ಮನವಿ ಮಾಡಿದ್ದೇವೆ.
ಜೆಡಿಎಸ್ ಕಡೆಗಣಿಸುವ ಪಕ್ಷ ಅಲ್ಲ, ಮೈತ್ರಿ ಅನಿವಾರ್ಯ: ಕೋಟ ಶ್ರೀನಿವಾಸ ಪೂಜಾರಿ
ಆ ಕುರಿತು ಜೆಡಿಎಸ್ ವರಿಷ್ಠರು ತೀರ್ಮಾನ ಮಾಡುತ್ತಾರೆ. ನಮಗೆ ಬಿಜೆಪಿ ಜೊತೆಗೆ ಹೋಗಿ ಕೆಲಸ ಮಾಡಲು ಆಗಲ್ಲ ದೇವದುರ್ಗದಲ್ಲಿ ಮೈತ್ರಿಗೆ ನಾನು ಒಪ್ಪಿದ್ರೂ ಕ್ಷೇತ್ರದ ಜನರು ಒಪ್ಪಲ್ಲ ಹಿಂದಿನ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ದೂರ ಇಟ್ಟಿದ್ದೇವೆ ಈಗಲೂ ಬಿಜೆಪಿ ದೂರನೇ ಇಡುತ್ತವೆ ಎರಡನೇ ಮಾತೇ ಇಲ್ಲ ಇನ್ನೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಬಗ್ಗೆ ಅಸಮಾಧಾನವಿದೆ. ದೇವದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಸತತವಾಗಿ ನನಗೆ ಕಾಟ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಮತ್ತು ನನ್ನ ಮಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಬಿಜೆಪಿಯವರು ಚಪ್ಪಲಿಯಿಂದ ಹೊಡೆಯುವುದಾಗಿ ಹೇಳಿಕೆಗಳು ಕೊಟ್ಟಿದ್ದಾರೆ.
ದೇವದುರ್ಗದಲ್ಲಿ ಬಿಜೆಪಿಯವರು ಏನೇನೂ ಕಷ್ಟ ನೀಡಿದ್ದಾರೆ ಎಂಬುವುದು ನನ್ನ ವರಿಷ್ಠರಿಗೆ ಗೊತ್ತಿದೆ. ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಂಚರತ್ನ ವಾಹನದ ಮೇಲೆ ಕಲ್ಲು ತೂರಾಟ ಮಾಡಿದವರು ಇದೇ ಬಿಜೆಪಿಯವರು. ನಮ್ಮ ಪಕ್ಷದ ಬ್ಯಾನರ್ ಹರಿದವರು ಬಿಜೆಪಿಯವರು. ನನ್ನ ಪಕ್ಷ ನನಗೆ ದೇವರು, ನಮ್ಮ ವರಿಷ್ಠರ ಬಗ್ಗೆ ನಾನು ಮಾತನಾಡಲ್ಲ.ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಜೊತೆಗೆ ಯಾವುದೇ ಹೊಂದಾಣಿಕೆ ಇಲ್ಲ. ಜನರ ತೀರ್ಮಾನವೇ ನನ್ನ ತೀರ್ಮಾನ.ನನ್ನ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಹೊಂದಾಣಿಕೆ ಆಗಲ್ಲ. ನನಗೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ವರಿಷ್ಠರು ನನಗೆ ಹೇಳಲ್ಲ.
