ಅಡ್ಡ ಮತದಾನದ ಎಫೆಕ್ಟ್, Gubbi Srinivas ಮನೆಗೆ ಮುತ್ತಿಗೆ

Published : Jun 11, 2022, 05:46 PM IST
ಅಡ್ಡ ಮತದಾನದ ಎಫೆಕ್ಟ್, Gubbi Srinivas ಮನೆಗೆ ಮುತ್ತಿಗೆ

ಸಾರಾಂಶ

ಜೆಡಿಎಸ್ ಕಾರ್ಯಕರ್ತರು ತುಮಕೂರಿನ ವಿದ್ಯಾನಗರದಲ್ಲಿರುವ ಶ್ರೀನಿವಾಸ್ ಮನೆ ಮೇಲೆ ಮುತ್ತಿಗೆ ಹಾಕಿ ಪಕ್ಷದ್ರೋಹಿ ಶ್ರೀನಿವಾಸ್ ಈ ಕೂಡಲೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಅಂತಾ ಆಗ್ರಹಿಸಿದ್ದಾರೆ.

ತುಮಕೂರು (ಜೂ.11):  ಅಡ್ಡ ಮತದಾನದ ಬೆಂಕಿ ತುಮಕೂರಿನಲ್ಲಿ ಜೋರಾಗಿಯೇ ಉರಿಯುತ್ತಿದೆ. ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅತೃಪ್ತ ಶಾಸಕ ಗುಬ್ಬಿ ಶ್ರೀನಿವಾಸ್ ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದಾರೆ ಅಂತಾ ಪಕ್ಷದ ವರಿಷ್ಟರೇ ಆರೋಪ ಮಾಡಿದ್ರು. ಇದರ ಕಾಳ್ಗಿಚ್ಚು ತುಮಕೂರಿನಲ್ಲಿ ವ್ಯಾಪಕವಾಗಿಯೇ ಹಬ್ಬಿತ್ತು. ಪರಿಣಾಮ ಜೆಡಿಎಸ್ ಕಾರ್ಯಕರ್ತರು ತುಮಕೂರಿನ ವಿದ್ಯಾನಗರದಲ್ಲಿರುವ ಶ್ರೀನಿವಾಸ್ ಮನೆ ಮೇಲೆ ಮುತ್ತಿಗೆ ಹಾಕಿದ್ರು. 

ಪಕ್ಷದ್ರೋಹಿ ಶ್ರೀನಿವಾಸ್ ಈ ಕೂಡಲೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಅಂತಾ ಆಗ್ರಹಿಸಿದ್ರು. ಈ ವೇಳೆ ಶ್ರೀನಿವಾಸ್ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಪರಸ್ಪರ ತಳ್ಳಾಟ, ನೂಕಾಟ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ನಡುವೆ ಶ್ರೀನಿವಾಸ್ ಮತ್ತು ಶಿರಾ ನಗರಸಭೆ ಅಧ್ಯಕ್ಷ ರವಿಶಂಕರ್ ನಡುವೆ ಮಾತಿಗೆ ಮಾತು ನಡೆದು ಕೈ ಕೈ ಮಿಲಾಯಿಸಿಕೊಂಡ ಘಟನೆಯೂ ನಡೆಯಿತು.

ಸ್ವಚ್ಚತೆಗಾಗಿ ಮೋದಿಗೆ ನಟ ಅನಿರುದ್ಧ ಪತ್ರ, ಶೌಚಾಲಯಕ್ಕಾಗಿ ವಿದ್ಯಾರ್ಥಿನಿ ಪತ್ರ!

