ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಯದೇವ ಶ್ರೀ ಪ್ರಶಸ್ತಿ ಸ್ವೀಕರಿಸಿದರು. ಆದ್ರೆ, ಪ್ರಶಸ್ತಿ ಜೊತೆ ಕೊಟ್ಟ ಹಣವನ್ನು ಮಠದ ಶಿಕ್ಷಣ ಸಂಸ್ಥೆ ವಾಪಸ್ ನೀಡಿದರು.
ದಾವಣಗೆರೆ, (ಜುಲೈ.12) : ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯಗೆ ಇಂದು(ಮಂಗಳವಾರ) ದಾವಣಗೆರೆ ಶಿವಯೋಗಿ ಆಶ್ರಮದಲ್ಲಿ ಜಯದೇವ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 65ನೇ ಸ್ಮಾರಣೋತ್ಸವ ಕಾರ್ಯಕ್ರಮದಲ್ಲಿ ಜಯದೇವಶ್ರೀ ಪ್ರಶಸ್ತಿ ಜೊತೆ 50 ನಗದು ಹಣವನ್ನು ನೀಡಿ ಗೌರಿಸಲಾಯ್ತು. ಆದ್ರೆ, ಸಿದ್ದರಾಮಯ್ಯನವರು ಕೇವಲ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತೇನೆ. ಹಣವನ್ನು ಮಠದ ವಿದ್ಯಾಸಂಸ್ಥೆ ನೀಡುವುದಾಗಿ ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಶ್ರೀಗಳಿಗೆ ನಮ್ಮ ಮೇಲೆ ವಿಶೇಷ ಅಭಿಮಾನವಿದೆ. ಜೆಡಿಎಸ್ ನಿಂದ ಹೊರ ಬಂದ ನಂತರ ಅಹಿಂದ ಸಮಾವೇಶ ಮಾಡುತ್ತಿದ್ದೇ.ಪೂಜ್ಯ ಶ್ರೀಗಳು ಮೊದಲ ಅಹಿಂದ ಸಮಾವೇಶದಿಂದ ಹಿಡಿದು ಎಲ್ಲಾ ಸಮವೇಶಕ್ಕೆ ಬಂದು ಆಶೀರ್ವಾದ ಮಾಡಿದ್ರು. ಟೀಕೆಗಳು ಬಂದರೂ ಲೆಕ್ಕಿಸದೇ ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದರು. ಅಹಿಂದ ಸಮಾಜದವರಿಗೆ ಸ್ವಾಭಿಮಾನದ ಕಿಚ್ಚನ್ನು ಹೇಳಿದ್ದರು.ಯಾವಾಗಲೂ ನಾನು ಮುರುಘಾ ಶರಣರಿಗೆ ಅಬಾರಿಯಾಗಿರುತ್ತೇನೆ ನನಗೆ ಇಂದು ಜಯದೇವ ಶ್ರೀ ಪ್ರಶಸ್ತಿ ನೀಡಿದ್ದಾರೆ. ಅದಕ್ಕೆ ನಾನು ಎಷ್ಟು ಅರ್ಹನೋ ಗೊತ್ತಿಲ್ಲ. ಪೋನ್ ಮಾಡಿ ಶ್ರೀಗಳು ಹೇಳಿದಾಗ ನನಗೆ ಅಚ್ಚರ್ಯ ಆಯ್ತು.. ಶ್ರೀಗಳ ಹೇಳಿದ ಮೇಲೆ ಬಂದೇ ಬರ್ತಿನಿ ಎಂದು ಹೇಳಿದ್ದೇ, ಬಂದೇ ಆಶೀರ್ವಾದ ಮಾಡಿದ್ದಾರೆ. ಮುಂದೆ ಸಮಾಜಮುಖಿ ಕೆಲಸ ಮಾಡಿ ಎಂದು ಆಶೀರ್ವಾದ ಮಾಡಿದ್ದಾರೆ. ಪ್ರಶಸ್ತಿ ಜೊತೆ 50 ಸಾವಿರ ಹಣವನ್ನು ಕೂಡ ನೀಡಿದ್ದಾರೆ. ಅ ಹಣವನ್ನು ನಾನು ಅವರ ಶಿಕ್ಷಣ ಸಂಸ್ಥೆಗಳಿಗೆ ವಾಪಸ್ಸು ನೀಡುತ್ತೇನೆ. ಪ್ರಶಸ್ತಿ ಮಾತ್ರ ಇಟ್ಟುಕೊಂಡು ಹಣ ಶಿಕ್ಷಣ ಸಂಸ್ಥೆಗಳಿಗೆ ವಾಪಸ್ಸು ಕೊಡುತ್ತೇನೆ ಎಂದು ಹೇಳಿದರು.
