ಕಾಂಗ್ರೆಸ್‌ನಲ್ಲಿ ಮಾತ್ರ ದಲಿ​ತ​ರು ಸಿಎಂ, ಪಿಎಂ ಆಗಲು ಸಾಧ್ಯ: ಮಾಜಿ ಶಾಸಕ ಬಾ​ಲ​ಕೃಷ್ಣ

By Govindaraj S  |  First Published Jan 4, 2023, 2:59 PM IST

ಕಾಂಗ್ರೆಸ್‌ ಪಕ್ಷ​ದಲ್ಲಿ ಮಾತ್ರ ದಲಿ​ತ​ರೊ​ಬ್ಬರು ಮುಖ್ಯ​ಮಂತ್ರಿ ಹಾಗೂ ಪ್ರಧಾನ ಮಂತ್ರಿ ಹುದ್ದೆ ಅಲಂಕ​ರಿ​ಸಲು ಅವ​ಕಾಶವಿದ್ದು, ಉಳಿದ ರಾಜ​ಕೀಯ ಪಕ್ಷ​ಗ​ಳದ್ದು ಕೇವಲ ಬೂಟಾ​ಟಿಕೆ ಎಂದು ಮಾಜಿ ಶಾಸಕ ಎಚ್‌.ಸಿ.​ಬಾಲಕೃಷ್ಣ ವ್ಯಂಗ್ಯ​ವಾ​ಡಿ​ದರು. 


ರಾಮನಗರ (ಜ.04): ಕಾಂಗ್ರೆಸ್‌ ಪಕ್ಷ​ದಲ್ಲಿ ಮಾತ್ರ ದಲಿ​ತ​ರೊ​ಬ್ಬರು ಮುಖ್ಯ​ಮಂತ್ರಿ ಹಾಗೂ ಪ್ರಧಾನ ಮಂತ್ರಿ ಹುದ್ದೆ ಅಲಂಕ​ರಿ​ಸಲು ಅವ​ಕಾಶವಿದ್ದು, ಉಳಿದ ರಾಜ​ಕೀಯ ಪಕ್ಷ​ಗ​ಳದ್ದು ಕೇವಲ ಬೂಟಾ​ಟಿಕೆ ಎಂದು ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ ವ್ಯಂಗ್ಯ​ವಾ​ಡಿ​ದರು. ನಗ​ರದ ಜಿಲ್ಲಾ ಕಾಂಗ್ರೆಸ್‌ ಕಚೇ​ರಿ​ಯಲ್ಲಿ ಮಂಗ​ಳ​ವಾರ ನಡೆದ ಬಿಡದಿ - ಕೂಟ​ಗಲ್‌ ಬ್ಲಾಕ್‌ ಕಾಂಗ್ರೆಸ್‌ ಪರಿ​ಶಿಷ್ಟಜಾತಿ ವಿಭಾ​ಗದ ಪದಾ​ಧಿ​ಕಾ​ರಿ​ಗಳ ನೇಮ​ಕಾತಿ ಪತ್ರ ವಿತ​ರಣಾ ಸಮಾ​ರಂಭ​ದಲ್ಲಿ ಮಾತ​ನಾ​ಡಿದ ಅವರು, ಕಾಂಗ್ರೆಸ್‌ ಎಂದೆಂದಿಗೂ ದಲಿ​ತರ ಪರ​ವಾ​ಗಿರುವ ಪಕ್ಷ. ಆದ್ದ​ರಿಂದ ದಲಿ​ತರು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡ​ಬೇಕು ಎಂದರು.

