ಸಿದ್ದರಾಮಯ್ಯ ಸಿಎಂ ಆಗಲಿ, ಮಲ್ಲಿಕಾರ್ಜುನ- ಸತೀಶ್‌ ಜಾರಕಿಹೊಳಿ ಡಿಸಿಎಂ ಆಗಲಿ

By Sathish Kumar KH  |  First Published May 17, 2023, 11:23 PM IST

ಸರ್ವ ಧರ್ಮಗಳ  ನಾಯಕ ಎಸ್.ಎಸ್ ಮಲ್ಲಿಕಾರ್ಜುನ್ ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಭಾರತ್ ಸೌಹಾರ್ದ ಸಂಘದ ಅಧ್ಯಕ್ಷ ಬುತ್ತಿ ಹುಸೇನ್ ಪೀರ್ ಒತ್ತಾಯಿಸಿದರು.


ವರದಿ : ವರದರಾಜ್ ಏಷ್ಯಾನೆಟ್‌ ಸುವರ್ಣ ನ್ಯೂಸ್

ದಾವಣಗೆರೆ (ಮೇ17):  ಸರ್ವ ಧರ್ಮಗಳ  ನಾಯಕ ಎಸ್.ಎಸ್ ಮಲ್ಲಿಕಾರ್ಜುನ್ ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಭಾರತ್ ಸೌಹಾರ್ದ ಸಂಘದ ಅಧ್ಯಕ್ಷ ಬುತ್ತಿ ಹುಸೇನ್ ಪೀರ್ ಒತ್ತಾಯಿಸಿದರು.

Tap to resize

Latest Videos

ದಾವಣಗೆರೆಯಲ್ಲಿ ಸರ್ವ ಜಾತಿ, ಮತ, ಧರ್ಮಿಯರನ್ನು ಪ್ರೀತಿಸುವ ಯುವಕರ ಕಣ್ಮಣಿ,  ಎಸ್.ಎಸ್. ಮಲ್ಲಿಕಾರ್ಜುನ್ ರನ್ನು ರಾಜ್ಯದ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಬೇಕು.  ಸಿದ್ಧರಾಮಯ್ಯನವರ ಹುಟ್ಟುಹಬ್ಬ ಆಚರಿಸಿ 15 ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ಸೇರಿಸಿ, ಕಾಂಗ್ರೆಸ್ ಪಕ್ಷದ ಬಲವರ್ಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಭಿವೃದ್ಧಿ ಯೋಜನೆಗಳ ಹರಿಕಾರ, ದೂರದೃಷ್ಟಿಯುಳ್ಳ ಎಸ್.ಎಸ್.ಎಂ. ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಿಸಿದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗುತ್ತದೆ. ಶಾಸಕ ಶಾಮನೂರು ಶಿವಶಂಕರಪ್ಪನವರ ಮನೆತನದ ಸೊಸೆ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್‌ ಸೇರಿದಂತೆ ಎಲ್ಲಾ ಸದಸ್ಯರು ಸದಾ ಜನಸೇವೆಯನ್ನು ಮಾಡಲು ಉತ್ಸುಕರಾಗಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಎನ್.ಎಂ ಆಂಜನೇಯ ಗುರೂಜಿ, ಕಾಯಿಪೇಟೆ ಹಾಲೇಶ್, ಮಹಬೂಬ್ ಶೇಖ್, ಹೆಚ್.ನವೀದ್ ಅಹಮದ್ ಇದ್ದರು.

ಬಿಜೆಪಿ ನಾಯಕರ ಶ್ರದ್ಧಾಂಜಲಿ ಬ್ಯಾನರ್ ಹಾಕಿದವರ, ಚರ್ಮ ಸುಲಿದ ಪೊಲೀಸರು!

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು- ಬಿ.ವೀರಣ್ಣ: 
ದಾವಣಗೆರೆ (ಮೇ17): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ದಾವಣಗೆರೆ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಒಕ್ಕೂಟದ ಸಂಚಾಲಕ ಬಿ.ವೀರಣ್ಣ ಮಾತನಾಡಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷಕ್ಕೆ 135 ಸ್ಥಾನಗಳ ಸ್ಪಷ್ಟಬಹುಮತ ಬರಲು ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಇಬ್ಬರ ಪರಿಶ್ರಮ ಬಹಳದೊಡ್ಡದಿದೆ ಅದರಲ್ಲಿ ಸಿದ್ದರಾಮಯ್ಯನವರ ಪರಿಶ್ರಮ ಹೆಚ್ಚಾಗಿದ್ದು ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸಿದರು. ಸಿದ್ದರಾಮಯ್ಯ ಕೇವಲ ಒಂದು ಸಮುದಾಯದವರನ್ನು ಓಲೈಕೆ ಮಾಡಿಲ್ಲ. ಸರ್ವ ಜನಾಂಗದವರು ಮೆಚ್ಚಿದ್ದಾರೆ ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಸಿಎಂ ಸ್ಥಾನವನ್ನು ಪ್ರಥಮವಾಗಿ ನೀಡದೇ ಹೋದರೆ ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅಹಿಂದ ವರ್ಗದವರು ಕಾಂಗ್ರೆಸ್ ನಿಂದ ದೂರ ಉಳಿಯುವ ಆತಂಕ ಎದುರಾಗಲಿದೆ ಎಂದರು.