ಇದು ಸಿದ್ದರಾಮೋತ್ಸವ ಅಲ್ಲ ಅಮೃತ ಮಹೋತ್ಸವ: ಸ್ಪಷ್ಟಪಡಿಸಿದ ಸಿದ್ದರಾಮಯ್ಯ
ಎಲ್ಲಿ ಬಡತನ ಇರುತ್ತದೆಯೋ ಅಲ್ಲಿ ಶೋಷಣೆ ಇರುತ್ತೆ. ಶೋಷಣೆ ಗೆ ಹಾಗೂ ಬಡತನಕ್ಕೆ ಸಂಬಂಧ ಇರುತ್ತದೆ. 900 ವರ್ಷಗಳು ಕಳೆದರು ಜಾತಿ ವ್ಯವಸ್ಥೆ ಹೋಗಿಲ್ಲ. ಇವ ನಮ್ಮವ ಇವ ನಮ್ಮವ ಎನ್ನುವುದು ಬಂದಿಲ್ಲ. ಕೇವಲ ಇವನ್ಯಾರವ ಇವನ್ಯಾರವ ಎನ್ನುವುದು ಮಾತ್ರ ಇದೆ.
ಎಲ್ಲಿಯವರೆಗೆ ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯ ಸಿಗೋದಿಲೋ ಅಲ್ಲಿಯವರೆಗೂ ಸ್ವಾತಂತ್ರ್ಯ ವಾಗುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ಎಲ್ಲಾ ದೇಶದ ಸಂವಿಧಾನ ಅಭ್ಯಾದ ಮಾಡಿ ನಮ್ಮ ದೇಶದ ಸಂವಿಧಾನ ಮಾಡಿದ್ದಾರೆ. ಸಂವಿಧಾನ ಉತ್ತಮ ಎನಿಸಬೇಕಾದ್ರೆ ಅದನ್ನು ಪ್ರಮಾಣಿಕವಾಗಿ ಜಾರಿಮಾಡಬೇಕು.ಜಾತಿ ವ್ಯವಸ್ಥೆ ಇರುತ್ತೋ ಅಲ್ಲಿಯವರೆಗೂ ಸಮಾಸಮಾಜ ಬಯಸಲು ಸಾಧ್ಯವಿಲ್ಲ ಎಂದರು.
