President Election ರಾಷ್ಟ್ರಪತಿ ಚುನಾವಣೆಯಲ್ಲಿ ಭರ್ಜರಿ ಕ್ರಾಸ್‌ ವೋಟಿಂಗ್..!

Published : Jul 18, 2022, 04:10 PM IST
President Election ರಾಷ್ಟ್ರಪತಿ ಚುನಾವಣೆಯಲ್ಲಿ ಭರ್ಜರಿ ಕ್ರಾಸ್‌ ವೋಟಿಂಗ್..!

ಸಾರಾಂಶ

ರಾಷ್ಟ್ರಪತಿ ಚುನಾವಣೆಗೆ ದೇಶದಲ್ಲಿ ಮತದಾನ ನಡೆಯುತ್ತಿದೆ. ಎನ್‌ಡಿಎ, ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿದ್ದು, ಯಶವಂತ್ ಸಿನ್ಹಾ ಅವರು ವಿರೋಧ ಪಕ್ಷದ ಆಯ್ಕೆಯಾಗಿದ್ದಾರೆ. ಜುಲೈ 21 ರಂದು ಮತ ಎಣಿಕೆ ನಂತರ ದೇಶದ 15ನೇ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬುದು ತಿಳಿಯಲಿದೆ.

ನವದೆಹಲಿ (ಜುಲೈ 18): ದೇಶದ 15ನೇ ರಾಷ್ಟ್ರಪತಿ ಆಯ್ಕೆಗೆ ಸೋಮವಾರ ಮತದಾನ ನಡೆದಿದೆ. ಯುಪಿ, ಗುಜರಾತ್, ಒಡಿಶಾದಿಂದ ಅಸ್ಸಾಂವರೆಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ ಭರ್ಜರಿಯಾಗಿ ನಡೆದಿದೆ. ಯುಪಿಯ ಬರೇಲಿಯ ಎಸ್‌ಪಿ ಶಾಸಕ ಶಹಜೀಲ್ ಇಸ್ಲಾಂ ಅವರು ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದರು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ವಿವಾದಾತ್ಮಕ ಹೇಳಿಕೆಯ ನಂತರ ಶಹಜೀಲ್ ಇಸ್ಲಾಂ ಬೆಳಕಿಗೆ ಬಂದಿದ್ದರು. ಯೋಗಿ ಆದಿತ್ಯನಾಥ್‌ ಕುರಿತಾದ ವಿವಾದಾತ್ಮಕ ಹೇಳಿಕೆಯ ಬಳಿಕ ಅವರ ಆಸ್ತಿಗಳ ಮೇಲೂ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗಿದೆ. ಮತ್ತೊಂದೆಡೆ, ಗುಜರಾತ್‌ನಲ್ಲಿ ಎನ್‌ಸಿಪಿ ಮತ್ತು ಒಡಿಶಾ-ಅಸ್ಸಾಂನಲ್ಲಿ ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಶಹಜೀಲ್ ಇಸ್ಲಾಂ ಉತ್ತರ ಪ್ರದೇಶದ ಬರೇಲಿಯ ಎಸ್‌ಪಿ ಶಾಸಕ. ಶಹಜೀಲ್ ಇಸ್ಲಾಂ ಅವರು ಯೋಗಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅ ಬಳಿಕ ಅವರು ಅಕ್ರಮವಾಗಿ ನಿರ್ಮಾಣ ಮಾಡಿದ್ದ ಪೆಟ್ರೋಲ್‌ ಪಂಪ್‌ಗಳು ಬುಲ್ಡೋಜರ್‌ ಬಳಸಿ ಸರ್ಕಾರ ಧ್ವಂಸ ಮಾಡಿದ್ದರು. ಎಸ್‌ಪಿ ಪಕ್ಷದ ನಾಯಕರನ್ನು ಭೇಟಿಯಾಗಲು ಅಜಂ ಖಾನ್‌ ನಿರಾಕರಿಸಿದ್ದ ವೇಳೆ ಅವರ ಬೆಂಬಲವಾಗಿ ನಿಂತುಕೊಂಡಿದ್ದರು.