ಎಲ್ಲಾ ಸಮಾಜದವರನ್ನು ತನ್ನ ಜೊತೆಗೆ ಕೊಂಡೊಯ್ಯುವ ಸಮ ಸಮಾಜ ನಿರ್ಮಾಣ ಮಾಡಿದ ವ್ಯಕ್ತಿತ್ವ ಅವರದು. ಅಲ್ಲದೇ 13 ಬಾರಿ ಬಜೆಟ್ ಮಂಡನೆ ಮಾಡಿರುವ ಹೆಗ್ಗಳಿಕೆಯಿದೆ. ಸರ್ವ ಜನಾಂಗದವರಿಗೆ ಹಲವಾರು ಭಾಗ್ಯಗಳನ್ನು ನೀಡುವುದರ ಮುಖಾಂತರ ರಾಜ್ಯದ ಜನತೆಯ ನೆರವಾಗಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಿದ್ದಪ್ಪ ಅಡಾಣಿ, ಮಹೇಶ್ ಪೈಲ್ವಾನ್,ಕೆ.ಕಾಳಾಚಾರಿ,ಪ್ರಕಾಶ್,ಕೆ.ರೇವಣಸಿದ್ದಪ್ಪ,ಡಿ.ತಿಪ್ಪಣ್ಣ,ಸುರೇಶ್ ಉಪಸ್ಥಿತರಿದ್ದರು.

ಸತೀಶ್ ಜಾರಕಿಹೊಳಿಗೆ ಡಿಸಿಎಂ, ಸಮಾಜ ಕಲ್ಯಾಣ ಖಾತೆ ನೀಡಿ: ದಾವಣಗೆರೆ (ಮೇ 17) ಹಿಂದುಳಿದ ನಾಯಕ ಸತೀಶ್ ಹಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು ಸಮಾಜ ಕಲ್ಯಾಣ ಖಾತೆ ನೀಡುವಂತೆ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ಹರಿಹರ ತಾಲೂಕು ಸಂಚಾಲಕ ಮಾರುತಿ ದಾಸರ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ, ನಾಯಕ ಸಮುದಾಯ ಪ್ರಶ್ನಾತೀತ ನಾಯಕ, ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ, ಬಡವರ ಆಶಾಕಿರಣ, ಸದಾ ಹಸನ್ಮುಖ, ಸರ್ವ ಜಾತಿ, ಮತ, ಧರ್ಮೀಯರನ್ನು ಪ್ರೀತಿಸುವ ಸತೀಶ್ ಜಾರಕಿಹೊಳಿ ಅವರನ್ನು ರಾಜ್ಯದ ಉಪ-ಮುಖ್ಯಮಂತ್ರಿಗಳನ್ನಾಗಿ ಮಾಡಿ, ಉತ್ತಮ ಖಾತೆಯನ್ನು ನೀಡುವ ಮುಖಾಂತರ ಪರಿಶಿಷ್ಟರ ಏಳಗೆಗೆ ಶ್ರಮಿಸಬೇಕೆಂದು ಆಗ್ರಹಿಸಿದರು. 

ಸ್ಮಶಾನ ಪೂಜೆ ಮಾಡಿ ಗೆಲುವು ಸಾಧಿಸಿದ ಕಾಂಗ್ರೆಸ್‌: ಸತೀಶ್‌ ಜಾರಕಿಹೊಳಿ ಕಾರಿನ ಭವಿಷ್ಯ ನಿಜವಾಯ್ತು!

ದೇಶಾದ್ಯಂತ ಕೋವಿಡ್  ಸಾಂಕ್ರಾಮಿಕ ರೋಗದಲ್ಲಿ ಎಲ್ಲಾ ವರ್ಗದವರಿಗೂ ತಮ್ಮ ಸ್ವಂತ ಖರ್ಚಿನಲ್ಲಿ ಉಚಿತ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಹಂಚಿ ಜನೋಪಯೋಗಿ ಕೆಲಸವನ್ನು ನಿರ್ವಹಿಸಿದ್ದಾರೆ. ಪರಿಶಿಷ್ಟ ಪಂಗಡವನ್ನು ಒಗ್ಗೂಡಿ ರಾಜ್ಯದ 15 ಪರಿಶಿಷ್ಟ ಪಂಗಡಗಳ ಮೀಸಲು ಕ್ಷೇತ್ರಗಳಲ್ಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲ-ಸಿಕೊಂಡು ಬರುವಲ್ಲಿ ಸಹಕರಿಸಿದ್ದಾರೆ. ದೂರದೃಷ್ಟಿಯುಳ್ಳ ನೇತಾರರಾಗಿರುವ ಸತೀಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿ ಸಮಾಜ ಕಲ್ಯಾಣ ಖಾತೆಯನ್ನು ನೀಡಬೇಕೆಂದು ಮನವಿ ಮಾಡಿದರು. ಈ ವೇಳೆ ಟಿ.ಆರ್.ಪ್ರಶಾಂತ, ಕೆ.ಇ.ಮಂಜುನಾಥ್, ಜಿ.ಟಿ. ಗೋವಿಂದರಾಜ ಇದ್ದರು.

click me!