ಯಾರಿಗೆ ಕ್ಲಾರಿಟಿ ಇರೋದಿಲ್ವೋ ಅವರಿಗೆ ಗೊಂದಲ ಇರುತ್ತೆ. ಸ್ಪಷ್ಟತೆ ಇದ್ದರೆ ಯಾವುದೇ ಗೊಂದಲ ಇರುವುದಿಲ್ಲ. ಹಾಗೇ ಶ್ರೀಗಳಿಗೆ ಎಲ್ಲಾದರಲ್ಲಿ ಸ್ಪಷ್ಟತೆ ಇದ್ದು, ಜನರಿಗೆ ತಿಳಿಸಿದ್ದಾರೆ.ನಮ್ಮ ದೇಶದಲ್ಲಿ ಅನೇಕ ಜಾತಿ ಧರ್ಮಗಳಿವೆ, ಅನೇಕ ಭಾಷೆಗಳು ಇವೆ.ದೇವರಂತೂ ಕೋಟಿಗಟ್ಟಲೇ ಇದಾವೆ.ಆದರೂ ಸಾಮಾಜಿಕ, ಆರ್ಥಿಕ ರಾಜಕೀಯ ಅಸಮಾನತೆ ಇದೆ.ಚತುವರ್ಣ ವ್ಯವಸ್ಥೆ ಇರಲಿಲ್ಲ ಎಂದರೆ ಅಸಮಾನತೆ ಇರುತ್ತಿರಲಿಲ್ಲ. ಅದಕ್ಕೆ ಲೋಹಿಯವರು ಹೇಳುತ್ತಾರೆ ನಮ್ಮ ಜಾತಿ ವ್ಯವಸ್ಥೆಗೆ ಚಲನವಿಲ್ಲ. ಇದರ ವಿರುದ್ದ ಬಸವ ಬುದ್ದ, ಅಂಬೇಡ್ಕರ್ ರವರು ಹೋರಾಟ ಮಾಡಿದರು.ಜಾತಿ ವ್ಯವಸ್ಥೆ ಯಲ್ಲಿ ಜಡತ್ವ ಇದ್ದರೆ ಸಮಾನತೆ ಸಾದ್ಯವಿಲ್ಲ ತಿಳಿಸಿದರು.
ಈ ಮುರುಘಾ ಮಠದಲ್ಲಿ ಮುಸ್ಲಿಂ ಸಮುದಾಯವರು ಕಮಿಟಿಯಲ್ಲಿ ಇದ್ದಾರೆ. ನನಗೆ ಆಪರೇಷನ್ ಮಾಡಬೇಕಾದ ಸಂದರ್ಭ ಬಂದಿರುತ್ತೆ ಅಂದುಕೊಳ್ಳಿ ಆಗ ನನಗೆ ಕುರುಬ ವ್ಯಕ್ತಿಯ ರಕ್ತ ಬೇಕು, ಹಿಂದೂ ರಕ್ತ ಬೇಕು ಎಂದು ಹೇಳೋಕೆ ಆಗುತ್ತಾ. ಯಾರದ್ದಾದರೂ ರಕ್ತ ಕೊಡಪ್ಪ ಜೀವ ಉಳಿಸಿಕೊಳ್ಳಬೇಕು ಎಂದು ಬೇಡ್ಕೋತೀವಿ. ಬಸವಣ್ಣ ಮೌಡ್ಯಗಳ ವಿರುದ್ದ ಹೋರಾಟ ಮಾಡಿದವರು.ಅದ್ದರಿಂದ ನಮ್ಮ ಸರ್ಕಾರ ಮೌಡ್ಯ ನಿಷೇಧ ಕಾಯ್ದೆ ನಿಷೇಧ ಮಾಡಿದೆ. ಪ್ರಭಾಕರ ಎನ್ನುವನಿಗೆ ಟಿಕೇಟ್ ಸಿಗದಿದ್ದಕ್ಕೆ ನನ್ನ ಹಣೆಬರಹ ಎನ್ನುತ್ತಿದ್ದ ಆಗ ನಾನು ಹೇಳಿದೆ ಲೋ ಪ್ರಭಾಕರ ನಿನ್ನ ಟಿಕೇಟ್ ತಪ್ಪಿಸಿದ್ದು ನಾನು ಪ್ರಭಾಕರನ ಟಿಕೇಟ್ ತಪ್ಪಿಸಿ ಆರ್ ಕೃಷ್ಣಪ್ಪ ನಿಗೆ ನೀಡಿದೆ ಆಗ ನಾನು ಹೋಗಿ ಅವನ ಹಣೆಬರಹ ಬರೆದ್ನೋ..ಮೌಡ್ಯದ ವಿರುದ್ದ ನಾವು ಇರಬೇಕು ಎಂದು ಅಭಿಪ್ರಾಯಪಟ್ಟರು.