ಮುಲಾಯಂ ಸಿಂಗ್ ಯಾದವ್ (Mulayam Singh Yadav) ಅವರನ್ನು ಐಎಸ್‌ಐ ಏಜೆಂಟ್ ಎಂದು ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ(yashwant sinha) ಬಣ್ಣಿಸಿದ್ದಾರೆ ಎಂದು ಪ್ರಸ್ಪ (ಪ್ರಗತಿಶೀಲ ಸಮಾಜವಾದಿ ಪಕ್ಷ-ಲೋಹಯಾ) ಮುಖ್ಯಸ್ಥ ಮತ್ತು ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ (Shivpal Singh Yadav ) ಹೇಳಿದ್ದಾರೆ. ನಾವು ಅವರನ್ನು ಬೆಂಬಲಿಸುವುದಿಲ್ಲ. ಮುಲಾಯಂ ಸಿಂಗ್ ಅವರ ಸಿದ್ಧಾಂತವನ್ನು ಅನುಸರಿಸುವ ಎಸ್‌ಪಿ ನಾಯಕರು ಅಂತಹ ಆರೋಪಗಳನ್ನು ಮಾಡುವ ನಾಯಕನಿಗೆ ಎಂದಿಗೂ ಮತ ಹಾಕುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ, ಮತ ಚಲಾಯಿಸುವ ಮುನ್ನ ಮಾಜಿ ಸಿಎಂ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಯಶವಂತ್ ಸಿನ್ಹಾ ಅವರಿಗೆ ಮತ ಹಾಕುವುದಾಗಿ ಹೇಳಿದ್ದಾರೆ.

ಗುಜರಾತ್‌ನಲ್ಲೂ ಅಡ್ಡ ಮತದಾನ: ಗುಜರಾತ್‌ನಲ್ಲಿ ಶರದ್ ಪವಾರ್ ಅವರ ಪಕ್ಷದ ಎನ್‌ಸಿಪಿ ಶಾಸಕ ಕಂಧಲ್ ಜಡೇಜಾ ಅವರು ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು (draupadi murmu) ಅವರಿಗೆ ಮತ ಹಾಕಿದ್ದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ, ಮತದಾನಕ್ಕೆ ವಿಶೇಷ ಮಾರ್ಕರ್ ಪೆನ್‌,ಮೈಸೂರಿನಲ್ಲಿ ತಯಾರಾಗುತ್ತೆ ಅಳಿಸಲಾಗದ ಶಾಯಿ!

ಆತ್ಮಸಾಕ್ಷಿಯ ಮತ ಹಾಕಿದ್ದೇನೆ: ಒಡಿಶಾದ ಕಾಂಗ್ರೆಸ್ (Congress) ಶಾಸಕ ಮೊಹಮದ್ ಮುಕಿಮ್‌, ತಾವು ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿರುವುದಾಗಿ ತಿಳಿಸಿದ್ದಾರೆ.  ಇದು ನನ್ನ ವೈಯಕ್ತಿಕ ನಿರ್ಧಾರ ಎಂದ ಅವರು, ನನ್ನ ಮನದಾಳದ ಮಾತಿಗೆ ಕಿವಿಗೊಟ್ಟಿದ್ದೇನೆ, ನನ್ನ ಮಣ್ಣಿಗಾಗಿ ಏನಾದರೂ ಮಾಡು ಎಂದು ಕೇಳಿಕೊಂಡೆ. ಅದಕ್ಕಾಗಿಯೇ ನಾನು ದ್ರೌಪದಿ ಮುರ್ಮುಗೆ ಮತ ಹಾಕಿದ್ದೇನೆ. ಆದರೆ, ಒಡಿಶಾದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡದ ಕಾರಣ ಮುಕಿಮ್ ಕೋಪಗೊಂಡಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.

ಇದನ್ನೂ ಓದಿ: presidential election 2022; ಮತಗಳು ಅಸಿಂಧು ಆಗದಂತೆ ರಾಜ್ಯ ಬಿಜೆಪಿ ಎಚ್ಚರಿಕೆ

ಅಸ್ಸಾಂನಲ್ಲೂ ಅಡ್ಡ ಮತದಾನ!: ಅಸ್ಸಾಂನಲ್ಲಿ ಕಾಂಗ್ರೆಸ್ ಶಾಸಕರು ದೊಡ್ಡ ಪ್ರಮಾಣದಲ್ಲಿ ಅಡ್ಡ ಮತದಾನ ಮಾಡಿದ್ದಾರೆ ಎಂದು ಎಐಯುಡಿಎಫ್ ಶಾಸಕ ಕರಿಮುದ್ದೀನ್ ಬರ್ಬುಯಾ ಹೇಳಿದ್ದಾರೆ. ಕರಿಮುದ್ದೀನ್ ಪ್ರಕಾರ, ಕಾಂಗ್ರೆಸ್ ಭಾನುವಾರ ಮತದಾನಕ್ಕೆ ಕರೆ ನೀಡಿತ್ತು. ಕೇವಲ 2-3 ಶಾಸಕರು ಹಾಗೂ ಜಿಲ್ಲಾಧ್ಯಕ್ಷರು ಮಾತ್ರ ಸಭೆಗೆ ಆಗಮಿಸಿದ್ದರು. ಇದರಿಂದ ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿರುವುದು ಸ್ಪಷ್ಟವಾಗಿದೆ. ಅಷ್ಟೇ ಅಲ್ಲ, 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದು,  ಫಲಿತಾಂಶದಲ್ಲಿ ನೀವು ಸಂಖ್ಯೆ ತಿಳಿಯಬಹುದು ಎಂದು ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