ಇವತ್ತು ಮತ ನಮ್ಮ ಬಳಿ (ದಲಿತರ ಬಳಿ) ಇದೆ, ನಾಯಕತ್ವ ಇನ್ಯಾರ ಬಳಿಯೋ ಇದೆ. ಪ್ರಸ್ತುತ ಸಿದ್ದರಾಮಯ್ಯನವರು ಯಾಕೆ ಮುಖ್ಯಮಂತ್ರಿಯಾದರು, ಯಡಿಯೂರಪ್ಪ, ಎಚ್.ಡಿ.ದೇವೇಗೌಡರು ಯಾಕಾಗಿ ಮುಖ್ಯಮಂತ್ರಿಯಾಗಿದ್ದರು? ಜನಬೆಂಬಲ ಅವರಿಗಿದೆ. ಏಕೆಂದರೆ, ನಾವು ಕಣ್ಣು ಮುಚ್ಚಿಕೊಂಡು ಮತ ಹಾಕುತ್ತಿದ್ದೇವೆ.
ಬೆಂಗಳೂರು (ಮಾ.06): ‘ಇವತ್ತು ಮತ ನಮ್ಮ ಬಳಿ (ದಲಿತರ ಬಳಿ) ಇದೆ, ನಾಯಕತ್ವ ಇನ್ಯಾರ ಬಳಿಯೋ ಇದೆ. ಪ್ರಸ್ತುತ ಸಿದ್ದರಾಮಯ್ಯನವರು ಯಾಕೆ ಮುಖ್ಯಮಂತ್ರಿಯಾದರು, ಯಡಿಯೂರಪ್ಪ, ಎಚ್.ಡಿ.ದೇವೇಗೌಡರು ಯಾಕಾಗಿ ಮುಖ್ಯಮಂತ್ರಿಯಾಗಿದ್ದರು? ಜನಬೆಂಬಲ ಅವರಿಗಿದೆ. ಏಕೆಂದರೆ, ನಾವು ಕಣ್ಣು ಮುಚ್ಚಿಕೊಂಡು ಮತ ಹಾಕುತ್ತಿದ್ದೇವೆ.’ ಹೀಗಂತ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯಿಂದ 5ನೇ ರಾಜ್ಯ ಮಟ್ಟದ ಜಾಗೃತ ಸಮಾವೇಶದಲ್ಲಿ ಮಾತನಾಡಿದರು.
‘ರಾಜ್ಯದಲ್ಲಿ 17 ಶೇ. ದಲಿತರು, ಶೇ. 7 ಪರಿಶಿಷ್ಟ ಪಂಗಡ, ಶೇ. 15 ಅಲ್ಪಸಂಖ್ಯಾತರಿದ್ದೇವೆ. ಇವೆಲ್ಲ ಸೇರಿದರೆ ರಾಜ್ಯದಲ್ಲಿ ನೂರಕ್ಕೂ ಅಧಿಕ ಕ್ಷೇತ್ರದಲ್ಲಿ ಗೆಲ್ಲಬಹುದು. ಆದರೆ, ಪ್ರಭಾವಿ ದಲಿತ ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿಲ್ಲ’ ಎಂದೂ ಅವರು ಬೇಸರ ವ್ಯಕ್ತಪಡಿಸಿದರು. ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರು ಸೇರಿದರೆ ರಾಜ್ಯದಲ್ಲಿ ನೂರಕ್ಕೂ ಅಧಿಕ ಕ್ಷೇತ್ರದಲ್ಲಿ ಗೆಲ್ಲಬಹುದು. ಒಗ್ಗಟ್ಟಾಗಿ ಪಕ್ಷಕ್ಕೆ ಮತ ನೀಡಿದ ಬಳಿಕವೂ ಪುನಃ ನಮಗೆ ಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ಕೇಳಿಕೊಳ್ಳುವ ಪರಿಸ್ಥಿತಿ ಇದೆ ನಮ್ಮದಾಗಿದೆ, ಇವತ್ತು ಮತ ನಮ್ಮದಿದೆ, ಲೀಡರ್‌ಶಿಪ್ ಇನ್ಯಾರ ಬಳಿಯೋ ಇದೆ. ಇದಕ್ಕೆ ನಾವು ನಮ್ಮ ನಾಯಕತ್ವ ಬೆಳೆಸದಿರುವುದೇ ಕಾರಣ’ ಎಂದು ಅವರು ಹೇಳಿದರು.
