ಕುಮಾರಸ್ವಾಮಿ ಒಂದು ಸ್ವಕ್ಷೇತ್ರ ಎಂಬುವುದು ಇಲ್ಲದೆ ಪ್ರತಿಯೊಂದು ಚುನಾವಣೆಗೆ ಒಂದೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಟೂರಿಂಗ್ ಟಾಕೀಸ್ ಪ್ರೋಗಾಮ್‌ಗಳು ಹಾಕಿಕೊಳ್ಳುತ್ತಿದ್ದಾರೆ, ಯಾವ ಕ್ಷೇತ್ರದಲ್ಲೂ ಜನರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಕೋಲಾರ(ಏ.05): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ಅವಕಾಶವಾದಿ. ರಾಮನಗರದಲ್ಲಿ ತಮ್ಮ ಬಾಮೈದ ಡಾ.ಮಂಜುನಾಥ್‌ರಿಗೆ ಬಿಜೆಪಿ ಟಿಕೆಟ್ ಕೊಡಿಸಿದ್ದಾರೆ, ಕೋಲಾರದಲ್ಲಿ ಮಲ್ಲೇಶ್‌ಗೆ ತೆನೆ ನೀಡಿದ್ದಾರೆ, ಅಲ್ಲಿ ಕಮಲ ಬೇಕು ಇಲ್ಲಿ ತೆನೆ ಬೇಕಾ ಎಂದು ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ಸ್ ಪಕ್ಷದ ಅಭ್ಯರ್ಥಿ ಕೆ.ವಿ.ಗೌತಮ್ ಪರವಾಗಿ ನಗರದಲ್ಲಿ ರೋಡ್ ಶೋ ನಡೆಸಿ ಬಂಗಾರಪೇಟೆಯ ವೃತ್ತದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಹಾಗೂ ನಗರದ ಗಾಂಧಿನ ವನದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಎಚ್‌ಡಿಕೆ ಟೂರಿಂಗ್ ಟಾಕೀಸ್
undefined
ಕುಮಾರಸ್ವಾಮಿ ಒಂದು ಸ್ವಕ್ಷೇತ್ರ ಎಂಬುವುದು ಇಲ್ಲದೆ ಪ್ರತಿಯೊಂದು ಚುನಾವಣೆಗೆ ಒಂದೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಟೂರಿಂಗ್ ಟಾಕೀಸ್ ಪ್ರೋಗಾಮ್‌ಗಳು ಹಾಕಿಕೊಳ್ಳುತ್ತಿದ್ದಾರೆ, ಯಾವ ಕ್ಷೇತ್ರದಲ್ಲೂ ಜನರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರು.
ನೀರಾವರಿಗೆ ಅನುದಾನ ತರದಿದ್ದರೆ ರಾಜಕೀಯ ನಿವೃತ್ತಿ: ಎಚ್.ಡಿ.ಕುಮಾರಸ್ವಾಮಿ
ಕೋಲಾರ ಕ್ಷೇತ್ರದ ಮೇಲೆ ಮೊದಲಿನಿಂದಲೂ ನನಗೆ ಅತ್ಯಂತ ವಿಶ್ವಾಸವಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ.ಗೌತಮ್‌ರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದೇವೆ. ಜನಪರ ಕಾಳಜಿಯುಳ್ಳ ಯುವ ಎಂಜಿನಿಯರ್‌ನನ್ನು ಕಣಕ್ಕಿಳಿಸಿದ್ದೇವೆ. ನೀವು ಅವರನ್ನು ಆಯ್ಕೆ ಮಾಡಿದಲ್ಲಿ ಸರ್ಕಾರದ ಸೌಲಭ್ಯಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆಂದು ಭರವಸೆ ನೀಡಿದರು.
ಜಿಲ್ಲೆ ಕಾಂಗ್ರೆಸ್‌ನ ಭದ್ರ ಕೋಟೆ
ಕೋಲಾರ ಲೋಕಸಭಾ ಕ್ಷೇತ್ರವು ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೇಸ್ ಪಕ್ಷದ ಭದ್ರಕೋಟೆಯಾಗಿತ್ತು. ಇಂದು ಬಾರಿ ಜನತಾಪಕ್ಷ ಮತ್ತೊಂದು ಬಾರಿ ಬಿಜೆಪಿ ಪಕ್ಷದ ಎಸ್.ಮುನಿಸ್ವಾಮಿರನ್ನು ಹೊರತುಪಡಿಸಿ ಉಳಿದಂತೆ ೧೫ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನೇ ಆಯ್ಕೆ ಮಾಡುತ್ತಿರುವುದು ಇತಿಹಾಸವಾಗಿದೆ ಎಂದರು.
