
ಹುಬ್ಬಳ್ಳಿ(ಅ.20): ಬೆಂಗಳೂರು ಬಳಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ಸ್ಥಾಪನ ನಿರ್ಧಾರಕ್ಕೆ ಸ್ವಾಗತ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಂಧ್ರ ಮತ್ತು ತಮಿಳುನಾಡಿಗೆ ಅನುಕೂಲವಾಗಿದೆ. ಬಿಡದಿ ಕಡೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸೋ ಚಿಂತನೆ ನಡೆದಿದೆ. ಇದರ ಬಲಿಗೆ ತುಮಕೂರಿನ ಶಿರಾ ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಬೇಕು. ಅದರೊಂದಿಗೆ ಉತ್ತರ ದಿಕ್ಕಿನ ಕಡೆ ಅಭಿವೃದ್ಧಿಯಾಗಲಿದೆ. ಉತ್ತರ ಕರ್ನಾಟಕದ ಜನತೆಗೂ ಅನುಕೂಲವಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅರವಿಂದ ಬೆಲ್ಲದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕುಣಿಕೆ ಗಟ್ಟಿ ಆಗ್ತಾ ಹೋಗ್ತಿದೆ. ಈಗಾಗಲೇ ಇಡಿ ಮುಡಾ ಹಗರಣದ ತನಿಖೆ ನಡೆಸಿದೆ. ಕಾನೂನು ಕುಣಿಕೆ ಗಟ್ಟಿಯಾಗ್ತಿದ್ದಂತೆಯೇ ರಾಜೀನಾಮೆ ಕೊಡೋದು ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇ ಕೊಡ್ತಾರೆ. ಹೀಗಾಗಿಯೇ ಪರಮೇಶ್ವರ್ ಮತ್ತಿತರರು ಮೇಲ್ನೋಟಕ್ಕೆ ಸಿಎಂ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ. ಒಳಗೊಳಗೆ ಸಿಎಂ ಕುರ್ಚಿಗೆ ಟವೆಲ್ ಹಾಕಿದ್ದಾರೆ. ದಲಿತ ಸಿಎಂ ಇತ್ಯಾದಿ ಅವರಿಗೇ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ಉಪಚುನಾವಣೆಯಲ್ಲಿ ನಿಲ್ಲೋದು ಮುಖ್ಯವಲ್ಲ, ಗೆಲ್ಲೋದು ಮುಖ್ಯ
ಉಪಚುನಾವಣೆಯಲ್ಲಿ ನಿಲ್ಲೋದು ಮುಖ್ಯವಲ್ಲ, ಗೆಲ್ಲೋದು ಮುಖ್ಯ. ಹೀಗಾಗಿ ಚನ್ನಪಟ್ಟಣಕ್ಕೆ ಸಿ.ಪಿ.ಯೋಗೇಶ್ವರ್‌ಗೆ ಟಿಕೇಟ್ ನೀಡಬೇಕು ಎಂದು ಹೇಳುವ ಮೂಲಕ ಮತ್ತೊಮ್ಮೆ ಸಿಪಿವೈ ಪರ ಅರವಿಂದ ಬೆಲ್ಲದ ಬ್ಯಾಟಿಂಗ್ ಮಾಡಿದ್ದಾರೆ.
ಚುನಾವಣೆಗೆ ನಿಲ್ಲೋದಕ್ಕಿಂತ ಗೆಲ್ಲೋದು ಮುಖ್ಯ ಆಗುತ್ತೆ. ಸಿ.ಪಿ. ಯೋಗೇಶ್ವರ್ ಗೆಲ್ಲುವ ಅಭ್ಯರ್ಥಿ ಇದ್ದಾರೆ. ಜನರ ಪ್ರೀತಿ ಸಿ.ಪಿ.ಯೋಗೇಶ್ವರ್ ಮೇಲಿದೆ. ಕುಮಾರಸ್ವಾಮಿ ಅತ್ಯಂತ ಒಳ್ಳೆಯ ನಿರ್ಧಾರ ತೆಗೆದುಕೊಳ್ತಾರೆ. ಅಲ್ಲಿ ಯಾರು ಅಭ್ಯರ್ಥಿ ಆಗಬೇಕು ಅಂತ ಕುಮಾರಸ್ವಾಮಿ ನಿರ್ಧರಿಸ್ತಾರೆ. ಕುಮಾರಸ್ವಾಮಿ ಅವರು ಒಳ್ಳೆಯ ನಿರ್ಧಾರ ತಗೋತಾರೆ ಅನ್ನೋ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ನಾವೆಲ್ಲಾ ಕೂಡಿ ಎಲ್ಲಾ ಕಡೆಗಳಲ್ಲೂ ಎನ್ ಡಿ ಎ ಅಭ್ಯರ್ಥಿಗಳನ್ನೇ ಹಾಕ್ತೇವೆ. ಉಪ ಚುನಾವಣೆಯಲ್ಲಿ ಏಕ ಪಕ್ಷೀಯವಾಗಿ ಅಭ್ಯರ್ಥಿ ಆಯ್ಕೆ ನಡೆದಿಲ್ಲ. ಬೊಮ್ಮಾಯಿ ಪುತ್ರನಿಗೆ ಟಿಕೆಟ್ ಕೊಟ್ಟಿರೋದ್ರಿಂದ ಕುಟುಂಬ ರಾಜಕಾರಣ ಅನ್ನೋಕೆ ಅಗಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅಭಿಪ್ರಾಯ ತೆಗೆದುಕೊಂಡಿದ್ರು. ಉಪಚುನಾವಣೆಯಲ್ಲಿ ಗೆಲುವು ಮುಖ್ಯವಾಗಿದೆ. ಎಲ್ಲ ಜನರ, ಕಾರ್ಯಕರ್ತರ ಅಭಿಪ್ರಾಯ ಸಹ ಕೇಳಿದ್ದಾರೆ. ಅದರ ಮೇಲೆ ಪಕ್ಷ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯ ನಾಯಕತ್ವ ಜನರು ಸೇರಿ ಮಾಡಿದ್ದಲ್ಲ. ಅವರೇ ನಾಮಿನೆಟ್ ಮಾಡ್ತಾರೆ. ನಮ್ಮ ಪಕ್ಷ ಡೆಮಾಕ್ರೆಟಿಕ್ ಆಗಿ ನಡೀತಾ ಇದೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣದ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.