Assembly Election: ಮಂಡ್ಯ ಕಾಂಗ್ರೆಸ್ ಟಿಕೆಟ್ ಗೆ ಡಿಮ್ಯಾಂಡ್ : ಜೆಡಿಎಸ್ ಮುಖಂಡ ಸೇರಿ ಹಲವರು ಅರ್ಜಿ

By Ravi JanekalFirst Published Nov 17, 2022, 11:51 AM IST
Highlights

ವಿಧಾನಸಭಾ ಚುನಾವಣೆಗೆ ಕೇವಲ 4-5 ತಿಂಗಳಷ್ಟೇ ಬಾಕಿ ಇದೆ. ಈಗಾಗಲೇ ಸಕ್ಕರೆ ನಾಡು ಮಂಡ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು, ಎಲ್ಲಾ ಪಕ್ಷಗಳಲ್ಲೂ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.

ಮಂಡ್ಯ (ನ.17) : ವಿಧಾನಸಭಾ ಚುನಾವಣೆಗೆ ಕೇವಲ 4-5 ತಿಂಗಳಷ್ಟೇ ಬಾಕಿ ಇದೆ. ಈಗಾಗಲೇ ಸಕ್ಕರೆ ನಾಡು ಮಂಡ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು, ಎಲ್ಲಾ ಪಕ್ಷಗಳಲ್ಲೂ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.  ಇನ್ನು ಕೆಪಿಸಿಸಿ(kpcc) ಸೂಚನೆಯಂತೆ ಮಂಡ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧೆ ಬಯಸಿ ಹಲವು ಮುಖಂಡರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲೇ 14 ಮಂದಿ ಆಕಾಂಕ್ಷಿಗಳು ಬಿ-ಫಾರಂಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದು, ಜೆಡಿಎಸ್‌ ಮುಖಂಡರಾಗಿದ್ದ ಕೀಲಾರ ರಾಧಾಕೃಷ್ಣ ಕಾಂಗ್ರೆಸ್‌ನಿಂದ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಟಿಕೆಟ್ ಪೈಪೋಟಿಯಿಂದ ರಾಜ್ಯ ಕೈ ನಾಯಕರಿಗೆ ತಲೆನೋವು

ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಸ್ಪರ್ಧೆ ಮಾಡಲು ಆಕಾಂಕ್ಷಿಗಳ ದಂಡೆ ಸಿದ್ಧವಾಗಿ ನಿಂತಿದೆ. ಈವರೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಬಿ ಫಾರಂಗಾಗಿ 14 ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಸದ್ಯ ಕೆಪಿಸಿಸಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಮಾಡಿರುವುದರಿಂದ ಮತ್ತಷ್ಟು ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. 

ಮಂಡ್ಯದ ದೇವಾಲಯದಲ್ಲಿ ವಿಸ್ಮಯ: ಕಳ್ಳತನ ತಪ್ಪಿಸಿದ ಸರ್ಪ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕಳೆದ ಬಾರಿ ಚುನಾವಣೆಯ ಪರಾಜಿತ ಅಭ್ಯರ್ಥಿ ಗಣಿಗ ರವಿಕುಮಾರ್, 
ಮನ್ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಮಾಜಿ ಸಚಿವ ಆತ್ಮಾನಂದ, ಮಾಜಿ ಶಾಸಕ ಎಚ್.ಬಿ.ರಾಮು, ಡಾ.ಕೃಷ್ಣ, ಅಮರಾವತಿ ಚಂದ್ರಶೇಖರ್ ಸೇರಿ 14 ಮಂದಿಯಿಂದ ಅರ್ಜಿ ಸಲ್ಲಿಕೆಯಾಗಿದೆ. ಈ ಪೈಕಿ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ಕೀಲಾರ ರಾಧಾಕೃಷ್ಣರಿಂದಲೂ ಕೈ ಟಿಕೆಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಜೆಡಿಎಸ್‌ನಿಂದ ಹೊರಬಂದು ಕಾಂಗ್ರೆಸ್‌ನಿಂದ ಸ್ಪರ್ಧೆ ಬಯಸಿರುವುದು ಗಮನಾರ್ಹ.