ದಿನಬೆಳಗಾದರೆ ಪ್ರಧಾನಿ ಮೋದಿ ಬಗ್ಗೆ ಸಿದ್ದರಾಮಯ್ಯ ಟೀಕೆ ಏಕೆ?: ಎಚ್.ಡಿ.ದೇವೇಗೌಡ
‘ಇವತ್ತು ಡಾ. ಪರಮೇಶ್ವರ್, ಖರ್ಗೆ ಅವರಾಗಲೀ, ನಾನಾಗಲಿ (ಡಾ.ಎಚ್.ಸಿ.ಮಹದೇವಪ್ಪ) ನೀತಿ ನಿರೂಪಣೆ ರೂಪಿಸುವ ಜಾಗದಲ್ಲಿಲ್ಲ. ನಾವು ಮುಖ್ಯಮಂತ್ರಿ ಆಗಲಿಲ್ಲ. ದೇಶದಲ್ಲಿ ಅಂಬೇಡ್ಕರ್ ಬಳಿಕ ಮತ್ತೊಬ್ಬ ಅಂತ ನಾಯಕ ಸಿಗಲಿಲ್ಲ. ಕರ್ನಾಟಕದಲ್ಲಿ ಪ್ರಭಾವಿ ದಲಿತ ನಾಯಕರಿದ್ದರೂ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ. ಆದರೂ ನಮ್ಮ ಪ್ರಭಾವ ಬಳಸಿ ಎಸ್ಸಿಪಿ, ಟಿಎಸ್‌ಪಿ ಕಾಯ್ದೆ, ಮುಂಬಡ್ತಿ ಮೀಸಲಾತಿ, ಗುತ್ತಿಗೆ ಮೀಸಲಾತಿ, ಕೆಐಎಡಿಬಿ ಮೀಸಲಾತಿ ಸೇರಿ ಅನೇಕ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ’ ಎಂದರು. ಬೇರೆಯವರು ಇಂತ ಪಕ್ಷದಲ್ಲಿ ನಮ್ಮ ನಾಯಕ ಇದ್ದಾನೆ ಎಂದು ಗುರುತಿಸಿಕೊಳ್ಳುತ್ತಾರೆ. ನಾವು ಯಾರು ಎತ್ತ ನೋಡದೆ ನೂರಕ್ಕೆ ನಾವು ಮತ ಕೊಡುತ್ತೇವೆ.
ನೀರಿನ ಸಮಸ್ಯೆ ಪರಿಹರಿಸಲು ತಾಲೂಕಿಗೊಂದು ಹೆಲ್ಪ್‌ಲೈನ್: ಸಿಎಂ ಸಿದ್ದರಾಮಯ್ಯ
ಹೀಗಾಗಿ ಯಾರ್ಯಾರದ್ದೊ ಬಳಿ ಅರ್ಜಿ ಕೊಟ್ಟು ಬೇಡಬೇಕಾಗುತ್ತದೆ. ನಾನು ಪಕ್ಷ ಸೇರಿದಂತೆ ಎಲ್ಲ ವೇದಿಕೆಯಲ್ಲಿ ಪರಿಣಾಮಕಾರಿಯಾಗಿ ಹಕ್ಕು ಮಂಡಿಸಿದ್ದೇನೆ. ನಮ್ಮದೇ ನಾಯಕ ಇದ್ದಾಗ ಸಮುದಾಯದ ಹಿತರಕ್ಷಣೆ ಅಲ್ಲಿ ಅಡಕವಾಗಿರುತ್ತದೆ. ಅದಿಲ್ಲದಿದ್ದರೆ ಪುನಃ ಗೋಗರಿಯುವ ಸ್ಥಿತಿಗೆ ನಮ್ಮನ್ನು ನಾವು ತಳ್ಳಿಕೊಳ್ಳುತ್ತಿದ್ದೇವೆ’ ಎಂದರು. 1987ರಲ್ಲಿ ಶಾಸಕಾಂಗ ಪಕ್ಷದಲ್ಲಿ 27 ದಲಿತ ಶಾಸಕರಿದ್ದರು. ಆದರೆ, ಬಿ. ರಾಚಯ್ಯ ಮುಖ್ಯಮಂತ್ರಿ ಆಗಬೇಕು ಎಂದು ನಾನೊಬ್ಬನೇ ಹೇಳಿದೆ. ಉಳಿದವರು ಸುಮ್ಮನಿದ್ದರು. ದೇವೇಗೌಡರೂ ಅಸಹಾಯಕತೆ ವ್ಯಕ್ತಪಡಿಸಿದರು. ಇದು ವಿಧಿ ಎಂದು ಅವರು ಸ್ಮರಿಸಿದರು.