ಆಸ್ಪತ್ರೆಯಲ್ಲಿ ಸಿ.ಟಿ. ರವಿ: ವೀರಶೈವ ಸಮಾವೇಶದಲ್ಲಿ ಭಾವುಕರಾದ ಪತ್ನಿ ಪಲ್ಲವಿ

By BK AshwinFirst Published Apr 16, 2023, 3:34 PM IST
Highlights

ವೀರಶೈವ ಲಿಂಗಾಯತ ಸಮಾಜ ಒಂದು ಸಮಾಜ ಅಲ್ಲ, ಅದು ಶಕ್ತಿ. ದೇಶದ ಉದ್ಧಗಲಕ್ಕೂ ತನ್ನದೇ ಆದ ಛಾಪು ಮೂಡಿಸಿರೋ ಸಹೃದಯಿ ಸಮುದಾಯ ಎಂದು ಪಲ್ಲವಿ ರವಿ ಹೇಳಿದ್ದಾರೆ.

ಚಿಕ್ಕಮಗಳೂರು (ಏಪ್ರಿಲ್ 16, 2023): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ನಗರ ಶಾಸಕ ಸಿ.ಟಿ. ರವಿಗೆ ಅನಾರೋಗ್ಯ ಉಂಟಾಗಿದ್ದು, ಈ ಹಿನ್ನೆಲೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಶಾಸಕ ಸಿ.ಟಿ.ರವಿ ಗೈರಿನಲ್ಲಿ ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ವೀರಶೈವ ಸಮಾವೇಶದಲ್ಲಿ ಅವರ ಪತ್ನಿ ಭಾಗಿಯಾಗಿದ್ದಾರೆ. ಈ ವೇಳೆ ಅವರು ಭಾವುಕರಾಗಿದ್ದಾರೆ. 

ಶಾಸಕ ಸಿ.ಟಿ.ರವಿಗೆ ಕಿಡ್ನಿ ಸ್ಟೋನ್‌ ಆಗಿದ್ದು, ಈ ಹಿನ್ನೆಲೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣಕ್ಕಾಗಿ ಶಾಸಕ ಸಿ.ಟಿ.ರವಿ ಗೈರಿನಲ್ಲಿ ವೀರಶೈವ ಸಮಾವೇಶಕ್ಕೆ ಬಂದಿರುವ ಅವರ ಪತ್ನಿ ಪಲ್ಲವಿ ರವಿ ವೇದಿಕೆ ಮೇಲೆ ಭಾವುಕರಾಗಿದ್ದಾರೆ. ವೀರಶೈವ ಸಮಾವೇಶದ ವೇದಿಕೆ ಮೇಲೆ ಸಿ.ಟಿ.ರವಿ ಗೈರಿನಲ್ಲಿ ಅವರ ಸ್ಥಾನ ತುಂಬಿದ ಪಲ್ಲವಿ‌ ಸಿ.ಟಿ. ರವಿ ಅವರು ಐದು ನಿಮಿಷ ಅವರನ್ನು ಕಳಿಸಿ ಅಂತ ವೈದ್ಯರಿಗೆ ಮನವಿ ಮಾಡಿದೆ. ಆದರೆ, ಇನ್ಫೆಕ್ಷನ್ ಆಗುತ್ತೆ ಬೇಡವೇ ಬೇಡ ಅಂತ ವೈದ್ಯರು ಹೇಳಿದ್ರು. 

Latest Videos

ಇದನ್ನು ಓದಿ: ಆರೋಗ್ಯದಲ್ಲಿ ಏರುಪೇರು: ಸಿ.ಟಿ.ರವಿ ಆಸ್ಪತ್ರೆಗೆ ದಾಖಲು

ವೀರಶೈವ ಲಿಂಗಾಯತ ಸಮಾಜ ಒಂದು ಸಮಾಜ ಅಲ್ಲ, ಅದು ಶಕ್ತಿ. ದೇಶದ ಉದ್ಧಗಲಕ್ಕೂ ತನ್ನದೇ ಆದ ಛಾಪು ಮೂಡಿಸಿರೋ ಸಹೃದಯಿ ಸಮುದಾಯ. ಸಿ.ಟಿ. ರವಿ ಅವರು ಬರಲು ಆಗಿಲ್ಲ, ಅದಕ್ಕೆ ಕ್ಷಮೆ ಕೇಳ್ತೀನಿ. ನಿಮ್ಮ ಪ್ರೀತಿ ಮಗನಿಗೆ ಮತ ಹಾಕಿ ಉನ್ನತ ಸ್ಥಾನಕ್ಕೇರಿಸಿ ಎಂದು‌ ಮನವಿ ಮಾಡುತ್ತಿದ್ದೇನೆ ಎಂದು ಪಲ್ಲವಿ ರವಿ ಹೇಳಿದ್ದಾರೆ.

ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರ ದಿನಚರಿ ಬೆಳಗ್ಗೆ 4.30ಕ್ಕೆ ಆರಂಭವಾಗುತ್ತದೆ. ಇನ್ನು, ರಾತ್ರಿ 12ಕ್ಕೆ ಅವರು ಮಲಗುತ್ತಾರೆ. ನಾನು ಅವರನ್ನ ನೋಡೋದೇ ತಿಂಗಳಿಗೆ 2 - 3 ಬಾರಿ ಅಷ್ಟೇ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರ ಪತ್ನಿ ಪಲ್ಲವಿ ರವಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಮತ್ತೊಂದು ವಿಕೆಟ್‌ ಪತನ: ಕಮಲಕ್ಕೆ ಗುಡ್‌ಬೈ ಹೇಳಿದ ಎಂ.ಪಿ. ಕುಮಾರಸ್ವಾಮಿ

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಸಿ.ಟಿ.ರವಿ ವಿರುದ್ಧ ನಕಲಿ ಪೋಸ್ಟ್: ಪೊಲೀಸ್ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಪೊಲೀಸರ ಮಧ್ಯೆ ವಾಕ್ಸಮರ!

click me!