ಸತತ 50 ವರ್ಷ​ಗಳ ಕಾಲ ಕಾಂಗ್ರೆಸ್‌ ಪಕ್ಷಕ್ಕೆ ಸೇವೆ ಸಲ್ಲಿ​ಸಿದ ಪ್ರತಿ​ಫ​ಲ​ವಾಗಿ ಮಲ್ಲಿ​ಕಾ​ರ್ಜುನ ಖರ್ಗೆ​ಯ​ವರು ಎಐ​ಸಿಸಿ ಅಧ್ಯ​ಕ್ಷ​ರಾಗಿ ನೇಮ​ಕ​ಗೊಂಡಿ​ದ್ದಾರೆ. ಇದು ನಮ್ಮೆ​ಲ್ಲ​ರಿಗೂ ಹೆಮ್ಮೆ ತರುವ ವಿಷಯ. ಖರ್ಗೆ ಅವ​ರಿಗೆ ಪ್ರಧಾನಿ​ಯಾ​ಗುವ ಅವ​ಕಾ​ಶವೂ ಇದೆ ಎಂದು ಹೇಳಿ​ದ​ರು. ದೇಶ​ದಲ್ಲಿ ಕಾಂಗ್ರೆಸ್‌ ಪಕ್ಷ ಗಟ್ಟಿ​ಯಾ​ಗಿದೆ ಎಂಬು​ದನ್ನು ರಾಹುಲ್‌ ಗಾಂಧಿ​ಯ​ವರ ಭಾರತ್‌ ಜೋಡೋ ಯಾತ್ರೆಯೇ ಸಾಕ್ಷಿ​ಯಾ​ಗಿದೆ. ಕಾಂಗ್ರೆಸ್‌ ಪಕ್ಷದ ನಾಯ​ಕತ್ವ ವಹಿ​ಸಿ​ರುವ ಮಲ್ಲಿ​ಕಾ​ರ್ಜುನ ಖರ್ಗೆ ಅವ​ರಿಗೆ ಶಕ್ತಿ ತುಂಬುವ ಅಗ​ತ್ಯ​ವಿದೆ. ಇದ​ಕ್ಕಾಗಿ ರಾಜ್ಯ​ದಲ್ಲಿಯೂ ಕಾಂಗ್ರೆಸ್‌ ಬಲಿ​ಷ್ಠ​ವಾಗಿ ಸಂಘ​ಟ​ನೆ​ಗೊ​ಳ್ಳ​ಬೇ​ಕಿದೆ ಎಂದ​ರು.

Tap to resize

Latest Videos

ಎಚ್‌ಡಿಕೆ ನಡವಳಿಕೆಗೆ ಬೇಸತ್ತು ಜೆಡಿಎಸ್‌ ಬಿಟ್ಟೆ: ಬಾಲಕೃಷ್ಣ

ಮಾಗಡಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ನನ್ನ ಜೊತೆಯಿದ್ದಾರೆ. ತಾವೆಲ್ಲರೂ ಹೃದಯ ಶ್ರೀಮಂತಿಕೆ ಬೆಳಸಿಕೊಂಡು ನಿಮ್ಮ ವಿರೋಧಿಗಳನ್ನೂ ಒಟ್ಟುಗೂಡಿಸಿಕೊಂಡು ಹೋದಾಗ ಮಾತ್ರ ಕಾಂಗ್ರೆಸ್‌ ಪಕ್ಷದ ಸಂಘಟನೆ ಸದೃಢವಾಗಲಿದೆ ಎಂದು ತಿಳಿ​ಸಿದರು. ಕೆಪಿಸಿಸಿ ಸದಸ್ಯ ಕೆ. ರಮೇಶ್‌ ಮಾತನಾಡಿ, ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್‌ ಅವ​ರಿಗೆ ಮುಖ್ಯ​ಮಂತ್ರಿ​ಯಾ​ಗುವ ಅವ​ಕಾಶ ಇದೆ. ಅವರ ಕೈ ಬಲಪಡಿಸಬೇಕಾದರೆ ಮಾಗಡಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಬಾಲಕೃಷ್ಣ ಅವರು ಗೆಲುವು ಸಾಧಿಸಬೇಕು. ಇದ​ಕ್ಕಾಗಿ ಪಕ್ಷದ ಮುಖಂಡರು ಮತ್ತು ಕಾರ್ಯ​ಕ​ರ್ತರು ಒಟ್ಟು​ಗೂಡಿ ಪಕ್ಷ ಸಂಘ​ಟನೆ ಮಾಡ​ಬೇ​ಕು​ ಎಂದರು.

