ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬೇಕಾ.? ಕಲ್ಲು ಪ್ರಕೃತಿ, ಕಡಿದರೆ ಆಕೃತಿ. ಈ ಬಂಡೆ ಸಿದ್ದರಾಮಯ್ಯ ಜೊತೆಗೆ ಇದೆ. ಇನ್ನೂ 10 ವರ್ಷ ನೀವೇನೂ ಮಾಡಿಕೊಳ್ಳಲಾಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಮೈಸೂರು (ಆ.09): ಮಿಸ್ಟರ್ ಕುಮಾರಸ್ವಾಮಿ, ಅಶೋಕಾ, ವಿಜಯೇಂದ್ರ ನಿಮಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬೇಕಾ.? ಕಲ್ಲು ಪ್ರಕೃತಿ. ಕಡಿದರೆ ಆಕೃತಿ. ಈ ಬಂಡೆ ಸಿದ್ದರಾಮಯ್ಯ ಜೊತೆಗೆ ಇದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಜನಾಂದೋಲನಾ ಸಭೆಯಲ್ಲಿ ದೇಶಕ್ಕೆ ದೊಡ್ಡ ಸಂದೇಶ ಕೊಡ ಬೇಕಾಗಿದೆ. ಅಂದು ಬ್ರಿಟಿಷ್ ರ ವಿರುದ್ಧ ಹೋರಾಟ ಮಾಡಿದ್ವಿ. ಅಂದು ಗಣಿಧಣಿಗಳ ವಿರುದ್ಧ ಪಾದಯಾತ್ರೆ ಮಾಡಿದ್ವಿ. ಬಳ್ಳಾರಿ ಸಮಾವೇಶ ಮಾಡಿದ್ವಿ. ಇಂದು ಜೆಡಿಎಸ್ - ಬಿಜೆಪಿ ವಿರುದ್ಧ ಹೋರಾಟ ಮಾಡಿ ಸಂವಿಧಾನ ಉಳಿಸಲು ಹೋರಾಟ. ಬಡವರ ಪರವಾದ ಸರ್ಕಾರ ಉಳಿಸಲು, ಅನ್ಯಾಯದ ವಿರುದ್ಧ ಹೋರಾಟ ಮಾಡ್ತಾ ಇದ್ದೇವೆ.. ಬಿಜೆಪಿ ಮಾಡ್ತಾ ಇರೋದು ಪಾಪದ ಯಾತ್ರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಭೇಟಿಗೆ ಬಂದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ವಾಹನದಲ್ಲಿ ಹೆಬ್ಬಾವು!
ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸವಾಗಿದೆ. ಈ ಕಾರ್ಯಕ್ರಮ ಸಂವಿಧಾನದ ರಕ್ಷಣೆ ಸಲುವಾಗಿ. ಜನರ ಸಲುವಾಗಿ ಹೋರಾಟ. 10 ತಿಂಗಳಲ್ಲಿ ಸರ್ಕಾರ ತೆಗೆಯುತ್ತೇವೆ ಅಂತ ಒಂದು ಷಡ್ಯಂತ್ರ ನಡೆಯುತ್ತಿದೆ. ಅದಕ್ಕಾಗಿ ಈ ಹೋರಾಟ. ಮಿಸ್ಟರ್ ಕುಮಾರಸ್ವಾಮಿ, ಅಶೋಕಾ, ವಿಜಯೇಂದ್ರ... ನಿಮಗೆ ಸಿದ್ದರಾಮಯ್ಯ ರಾಜೀನಾಮೆ ಬೇಕಾ..? ಕಲ್ಲು ಪ್ರಕೃತಿ, ಕಡಿದರೆ ಆಕೃತಿ. ಈ ಬಂಡೆ ಸಿದ್ದರಾಮಯ್ಯ ಜೊತೆಗೆ ಇದೆ. ನೀವು ಆಪರೇಷನ್ ಕಮಲ ಮಾಡಿ ಸರ್ಕಾರ ತೆಗೆದ್ರಿ. ಕುಮಾರಸ್ವಾಮಿ ನೀವು 19 ಸೀಟ್ ಮಾತ್ರ ಗೆದ್ರಿ. ನನ್ನ ನೇತೃತ್ವದಲ್ಲಿ 136 ಸೀಟ್ ಗೆದ್ದಿದ್ದೇವೆ. ನಮ್ಮ ಸರ್ಕಾರದ ಎನು ಮಾಡಲು ಆಗಲ್ಲ ಎಂದು ಹೇಳಿದರು.
