47ನೇ ವಯಸ್ಸಿಗೆ ಗ್ರಾಜುಯೇಟ್ ಆದೆ, ಮಂತ್ರಿಗಿಂತ ಅದೇ ಖುಷಿಯ ವಿಚಾರ: ಡಿ.ಕೆ.ಶಿವಕುಮಾರ್‌

Published : Oct 16, 2025, 11:32 AM IST
DK shivakumar

ಸಾರಾಂಶ

ನಾನು ಈವರೆಗೂ ಚೇರ್ ಮೇಲೆ ಕುಳಿತು ಒಂದು ಸನ್ಮಾನ ಮಾಡಿಸಿಕೊಂಡಿಲ್ಲ. ರಮ್ಯ ಎಂಬ ಹುಡುಗಿ ನನ್ನ ಬಗ್ಗೆ ಪಿಹೆಚ್‌ಡಿ ಮಾಡಿ ಪುಸ್ತಕ ಬರೆದಿದ್ದಾಳೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರು (ಅ.16): ನಾನು ಈವರೆಗೂ ಚೇರ್ ಮೇಲೆ ಕುಳಿತು ಒಂದು ಸನ್ಮಾನ ಮಾಡಿಸಿಕೊಂಡಿಲ್ಲ. ರಮ್ಯ ಎಂಬ ಹುಡುಗಿ ನನ್ನ ಬಗ್ಗೆ ಪಿಹೆಚ್‌ಡಿ ಮಾಡಿ ಪುಸ್ತಕ ಬರೆದಿದ್ದಾಳೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ರಘುಗೂ ನನಗೂ ಯಾವುದೇ ಸಂಬಂಧ ಇಲ್ಲ, ಹತ್ತು ನಿಮಿಷ ರಘು ಜೊತೆ ಮಾತಾಡಿಲ್ಲ. ನನ್ನ ಅನುಮತಿ ಪಡೆದಿಲ್ಲ, ನನ್ನ ಬಾಲ್ಯದಿಂದ ಈವರೆಗೆ ಬರೆದಿದ್ದಾರೆ. ವಿಧಿಯಿಲ್ಲದೆ ಬಂದಿದ್ದೇನೆ, ಕಾಣದೆ ಇರುವ ಇಂತಹ ಭಕ್ತರಿಗಾಗಿ ಬಂದಿದ್ದೇನೆ. ನನಗೆ ಪುಸ್ತಕ ಓದುವ ಅಭ್ಯಾಸ ಇಲ್ಲ. ಚಿಕ್ಕವಯಸ್ಸಿನಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಉಡುಪಿಗೆ ಹೋಗಿದ್ದೆ, ಅಲ್ಲಿನ ಭಾಷಣವನ್ನು ಇಲ್ಲಿಗೆ ತಂದಿದ್ದಾರೆ ಎಂದರು.

ಉಗ್ರಪ್ಪ ರಾಜಕಾರಣಿ, ಲಾ ಮೇಕರ್. 12ನೇ ವಯಸ್ಸಿಗೆ ಸ್ಕೂಲ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದೆ. ಮಾಧವ ನಾಯಕ್ ಎಂಥ ಗೆಳೆಯ ನನಗೆ ಸಿಕ್ಕಿದ್ದ. ಪೋಲಿಟಿಕಲ್ ಲೀಡರ್ ಆಗಬೇಕು, ರಾಜಕಾರಣ ಮಾಡಬೇಕು ಎಂದು ನಿರ್ಧಾರ ಮಾಡಿದೆ. 8 ಬಾರಿ ಗೆದ್ದು, ಇಲ್ಲಿ ನಿಂತಿದ್ದೇನೆ. ಟ್ರಬಲ್ ಶೂಟರ್ ಅಂತ ಹೆಸರು ಇಟ್ಟಿದ್ದಾರೆ. ಈ ವೇಳೆ ರಾಜೀವ್ ಗಾಂಧಿಯವರ ಜೊತೆಗಿನ ಮಾತುಕತೆಯನ್ನು ಡಿಕೆಶಿ ನೆನಪು ಮಾಡಿಕೊಂಡರು. ಗ್ರೇಟರ್ ಬೆಂಗಳೂರು ಮೂಲಕ 500 ಮಂದಿ ಹೊಸ ನಾಯಕರು ಬರ್ತಾರೆ. ಲೀಡರ್ ಗಳನ್ನ ಸೃಷ್ಠಿಮಾಡಬೇಕೆ ಹೊರತು ಹಿಂಬಾಲಕರನ್ನ ಅಲ್ಲ ಅಂತ ನಂಬಿರುವವನು ನಾನು. ನನಗೂ 63 ವರ್ಷ ಆಯ್ತು, ಇನ್ನು ಹತ್ತು ವರ್ಷ ರಾಜಕೀಯದಲ್ಲಿ ಕೆಲಸ‌ ಮಾಡಬಹುದು. ರಾಜಕೀಯ ಸ್ಥಾನಮಾನ ಸಿಗದವರನ್ನ ವಂಚಿತರು ಎಂದು ಡಿಕೆಶಿ ಹೇಳಿದರು.