 ಸುಮಾರು ಒಂದು ಘಂಟೆಗಳ ಕಾಲ ಬಿಗುವಿನ ವಾತಾವರಣ ಮುಂದುವರೆದಿತ್ತು. ಹೆಚ್ಚಿನ ಪೊಲೀಸ್ ನಿಯೋಜನೆಯಿಂದಾಗಿ ಪರಿಸ್ಥಿತಿ ತಹಿಬದಿಗೆ ಬಂತು. ಈ ವೇಳೆ ಮಾತನಾಡಿದ ಶಾಸಕ ಶ್ರೀನಿವಾಸ್, ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ರು. ಕುಮಾರಸ್ವಾಮಿ ಮೂರು ಬಿಟ್ಟವರು. ಮಾನ, ಮರ್ಯಾದೆ ಏನು ಇಲ್ಲ. ಆತನೇ ಅಡ್ಡ ಮತದಾನ ಮಾಡಿಸಿ ಈ ರೀತಿ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾನೆ. ಅವನೇನು ಸತ್ಯ ಹರಿಶ್ಚಂದ್ರನಾ ಅಂತಾ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ರು. 

ಪ್ರತಿಭಟನೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಬೆಂಬಲಿಗರೇ ಹೆಚ್ಚಾಗಿದ್ದು, ಶ್ರೀನಿವಾಸ್ ವಿರುದ್ಧ ಧಿಕ್ಕಾರ ಕೂಗಿದ್ದು ಕಂಡುಬಂತು. ಪರಸ್ಪರ ಅಣ್ಣ ತಮ್ಮಂದಿರಂತಿದ್ದ ಗೌರಿಶಂಕರ್ ಮತ್ತು ಶ್ರೀನಿವಾಸ್ ನಡುವೆ ಪಕ್ಷದ ವಿಚಾರವಾಗಿ ಭಿನ್ನಾಭಿಪ್ರಾಯ ಕಾಣಿಸಿಕೊಂಡಿರೋದು ಈ ಪ್ರತಿಭಟನೆಯ ಮೂಲಕ ಬಹಿರಂಗವಾಯ್ತು. ಇದು ಮುಂದಿನ ದಿನಗಳಲ್ಲಿ ಯಾವ ಹಂತ ತಲುಪುತ್ತೋ ಅನ್ನೋದನ್ನ ಕಾಡುನೋಡಬೇಕಿದೆ.

Udupi; 16 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ 

ನಾನ್‌ ಪೇಪರ್ ತೋರ್ಸೋವಾಗ ಕುಮಾರಸ್ವಾಮಿ ಕತ್ತೆ ಕಾಯ್ತಿದ್ನಾ?: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ  ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶಾಸಕ ಶ್ರೀನಿವಾಸ್ ತಿರುಗಿ ಬಿದ್ದಿದ್ದಾರೆ. 

 ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಏಕವಚನದಲ್ಲೇ ಮಾತನಾಡಿ ಓಪನ್ ಚಾಲೆಂಜ್ ಹಾಕಿದ್ದಾರೆ. ಕುಮಾರಸ್ವಾಮಿ ಏನು ಉತ್ತಮನಾ?. ಯಾವುದರಲ್ಲಿ ಅವನು ಉತ್ತಮ, ಬೆಳಗ್ಗೆ ಒಂದು ಹೇಳ್ತಾನೆ, ಮಧ್ಯಾಹ್ನ ಒಂದು ಹೇಳ್ತಾನೆ, ಸಂಜೆ ಒಂದು ಹೇಳ್ತಾನೆ. ನಾನು ಮತ ಹಾಕುವಾಗ ಕ್ಲಿಯರ್ 3 ರಿಂದ 4 ನಿಮಿಷ ಪೇಪರ್ ಇಟ್ಕೊಂಡು ತೊರ್ಸಿದಿನಿ. ಅವಾಗ ನೋಡ್ಬೇಕಿತ್ತು. ಅವನೇನು ಕತ್ತೆ ಕಾಯ್ತಿದ್ದನಾ? ತೆಗಿ ಹೆಬ್ಬಟ್ಟನ್ನ ಅನ್ನಬೇಕಿತ್ತು. ನಾನು ಸರಿಯಾಗಿಯೇ ಪೇಪರ್ ತೊರ್ಸಿದಿನಿ. ಅವನು ಎಜುಕೇಟೆಡ್ ಅಲ್ವಾ? ಹೆಬ್ಬೆಟ್ಟನ್ನ ಮುಚ್ಚಿಕೊಂಡಿದಿಯಾ, ಪುಲ್ ಪೇಪರ್ ತೊರ್ಸಯ್ಯ ಅನ್ನಬೇಕಿತ್ತು. ಇವರ ಮನೆಯವರೇ ನಾಟಕ ಮಾಡ್ಕೊಂಡು ನನ್ನನ್ನ ಮುಗಿಸ್ಬೇಕು ಅಂತ ಅವರ ಹಿತೈಸಿಗಳಿಂದ ಕ್ರಾಸ್ ವೋಟ್ ಮಾಡ್ಸಿ, ನನ್ನ ಮೇಲೆ ಗೂಬೆ ಕುರ್ಸೋ ಕೆಲಸ ಮಾಡಿದ್ದಾರೆ ಅಂತ ಕಿಡಿ ಕಾರಿದ್ದಾರೆ. 