ಬಿಡದಿ-ಕೂಟಲ್ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಾಣಕಲ್‌ ನಟರಾಜು ಮಾತನಾಡಿ, ಚುನಾವಣೆಗಳಲ್ಲಿ ಮುಖಂಡರು ತಮ್ಮ ತಮ್ಮ ಬೂತ್‌ಗಳಲ್ಲಿ ಬಹುಮತ ಪಡೆದರೆ ಮಾತ್ರ ಪಕ್ಷದಲ್ಲಿ ನೀವು ಗುರುತಿಸಿಕೊಳ್ಳಲು ಸಾಧ್ಯ. ಹಾಗಾಗಿ ಪ್ರತಿ ಮನೆಮನೆಗಳಿಗೆ ತೆರಳಿ ಪಕ್ಷದ ಸಂಘಟನೆ ಮಾಡ​ಬೇಕು ಎಂದು ಸಲಹೆ ನೀಡಿ​ದರು. ಬಿಡದಿ ಪುರಸಭೆ ಸದಸ್ಯ ಇಟ್ಟಮಡು ರಾಮಚಂದ್ರಯ್ಯ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ನಮ್ಮ ಜನಾಂಗಕ್ಕೆ ಕೊಟ್ಟಯೋಜನೆಗಳನ್ನು ನಾವು ಮರೆಯುವಂತಿಲ್ಲ, ಹರಿಜನರು ಒಗ್ಗಟ್ಟಿನಿಂದ ನಮ್ಮ ಪಕ್ಷ ಇಂದಿರಾಗಾಂ​ದಿ ಪಕ್ಷ ಎಂಬ ಮನೋಭಾವವನ್ನು ಬೆಳೆಸುವ ಕೆಲಸ ಮಾ​ಡ​ಬೇ​ಕು. ನಮ್ಮ ನಮ್ಮಲ್ಲಿ ಗೊಂದಲಗಳು ಮಾಡಿಕೊಳ್ಳದೆ ಮುಂದಿನ ಚುನಾವಣೆಯಲ್ಲಿ ಬಾಲಕೃಷ್ಣ ಅವರ ಗೆಲುವಿಗೆ ಒಟ್ಟಾಗಿ ಶ್ರಮಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಡಾ. ದೀಪಾ ಮುನಿರಾಜು ಮಾತನಾಡಿದರು. ಜಿಲ್ಲಾ ಎಸ್ಸಿ ವಿಭಾಗದ ಅಧ್ಯಕ್ಷ ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.ಎನ್‌.ಅಶೋಕ್‌ (ತಮ್ಮಾಜಿ), ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಯರೇಹಳ್ಳಿ ಮಂಜು, ತಾಪಂ ಮಾಜಿ ಅಧ್ಯಕ್ಷ ಜಯಚಂದ್ರ, ಕೆಡಿಪಿ ಸದಸ್ಯೆ ಕಾವ್ಯ, ಜಿಲ್ಲಾ ಯುವ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಅನಿಲ್‌ ಜೋಗಿಂದರ್‌, ಬಿಡದಿ ಹೋಬಳಿ ಘಟಕದ ಅಧ್ಯಕ್ಷ ಶೇಖರ್‌, ಮುಖಂಡರಾದ ಮಾಡಬಾಳ್‌ ಜಯರಾಮ್‌, ಶಿವಶಂಕರ್‌, ಗೋಪಿ, ಕೆಂಚನಕುಪ್ಪೆ ರಾಮಣ್ಣ, ಸಿದ್ದರಾಜು, ಕ್ಯಾಸಾಪುರ ಶಿವಣ್ಣ ಮತ್ತಿತರರು ಹಾಜ​ರಿದ್ದರು. ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಬೊಂಬೆ ಉದ್ಯಮದ ಬಗ್ಗೆ ಪ್ರಧಾನಿಗೆ ವಿಶೇಷ ಒಲವು: ಕೇಂದ್ರ ಸಚಿವ ಫಗ್ಗನ್‌ ಸಿಂಗ್‌

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯೋಗದ ಮೇಲೆ ಅಧಿಕಾರ ನಡೆಸುತ್ತಿದ್ದು, ಅಂತ್ಯವಾಗುವ ದಿನಗಳು ಸನಿ​ಹ​ದ​ಲ್ಲಿವೆ. ಪಕ್ಷದಲ್ಲಿ ನೀಡಿ​ರುವ ಜವಾ​ಬ್ದಾರಿಯನ್ನು ಸಮ​ರ್ಥ​ವಾಗಿ ನಿಭಾ​ಯಿಸಿ ಉತ್ತಮ ಸಂಘ​ಟನೆ ಮಾಡಿ ಕಾಂಗ್ರೆಸನ್ನು ಅಧಿ​ಕಾ​ರಕ್ಕೆ ತರ​ಬೇಕು. ಆಗ ನಿಮಗೂ ಉತ್ತಮ ಸ್ಥಾನ​ಗಳು ಸಿಗ​ಲಿವೆ.
- ಎಚ್‌.ಸಿ.​ ಬಾ​ಲ​ಕೃಷ್ಣ, ಮಾಜಿ ಶಾಸಕ

click me!