ಈಗಿನ ಮಕ್ಕಳಿಗೆ ಟೀಚರ್ ಸುಳ್ಳು ಹೇಳಲಾಗದು. ಮಗು ಎಲ್ಲವನ್ನ ಪೋನ್ ನಲ್ಲಿ ತಿಳಿದುಕೊಳ್ಳುತ್ತೆ, ಶ್ರಮ ಪಡಬೇಕಿಲ್ಲ. ಪಕ್ಷ ಭೇದ ಮರೆತು ನನ್ನ ಕಷ್ಟ ಕಾಲದಲ್ಲಿ ನನ್ನ ಜೊತೆ ನಿಂತ ಜನ, ತಿಹಾರ್ ಜೈಲ್ ನಲ್ಲಿ ಇದ್ದಾಗ, ಕೋರ್ಟ್ ಮುಂದೆ ಸಾಕಷ್ಟು ಜನ ಬಂದಿದ್ರು. ನನ್ನ ಕಷ್ಟದ ಜೊತೆ ನಿಂತವರಿಗೆ ಅಭಿನಂದಿಸುತ್ತೇನೆ. ಸೋಲನ್ನೂ ನಾನು ಒಪ್ಪುತ್ತೇನೆ, ಪ್ರತಿ ಬಾರಿ ನಾನೇ ಗೆಲ್ಲಲಾಗದು. ಏನೇನೋ ಕತೆಗಳನ್ನ ಕಟ್ಟಿ ಅಪಾದನೆ ಮಾಡ್ತಾರೆ, ರಾಜಕಾರಣ ನಿಂತ ನೀರಲ್ಲ. ದೇವೇಗೌಡರ ವಿರುದ್ಧ ಹೋರಾಟ ಮಾಡಿದ್ದೆ, ಪಕ್ಷದ ಆದೇಶದ ಮೇರೆಗೆ ಕುಮಾರಸ್ವಾಮಿ ಕೈಯನ್ನ ಎತ್ತಬೇಕಾಗಿತ್ತು. ಜೈಲಿಗೆ ಹೋದ ಮೇಲೆ ನಾವೇನು ದುಡ್ಡು ಹೊಡಿ ಎಂದು ಹೇಳಿದ್ವಾ? ಎಂದು ನಂತರ ಮಾತಾಡಿದ್ದಾರೆ. ಯಾರ್ಯಾರು ಏನೇನು ಮಾತನಾಡಿದ್ದಾರೆ ಗೊತ್ತಿದೆ. ಈ ಪುಸ್ತಕದಲ್ಲಿ ‌ಶೇ.99ರಷ್ಟು ನಿಜವಿದೆ. ಎಲ್ಲರೂ 'ಎ ಸಿಂಬಲ್‌ ಆಫ್‌ ಲಾಯಲ್ಟಿ ಡಿಕೆಶಿ' ಪುಸ್ತಕವನ್ನು ಓದಿ ಎಂದು ಹೇಳಿದರು.

