ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ತಡೆಯಲು ಜಲಾಶಯಗಳ ನಿರ್ವ ಹಣಾ ವ್ಯವಸ್ಥೆ ಬದಲಾವಣೆಗೆ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಮಿತಿ ರಚನೆಗೆ ಸಂಪುಟ ಅನುಮೋದಿಸಿದೆ.
ಬೆಂಗಳೂರು (ಮಾ.28): ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ತಡೆಯಲು ಜಲಾಶಯಗಳ ನಿರ್ವ ಹಣಾ ವ್ಯವಸ್ಥೆ ಬದಲಾವಣೆಗೆ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಮಿತಿ ರಚನೆಗೆ ಸಂಪುಟ ಅನುಮೋದಿಸಿದೆ. ಜತೆಗೆ, ಪ್ರಕೃತಿ ವಿಕೋಪ' ದಿ೦ದ ಆಗುವ ಅನಾಹುತ ತಡೆಯಲು ರಾಜ್ಯದಲ್ಲಿ ವಿಪತ್ತು ಉಪಶಮನ ನಿಧಿ ಅಡಿಯಲ್ಲಿ 194.80 ಕೋಟಿ ರು. ಮೊತ್ತದ 330 ಉಪಶಮನ ಕಾಮಗಾರಿ ಅನುಷ್ಠಾನಗೊಳಿಸಲು ಡೀಸಿಗಳಿಗೆ ಅನುಮತಿಸಲೂ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಡೆ ಯಲು ಜಲಾಶಯಗಳ ನಿರ್ವಹಣೆ ವ್ಯವಸ್ಥೆ ಯಲ್ಲಿ ಬದಲಾವಣೆ ತರಲಾಗುತ್ತಿದೆ. ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆ ಯಲ್ಲಿ ತಜ್ಞರನ್ನು ಒಳಗೊಂಡಸಮಿತಿ ರಚಿಸಲಾಗುತ್ತಿದೆ. ಸಮಿತಿಗೆ ಜಲಾಶಯಗಳ ನೀರಿನ ಮಟ್ಟ, ಮತ್ತಿತರ ವಿವರಗಳನ್ನು ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ನೀಡಲು ನಿರ್ಧಾರವಾಗಿದೆ. ಪ್ರಕೃತಿ ವಿಕೋಪದಿಂದ ಉಂಟಾಗುವ ವಿಪತ್ತುಗಳ ನಿರ್ವಹಣೆಗೆ ರಾಜ್ಯ ವಿಪತ್ತು ಉಪಶಮನ ನಿಧಿಯ 194.80 ಕೋಟಿ ರು. ಬಳಸಿಕೊಂಡು 330 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಜವಾಬ್ದಾರಿ ಡೀಸಿಗೆ ನೀಡಲಾಗಿದೆ ಎಂದರು. ಸಿಂಧಗಿ, ಆನೇಕಲ್, ಹೊಸಕೋಟೆ, ಮಳವಳ್ಳಿ ಹಾಗೂ ಚಿಕ್ಕಮಗಳೂರಿನಲ್ಲಿ ಪ್ರಜಾಸೌಧ ಹೊಸದಾಗಿ ನಿರ್ಮಾಣ ಮತ್ತು ಬಾಕಿ ಕಾಮಗಾರಿಗಳ ಪೂರ್ಣಕ್ಕೆ 119.23 ಕೋಟಿ ಅನುದಾನ ನೀಡಲು ಅನುಮೋದನೆ ನೀಡಲಾಗಿದೆ. ಸಮಾಜಕ ಲ್ಯಾಣ ಇಲಾಖೆ ಸೇರಿ ದಂತೆ ಅದಕ್ಕೆ ಸಂಬಂ ಧಿಸಿದ ನಿಗಮಗಳ ಕಚೇರಿ ಗಳನ್ನು ಒಂದೆಡೆಗೆ ತರುವ ಉದ್ದೇಶದೊಂದಿಗೆ ವಿಕಾಸಸೌಧದ ಮುಂಭಾಗದಲ್ಲಿನ 25.89 ಗುಂಟೆ ಖಾಲಿ ಜಾಗದಲ್ಲಿ 87 ಕೋಟಿ ರು. ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸ್ಫೂರ್ತಿ ಸೌಧ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಅಡ್ಜಸ್ಟ್‌ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ: ಶಾಸಕ ಯತ್ನಾಳ್
ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ: ಆರೋಗ್ಯ ಸೇವೆ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಹಲವು ದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಿದ್ದು, ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಸೇವೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಕೆಲ ಮಾರ್ಪಾಡು ಮಾಡಿ ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು. ಔಷಧ ಕೊರತೆ ನೀಗಿಸಲು ಮಾಹಿತಿ, ಶಿಕ್ಷಣ, ಸಂವಹನ (ಐಇಸಿ) ಚಟುವಟಿಕೆಗೆ ಹಂಚಿಕೆಯಾಗಿದ್ದ ಅನುದಾನದಲ್ಲಿ 7045 ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಅಗತ್ಯವಿರುವ 59 ವಿವಿಧ ಔಷಧಿಗಳನ್ನು 16.91 ಕೋಟಿ ರು. ವೆಚ್ಚದಲ್ಲಿ ಖರೀದಿಸಲೂ ಅನುಮೋದಿಸಲಾಗಿದೆ ಎಂದು ವಿವರಿಸಿದರು.