ನನ್ನ ಕಷ್ಟ ಏನು ಅಂತ ನಮ್ಮ ವರಿಷ್ಠರಿಗೆ ಗೊತ್ತು. ನನಗೆ ದೇವೇಗೌಡರು ಕಾರ್ಯಕರ್ತೆಯಾಗಿ ನೋಡಿಲ್ಲ. ದೇವೇಗೌಡರು ನನಗೆ ಮಗಳ ಸಮಾನವಾಗಿ ನೋಡಿದ್ದಾರೆ. ನನಗೆ ನೋವು ಆದಾಗ ಅವರು ಕಷ್ಟ ಮತ್ತು ನೋವು ಪಟ್ಟಿದ್ದಾರೆ. ನನ್ನ ಪಾರ್ಟಿ ಯಾವತ್ತೂ ನನಗೆ ಟಾರ್ಗೆಟ್ ಮಾಡಲ್ಲ. ನೀನೂ ಹೇಗೆ ಇರುತ್ತೋ ಹಾಗೇ ಇರು ಎಂದು ಹೇಳಿದ್ದಾರೆ. ಇನ್ನೂ ದೇವದುರ್ಗ ವಿಧಾನಸಭಾ ಚುನಾವಣೆಯಲ್ಲಿ ಕುಮಾರಣ್ಣಗೆ ಚಾಲೆಂಜ್ ಹಾಕಿದ ವ್ಯಕ್ತಿ ಇಲ್ಲಿ ಇದ್ದಾನೆ. ಕುಮಾರಣ್ಣನಿಗೆ ಕೆಟ್ಟದಾಗಿ ಬೈದ ವ್ಯಕ್ತಿ ಜೊತೆಗೆ ನಾನು ಮೈತ್ರಿ ಮಾಡಿಕೊಳ್ಳಬೇಕಾ ಅದು ಸಾಧ್ಯನೇ ಇಲ್ಲ. ನನಗೆ ಬೈದರೇ ನಾನು ಸಹಿಸಿಕೊಳ್ಳುವೆ. ದೇವೇಗೌಡರ ಕುಟುಂಬಕ್ಕೆ ಬೈದ ವ್ಯಕ್ತಿಯ ಪಕ್ಷದೊಂದಿಗೆ ನಾನು ಹೊಂದಾಣಿಕೆ ಆಗುವುದಿಲ್ಲ. ಇವೂ ಎಲ್ಲಾ ಮಾತನಾಡುತ್ತಾ ಹೋಗಿದ್ರೆ ನಮಗೂ ನೋವು ಆಗುತ್ತೆ,
ಮಹಿಳೆಯರಿಗೆ ಮೀಸಲಾತಿ ನೀಡುವಲ್ಲಿ ಕರ್ನಾಟಕ ಮೊದಲ ರಾಜ್ಯ: ವೀರಪ್ಪ ಮೊಯಿಲಿ
ದೇವದುರ್ಗದಲ್ಲಿ ನ ಬಿಜೆಪಿಯ ಆ ವ್ಯಕ್ತಿ ( ಮಾಜಿ ಶಾಸಕ ಕೆ.ಶಿವನಗೌಡ ನಾಯಕ) ಕುಮಾರಣ್ಣಗೆ ಬಗ್ಗೆ ಹಗುರವಾಗಿ ಮಾತನಾಡಿದಕ್ಕೆ ಜನರು ನನಗೆ ಗೆಲ್ಲಿಸಿದ್ದಾರೆ. ಜನರ ಭಾವನಾತ್ಮಕ ಸಂಬಂಧಗಳಿಗೆ ನಾನು ದಕ್ಕೆ ತರಲ್ಲ. ಆ ವ್ಯಕ್ತಿಯಿಂದ ಪಕ್ಷಕ್ಕೂ ಹಾಗೂ ನನಗೂ ದಕ್ಕೆ ಆಗಿದೆ. ನಮ್ಮ ಕುಟುಂಬದ ಮೇಲೆಯೂ ಹಲ್ಲೆಗಳು ಆಗಿವೆ. ಇವು ಎಲ್ಲವೂ ಮರೆಯಲು ಸಾಧ್ಯವಿಲ್ಲ. ರಾಷ್ಟ್ರೀಯ ಪಕ್ಷದ ಬಗ್ಗೆ ನಾನು ಏನು ಮಾತನಾಡಲ್ಲ. ಅವರದೇ ಆದ ಸಿದ್ಧಾಂತ ಇರುತ್ತೇ ಅವರೂ ಹಾಗೇ ನಡೆದುಕೊಳ್ಳುತ್ತಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಇರಬಹುದು. ಕ್ಷೇತ್ರದ ಜನರು ಮನಸ್ಸಿಗೆ ಧಕ್ಕೆ ಆಗದಂತೆ ನಾನು ನಡೆದುಕೊಳ್ಳುತ್ತೇನೆ. ಎಲ್ಲಿ ಬೇಕಾದರೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಲಿ ನಮ್ಮ ದೇವದುರ್ಗದಲ್ಲಿ ಮಾತ್ರ ಮೈತ್ರಿ ಆಗಲ್ಲವೆಂದು ಕಡ್ಡಿ ಮುರಿದಂತೆ ದೇವದುರ್ಗ ಶಾಸಕಿ ಕರೆಮ್ಮ ಹೇಳಿದರು.