ನನಗೂ ಕುಮಾರಸ್ವಾಮಿಗೂ ಆಗಲ್ಲ. ನನ್ನ ವಿರುದ್ಧ ಬೇರೆ ಅಭ್ಯರ್ಥಿ ಹಾಕಿ ಬೇರೆ ರೀತಿ ಕಸರತ್ತು ಮಾಡಿದ್ದಾರೆ. ನನ್ನನ್ನ ಸೋಲಿಸ್ಲೇಬೇಕು ಅಂತ ಸಂಚು ರೂಪಿಸಿದ್ದಾರೆ. ನನ್ನ ಮೇಲೆ ಮಾಡಿರುವ ಷಡ್ಯಂತ್ರ ಇದಾಗಿದೆ. ಇದೇ ಕುಮಾರಸ್ವಾಮಿ ಕ್ರಾಸ್ ವೋಟ್ ಮಾಡ್ಸಿ ಅದನ್ನ ನನ್ನ ಮೇಲೆ ಹಾಕ್ತಿದ್ದಾನೆ. ಅವರಿಗೆ ಗೊತ್ತು ನಮ್ಮ ಅಭ್ಯರ್ಥಿ ಗೆಲ್ಲಲ್ಲ ಅಂತ. ಯಾವ್ದೋ ಬೇರೆ ಕ್ರಾಸ್ ವೋಟ್ ಮಾಡ್ಸಿ ಈ ರೀತಿಯಾಗಿ ಮಾಡಿದ್ದಾನೆ. ಅವನ ಯೋಗ್ಯತೆಗೆ ಯಾರು ವೋಟ್ ಹಾಕಲ್ಲ ಅಂತಾನೂ ಗೊತ್ತಿದೆ. ನನ್ನ ತೇಜೊವಧೆ ಮಾಡೋಕೆ ಈ ರೀತಿಯಾಗಿ ಮಾಡಿದ್ದಾನೆ. ನಾನು ಇವನಿಗೆ ಹೆದರಿಕೊಂಡು, ಬೇರೆ ಅವರಿಗೆ ಹೆದರಿಕೊಂಡು ಯಾರಿಗೂ ನಾನು ಕಚ್ಚೆ ಕಟ್ಟಲ್ಲ. ಯಾರಿಗೂ ಕೇರ್ ಮಾಡಲ್ಲ. ನಾನು ನನ್ನ ಸ್ವಾಭಿಮಾನ ಹಾಗೂ ನನ್ನ ಮನಸಾಕ್ಷಿ ವಿರುದ್ಧ ಯಾವತ್ತು ಹೊಗಲ್ಲ. ಇವರು ಇದೆಲ್ಲಾ ನಾಟಕ ಮಾಡ್ತಿದ್ದಾರೆ ಅಂತ ಎಚ್‌ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದರಾಮಯ್ಯ ಬಳಿಕ ಸತೀಶ್‌ ಜಾರಕಿಹೊಳಿ ಸಿಎಂ ಆದರೆ ಖುಷಿ: ಬಿ.ಕೆ.ಹರಿಪ್ರಸಾದ್‌
ಇಂದಿನಿಂದ ಕಾವೇರಲಿದೆ ಉತ್ತರ ಕರ್ನಾಟಕದ ಚರ್ಚೆ-3 ದಿನ ವಿಧಾನಮಂಡಲದಲ್ಲಿ ಈ ಬಗ್ಗೆ ಕಲಾಪ