2 MLC ಚುನಾವಣೆ ಬಳಿಕ ಸ್ಪರ್ಧೆಗೆ ಹೆಚ್ಚಿದ ಉತ್ಸಾಹ

ಹೀಗೆ ಮಂಡ್ಯದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಿದೆ. ಅದು ಕಳೆದ ಎರಡು MLC ಚುನಾವಣೆಯ ಗೆಲುವು ಹಾಗೂ ಭಾರತ್ ಜೋಡೋ ಯಾತ್ರೆ(Bharat Jodo Yatre) ಕಾಂಗ್ರೆಸ್‌(Congress)ನ ಅಭೂತಪೂರ್ವ ಗೆಲುವಿನ ಬಳಿಕ ಟಿಕೆಟ್ ಗೆ ಭಾರೀ ಫೈಟ್ ಏರ್ಪಟ್ಟಿದೆ. ಇದರಿಂದ  ರಾಜ್ಯ ಕೈ ನಾಯಕರಿಗೂ ತಲೆನೋವು‌ ಶುರುವಾಗಿದ್ದು, ಒಬ್ಬರಿಗೆ ಟಿಕೆಟ್ ನೀಡಿ ಉಳಿದವರು ಬಂಡಾಯ ಹೇಳದಂತೆ ಸಮಾಧಾನ ಮಾಡಬೇಕಾದ ಸ್ಥಿತಿ ಎದುರಾಗಿದೆ.‌ ಇಲ್ಲವಾದರೆ ಬಂಡಾಯ ಉದ್ಭವಿಸಿದ್ರೆ ಜೆಡಿಎಸ್ ಗೆ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಮಂಡ್ಯದಲ್ಲಿ ಮುಸ್ಲಿಂ, ಪರಿಶಿಷ್ಟ ಜಾತಿ, ಕುರುಬ ಮೂರು ಸಮುದಾಯದಿಂದ 75 ಸಾವಿರ ವೋಟ್ ಬ್ಯಾಂಕ್ ಇದೆ. ಜಾತಿವಾರು ಲೆಕ್ಕಾಚಾರದಲ್ಲಿ ಮಂಡ್ಯ ಕ್ಷೇತ್ರ ಕಾಂಗ್ರೆಸ್ ಗೆಲುವಿಗೆ ಸುಲಭವಾಗಿರುವ ವಿಧಾನಸಭಾ ಕ್ಷೇತ್ರ ಹಾಗಾಗಿಯೇ ಇಲ್ಲಿ ಸ್ಪರ್ಧೆಗೆ ತಾ ಮುಂದೂ ನಾ ಮುಂದು ಎಂದು ಮುಂದೆ ಬರ್ತಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ : ನಿಖಿಲ್‌

ನಾಗಮಂಗಲ, ಮದ್ದೂರು ಕ್ಷೇತ್ರದಿಂದ ಕೈ ಟಿಕೆಟ್ ಗಿಲ್ಲ ಬೇಡಿಕೆ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿ-ಫಾರಂ ಪಡೆಯಲು 14 ಅರ್ಜಿ ಸಲ್ಲಿಕೆಯಾದರೆ, ನಾಗಮಂಗಲ, ಮದ್ದೂರಿನಲ್ಲಿ ಟಿಕೆಟ್ ಬೇಡಿಕೆಯೇ ಇಲ್ಲದಂತಾಗಿದೆ. ನಾಗಮಂಗಲದಿಂದ ಕೆಪಿಸಿಸಿ ಉಪಾಧ್ಯಕ್ಷ ಚಲುವರಾಯಸ್ವಾಮಿ ಮಾತ್ರ ಬಿ ಫಾರಂಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಮದ್ದೂರಿನಲ್ಲಿ 2, ಕೆ.ಆರ್.ಪೇಟೆಯಲ್ಲಿ 6, ಮಳವಳ್ಳಿ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದಿಂದ ತಲಾ ಮೂರು ಅರ್ಜಿ ಸಲ್ಲಿಕೆ.

click me!