ರಾಜ್ಯದಲ್ಲಿ 136 ಶಾಸಕರು , ಜನರು ಸಿಎಂ ಜೊತೆಗೆ ಇದ್ದಾರೆ. ನಿಮ್ಮ ಪಾಪದ ಯಾತ್ರೆಯಿಂದ ಎನು ಆಗಲ್ಲ.. ಸಿದ್ದರಾಮಯ್ಯ ಜೊತೆಗೆ ನಾನು ಇದ್ದೇನೆ. ಮೇಕೆದಾಟು ಪಾದಯಾತ್ರೆ ಮಾಡಿದಾಗ ಕೇಸ್ ಹಾಕಿದ್ರಿ. ನಿಮ್ಮ ಕೇಸ್ ಗೆ ಹೆದರಿಲ್ಲ ನಾವು. ನಾಡಿನ ನೀರಿಗಾಗಿ ನಾವು ಹೋರಾಟ ಮಾಡಿದ್ವಿ. ನಿಮ್ಮ ಪಾದಯಾತ್ರೆ ಯಾಕೆ...? 10 ತಿಂಗಳಲ್ಲಿ ಸರ್ಕಾರ ಅಲ್ಲಾಡಿಸುತ್ತೇವೆ ಅನ್ನೋ ಭ್ರಮೆ ಬಿಡಿ. 10 ವರ್ಷ ಆದ್ರೂ ಅದು ಸಾಧ್ಯ ಇಲ್ಲ. ಮೂಡಾದಲ್ಲಿ ಹಗರಣ ಆಗಿಲ್ಲ. ನ್ಯಾಯಬದ್ಧ ಬಂದಿರುವ ಜಮೀನು ಅದು. ಸಿದ್ದರಾಮಯ್ಯ ಕಾಲದಲ್ಲಿ ಸೈಟ್ ಕೊಟ್ಟಿದ್ದಲ್ಲ. ಬಿಜೆಪಿ ಕಾಲದಲ್ಲಿ ಸೈಟ್ ಕೊಟ್ಟಿರೋದು ಎಂದು ತಿಳಿಸಿದರು.
ಸಿಎಂಗೆ ನಾನೇ ಬಂಡೆ, ನಾನೇ ಬಲ. ನಾನು ಯಾವತ್ತೂ ಸಿದ್ದು ಪರ: ಡಿಕೆಶಿ
ಕುಮಾರಸ್ವಾಮಿ ಕ್ಲೀನ್ ಅಂತೆ, ಎನ್ ಕ್ಲೀನ್ ಸ್ವಾಮಿ. ಕುಮಾರಸ್ವಾಮಿಯ 50 ಡಿನೋಟಿಫಿಕೇಷನ್ ಕೇಸ್ ಬಗ್ಗೆ ನನಗೆ ದಾಖಲೆ ಕೊಟ್ಟಿದ್ದಾರೆ. ಅಧಿಕಾರಿಗಳು ದಾಖಲೆ ಕೊಟ್ಟಿದ್ದಾರೆ. ಮುಂದೆ ಹೊರಗೆ ತರುತ್ತೇನೆ ಸ್ವಾಮಿ, ಈಗಲ್ಲ. ಇನ್ನು ವಿಜಯೇಂದ್ರ ಲಕ್ಷ್ಮೀ ವಿಲಾಸ ಬ್ಯಾಂಕ್ ಗೆ RTGS ಮಾಡಿದ್ದು ಯಾರಪ್ಪ..? ಜನತಾದಳ ಎಲ್ಲಾ ನಾಯಕರನ್ನು ಮುಗಿಸಿದ್ರು. 17 ಜನ ಸಂಸದರು ಇದ್ದರು. ಯಾರು ಅವರ ಜೊತೆ ಇಲ್ಲ. ಮಕ್ಕಳಿಗೆ ಅನುಕೂಲ ಮಾಡಲು ಎಲ್ಲರನ್ನೂ ಮುಗಿಸಿದ್ದಾರೆ. ಅಂತವರು ನನ್ನ, ಸಿದ್ದರಾಮಯ್ಯನ ಸುಮ್ಮನೆ ಬಿಡ್ತಾರಾ. ಹಿಂದುಳಿದ ನಾಯಕ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರ ಜೊತೆ ನಾವು ಇದ್ದೇವೆ. ನುಡಿದಂತೆ ನಡೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.