ಭಾರತದ ಸಂವಿಧಾನ ಉಳಿವಿಗಾಗಿ, ಪ್ರಜಾಪ್ರಭುತ್ವ ಬೆಳೆಸಲು, ಸರ್ವಾಧಿಕಾರ ತೊಲಗಿಸಲು ನೀವುಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಬಹುಮತದಿಂದ ಆಯ್ಕೆ ಮಾಡುವಂತಾಗಬೇಕು, ಕಾಂಗ್ರೆಸ್ ಪಕ್ಷವು ಜಾತ್ಯತೀತ ಪಕ್ಷವಾಗಿದೆ. ನುಡಿದಂತೆ ನಡೆವ ಪಕ್ಷ ಎಂಬುವುದನ್ನು ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ೬-೭ ತಿಂಗಳಲ್ಲಿಯೇ ೫ ಗ್ಯಾರಂಟಿಗಳನ್ನು ಸಂಪೂರ್ಣವಾಗಿ ಜಾರಿಗೆ ತಂದಿರುವ ಪಕ್ಷವಾಗಿದ್ದು ಜನರ ನಂಬಿಕೆ, ವಿಶ್ವಾಸಗಳಿಗೆ ಅರ್ಹರಾಗಿರುವ ಪಕ್ಷವಾಗಿದೆ ಎಂದು ತಿಳಿಸಿದರು.
ಎತ್ತಿಹೊಳೆ ಯೋಜನೆ ಜಾರಿ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗಾಗಿ ಮಂಜೂರಾತಿ ಮಾಡಿದೆ. ಈಗಾಗಲೇ ತುಮಕೂರಿನ ಮಧುಗಿರಿಯವರೆಗೆ ಬಂದಿದೆ. ನಮ್ಮ ಆಡಳಿತ ಅವಧಿಯೊಳಗೆ ಕೋಲಾರಕ್ಕೆ ತಲುಪುವಂತೆ ಮಾಡಲಾಗುವುದು, ಕೆ.ಸಿ.ವ್ಯಾಲಿ ಯೋಜನೆ ಅಂತರ್ಜಲ ಅಭಿವೃದ್ದಿಗಾಗಿ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ಇದರಿಂದಾಗಿ ಕೋಲಾರದಲ್ಲಿ ನೀರಿನ ಸಮಸ್ಯೆ ಈ ಭಾರಿ ಸುಧಾರಣೆ ಕಂಡಿದೆ. ರಾಜ್ಯದಲ್ಲಿ ಕೋಲಾರ-ಚಿಕ್ಕಬಳ್ಳಾಪುರದ ಜನತೆ ಮಾತ್ರ ನೀರಿನ ಬೆಲೆ ಗೊತ್ತಿದೆ ಎಂದರು.
ಕರ್ನಾಟಕದಲ್ಲಿ ಮತ್ತೆ ಡಬಲ್ ಇಂಜಿನ್ ಸರ್ಕಾರ: ಗೋವಾ ಸಿಎಂ ಪ್ರಮೋದ್ ಸಾವಂತ್
ಬಿಜೆಪಿ ಸರ್ಕಾರ ಕಳೆದ ೧೦ ವರ್ಷದಿಂದ ಆಡಳಿತ ನಡೆಸಿದೆ. ಅವರು ನೀಡಿದಂತ ಭರವಸೆಗಳು ಯಾವೂದು ಈಡೇರಿಸಿದ್ದಾರೆ. ಯುವ ಜನತೆಗೆ ಉದ್ಯೋಗ ನೀಡಿದ್ದಾರೆಯೇ, ನಿಮ್ಮ ಬ್ಯಾಂಕ್ ಖಾತೆಗೆ ೧೫ ಲಕ್ಷ ರೂ ಹಾಕಿದ್ದಾರೆಯೇ, ಸಾಲ ಮನ್ನಾ ಮಾಡಿದ್ದಾರೆಯೇ, ಯಾವ ಭರವಸೆ ಅನುಷ್ಠಾನಕ್ಕೆ ತಂದಿದ್ದಾರೆ. ಆದಾನಿ ಅಂಬಾನಿಯವರಿಗೆ ಲಕ್ಷಾಂಕರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇದನ್ನೆಲ್ಲ ನೀವು ಅರ್ಥ ಮಾಡಿಕೊಂಡು ರಾಜ್ಯದ ಮಾದರಿಯಲ್ಲಿ ಕೇಂದ್ರದಲ್ಲೂ ಬದಲಾವಣೆ ತರಲು ಕಾಂಗ್ರೆಸ್ ಅಭ್ಯರ್ಥಿ ಗೌತಮ್‌ಗೆ ಆಯ್ಕೆ ಮಾಡಿ ಎಂದರು.,
ಸಚಿವರಾದ ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ನಸೀರ್ ಅಹಮದ್, ಶಾಸಕರಾದ ನಂಜೇಗೌಡ, ಕೊತ್ತೂರು ಮಂಜುನಾಥ್, ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾ ಶಶಿಧರ್, ಮಾಜಿ ಸ್ಪೀಕರ್ ವಿ.ಆರ್.ಸುದರ್ಶನ್, ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್, ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಇದ್ದರು.