ನ.6ರಂದು ಬಿಡುಗಡೆ ‌ಮಾಡುವೆ

ದೆಹಲಿಯಿಂದ ಪೋನ್ ಬಂತು, ನೀವು ಡಿಸಿಎಂ ಆಗ್ತಿರಾ? ಜೈಲ್ ಹೋಗ್ತಿರಾ ಎಂದ್ರು. ಅಶೋಕ್ ಜೊತೆ ಅಧಿವೇಶನದಲ್ಲಿ ಮಾತಾಡಿದೆ. ನನ್ನ ಯಾರೂ ಕ್ಷಮೆ ಕೇಳು ಎಂದು ಹೇಳಿಲ್ಲ ಎಂದು ಮೈತ್ರಿ ಸರ್ಕಾರ ಪತನದ ಸಂದರ್ಭವನ್ನ ಡಿಕೆಶಿ ಮೆಲಕು ಹಾಕಿದರು ಜೊತೆಗೆ ಸದಾ ವಸ್ತಲೇ ವಿವಾದವನ್ನು ಪ್ರಸ್ತಾಪಿಸಿದರು. ನೀರಿನ ಹೆಜ್ಜೆ ಎಂಬ ಪುಸ್ತಕವನ್ನ‌ ನವೆಂಬರ್ 6ರಂದು ಬಿಡುಗಡೆ ‌ಮಾಡುವೆ. ಮಲ್ಲಿಕಾರ್ಜುನ ಖರ್ಗೆಯವರ ಬಳಿ ಮತ್ತೊಂದು ಪುಸ್ತಕ ಬಿಡುಗಡೆ ಮಾಡಿಸುವೆ. ದೇವೇಗೌಡರಿಗೆ ಪ್ರಧಾನ ಮಂತ್ರಿಗಳೇ ಎಂದು ಸ್ವಾಮೀಜಿ ಹೇಳಿದ್ರು. ಸಂಸ್ಕೃತವನ್ನ ಎರಡು ವರ್ಷ ಕಲಿತೆ . ವಿಶ್ವರೂಪ ದರ್ಶನ ಇತ್ತು ಉಡುಪಿಯಲ್ಲಿ, ಆ ಸಂದರ್ಭದಲ್ಲಿ ಶ್ಲೋಕ ರೀಕಾಲ್ ಮಾಡ್ಕೊಂಡೆ. ಆ ಶ್ಲೋಕವನ್ನ ಇಲ್ಲಿ ಹೇಳೋಣ ಎಂದೆನೆಸಿದೆ ಎಂದು ಡಿಕೆಶಿ ಶ್ಲೋಕ ಹೇಳಿದರಲ್ಲದೇ, ಆ ಶ್ಲೋಕವನ್ನ 25 ಲಕ್ಷ ಜನ ನೋಡಿದ್ದಾರೆ ಎಂದು ಹೇಳಿದ್ರು. ನಾನು ಗ್ರಾಜುಯೇಟ್ ಆಗಿರಲಿಲ್ಲ, ಹುಟ್ಟುವ‌ ಮಕ್ಕಳಿಗೆ ಸೀಟು ಕೊಡಿ ಎಂದು ಕೇಳಿದೆ, ಸೀಟು ಕೊಟ್ರು. ನನ್ನ ಮಕ್ಕಳು ಓದು ಎಂದು ಓದಿಸಿದ್ರು, 47ನೇ ವಯಸ್ಸಿಗೆ ಗ್ರಾಜುಯೇಟ್ ‌ಆದೆ. ಮಂತ್ರಿಗಿಂತ ಗ್ರಾಜುಯೇಟ್ ಖುಷಿಯ ವಿಚಾರ ಎಂದು ಡಿಕೆಶಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದ್ವೇಷ ಭಾಷಣ ಮಾಡಲೆಂದೇ ವಿರೋಧ ಪಕ್ಷದವರು ಮಸೂದೆಗೆ ವಿರೋಧ?: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಪ್ರಶ್ನೆ
ನರೇಗಾ ಸಮರ: ಹೆಚ್‌ಡಿಕೆ ಸವಾಲು ಸ್ವೀಕರಿಸಿದ ಡಿಕೆಶಿ; 'ಇಂದೇ ಡಿಬೇಟ್‌ಗೆ ಬರ್ತೀನಿ' ಎಂದು ಪಂಥಾಹ್ವಾನ!