
ಬಾಗಲಕೋಟೆ (ಆ.25) : ಆರೇಳು ದಶಕಗಳ ಕಾಲ ದೇಶವನ್ನಾಳಿದ ಸದ್ಯದ ಕಾಂಗ್ರೆಸ್ ಪಕ್ಷ ನಾವಿಕನಿಲ್ಲದ ಹಡಗಿನಂತಾಗಿದೆ ಎಂದು ಹೇಳಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಸದ್ಯ ಕಾಂಗ್ರೆಸ್ ಅನ್ನು ಪುನಃಶ್ಚೇತನ ಮಾಡುವ ಶಕ್ತಿ ಯಾರಲ್ಲೂ ಇಲ್ಲ ಎಂದಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಸ್ವತಂತ್ರ ಪಕ್ಷಗಳು ಸೇರಿದಂತೆ ಎಲ್ಲರೂ ಸಂಸ್ಥೆಯ ರೂಪದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು.
ಕರ್ನಾಟಕ ಸಿಂಗಂ’, ಮಾಜಿ IPS ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆ!...
ಮಹಾತ್ಮ ಗಾಂಧೀಜಿಯವರು ಆಗ ಪಕ್ಷದ ಜೊತೆಗಿದ್ದರು. ನಂತರದ ದಿನಗಳಲ್ಲಿ ಸ್ವಾರ್ಥ ರಾಜಕಾರಣಕ್ಕಾಗಿ ಪಕ್ಷವನ್ನು ಬಳಿಸಿಕೊಂಡಿದ್ದರ ಪರಿಣಾಮ ಇಂದು ಆ ಪಕ್ಷದ ಜೊತೆ ಯಾರೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿ ನೀವೇ ಮುಂದುವರಿಯಿರಿ
ಕಾಂಗ್ರೆಸ್ ಪಕ್ಷವನ್ನು ನೀವೇ ಮುನ್ನಡೆಸಬೇಕು. ನೀವು ಜವಾಬ್ದಾರಿ ಹಸ್ತಾಂತರಿಸಲು ಬಯಸಿದರೆ ಜವಾಬ್ದಾರಿ ಸ್ವೀಕರಿಸುವಂತೆ ರಾಹುಲ್ ಗಾಂಧಿ ಅವರನ್ನು ಮನವೊಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಗಾಂಧಿ ಕುಟುಂಬ ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಕೇವಲ ಪಕ್ಷಕ್ಕಾಗಿ ಅಲ್ಲ ದೇಶಕ್ಕಾಗಿ ತ್ಯಾಗ ಮಾಡಿದ್ದೀರಿ. 2004 ಹಾಗೂ 2009ರಲ್ಲಿನ ಪಕ್ಷದ ಗೆಲುವು ನಿಮ್ಮ ಕಠಿಣ ಶ್ರಮಕ್ಕೆ ಸಂದ ಫಲ. ನಿಮ್ಮ ನಾಯಕತ್ವದಲ್ಲಿ ಸೋಲಿನ ಭೀತಿಯಲ್ಲಿ ಕುಗ್ಗಿಹೋಗಿದ್ದ ಪಕ್ಷ ಅಸಾಧ್ಯವಾದದ್ದನ್ನು ಸಾಧಿಸಿದೆ. ಇದೀಗ ನಿಮಗೆ ಪಕ್ಷದ ನಾಯಕತ್ವ ಹಸ್ತಾಂತರಿಸಬೇಕು ಎನಿಸಿದರೆ ರಾಹುಲ್ ಗಾಂಧಿ ಅವರು ಜವಾಬ್ದಾರಿಗೆ ಸೂಕ್ತವಾದ ವ್ಯಕ್ತಿ ಎಂದು ಭಾವಿಸುತ್ತೇನೆ. ಅವರನ್ನು ನೀವೇ ಮನವೊಲಿಸಬೇಕು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.