ಚಿತ್ರದುರ್ಗ ಮೆಡಿಕಲ್ ಕಾಲೇಜು ಕ್ರೆಡಿಟ್‌ಗಾಗಿ ಕೈ- ಕಮಲ ನಾಯಕರ ವಾಕ್ಸಮರ..!

By Girish Goudar  |  First Published Feb 20, 2024, 8:06 PM IST

ಸರ್ಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣ ಸಂಬಂಧ ಈಗಾಗಲೇ ಸರ್ಕಾರಗಳು ಘೋಷಣೆ ಮಾಡಿ ಅನುದಾನ ಕೂಡ ಬಿಡುಗಡೆ ಮಾಡಿ ಕಾಮಗಾರಿ ಶುರುವಾಗಿದೆ. ಆದ್ರೆ ಈಗ ಕಾಂಗ್ರೆಸ್, ಬಿಜೆಪಿ ನಾಯಕರು ಕ್ರೆಡಿಟ್ ಗಾಗಿ ವಾಕ್ಸಮರ ಆರಂಭಿಸಿದ್ದಾರೆ. 


ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಫೆ.20):  ಕೋಟೆನಾಡಿನ ಜನರ ಬಹು ವರ್ಷಗಳ ಕನಸು ಸರ್ಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣ. ಈಗಾಗಲೇ ಸರ್ಕಾರಗಳು ಘೋಷಣೆ ಮಾಡಿ ಅನುದಾನ ಕೂಡ ಬಿಡುಗಡೆ ಮಾಡಿ ಕಾಮಗಾರಿ ಶುರುವಾಗಿದೆ. ಆದ್ರೆ ಈಗ ಕಾಂಗ್ರೆಸ್, ಬಿಜೆಪಿ ನಾಯಕರು ಕ್ರೆಡಿಟ್ ಗಾಗಿ ವಾಕ್ಸಮರ ಆರಂಭಿಸಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ.

Tap to resize

Latest Videos

undefined

ಮೆಡಿಕಲ್ ಕಾಲೇಜು ನಿರ್ಮಾಣ ಮಾಡಬೇಕು ಎಂದು ಕೋಟೆನಾಡು ಚಿತ್ರದುರ್ಗದ ಜನತೆ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಕಳೆದೊಂದು ದಶಕದಿಂದಲೂ ರೈತರು, ವಿವಿಧ ಸಂಘಟನೆಗಳು, ಕನ್ನಡಪರ ಹೋರಾಟಗಾರರು ಚಿತ್ರದುರ್ಗಕ್ಕೆ ಸರ್ಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣ ಆಗಬೇಕು ಎಂದು ಸಾಕಷ್ಟು ಹೋರಾಟ ಮಾಡಿದ್ದರು. ಅದರ ಪ್ರತಿ ಫಲವಾಗಿ ಕಳೆದ ಯಡಿಯೂರಪ್ಪ ಸಿಎಂ ಆಗಿದ್ದ ಸಮಯದಲ್ಲಿ ಆರೋಗ್ಯ ಸಚಿವರಾಗಿದ್ದ ಸುಧಾಕರ್ ಹಾಗೂ ಅಂದಿನ ನೀರಾವರಿ ಸಚಿವರಾಗಿದ್ದ ಬೊಮ್ಮಾಯಿ ಖುದ್ದು ಚಿತ್ರದುರ್ಗಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮೆಡಿಕಲ್‌ ಕಾಲೇಜು ಮಂಜೂರು ಮಾಡಿಸುವುದಾಗಿ ಭರವಸೆ ನೀಡಿ ಹೊರಿಟಿದ್ರು. ಬಳಿಕ ಬೊಮ್ಮಾಯಿ ಸಿಎಂ ಆದ ಅವಧಿಯಲ್ಲಿ ಬಜೆಟ್ ನಲ್ಲಿ 500 ಕೋಟಿ ವೆಚ್ಚದಲ್ಲಿ ಚಿತ್ರದುರ್ಗಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. 

ಭವಿಷ್ಯದಲ್ಲಿ ಬಡವರಿಗಾಗಿ ಮತ್ತಷ್ಟು ಗ್ಯಾರಂಟಿ ಯೋಜನೆ: ಸಚಿವ ಡಿ.ಸುಧಾಕರ್

ಅದರನ್ವಯ ಕಳೆದ ಒಂದು ವರ್ಷದಿಂದ ಕಾಮಗಾರಿ ಶುರುವಾಗಿದ್ದು, ಈಗಾಗಲೇ ೩೦೦ ಕ್ಕೂ ಅಧಿಕ ವಿಧ್ಯಾರ್ಥಿಗಳು ಅಡ್ಮಿಶನ್ ಆಗಿದ್ದಾರೆ. ಆದ್ರೆ ಈ ಕಾಂಗ್ರೆಸ್ ನವರು ನಾವೇ ಹಣ ಬಿಡಿಗಡೆ ಮಾಡಿಸಿದ್ದೀವಿ ಎಂದು ಬಡಾಯಿ ಕೊಚ್ಚಿಕೊಂಡು ಜನರಿಗೆ ಸುಳ್ಳು ಮಾಹಿತಿ ಹಂಚ್ತಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಹಣ ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಭರದಿಂದ ಸಾಗ್ತಿದೆ. ಈ ಬಾರಿಯ ಬಜೆಟ್ ನಲ್ಲಿ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜಿಗೆ ೫೦೦ ಕೋಟಿ ಕೊಡಲಾಗಿದೆ ಎಂದು ಸುಳ್ಳು ಮಾಹಿತಿ ಹರಿದಾಡಿಸುತ್ತಿದ್ದಾರೆ. ಈ ಬಜೆಟ್ ನಲ್ಲಿ ಜಿಲ್ಲೆಗೆ ಶೂನ್ಯ ಸಂಪಾದನೆ ಸಿಕ್ಕಿದೆ ಎಂದು ಬಿಜೆಪಿ ಹಿರಿಯ ಮಾಜಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ವ್ಯಂಗ್ಯ ಮಾಡಿದರು.

ಇನ್ನೂ ಈ ವಿಚಾರವಾಗಿ ಉಸ್ತುವಾರಿ ಸಚಿವರೆನ್ನೇ ವಿಚಾರಿಸಿದ್ರೆ, ಮಾಜಿ ಶಾಸಕರು ಮೊದಲು ಮೆಡಿಕಲ್ ಕಾಲೇಜು ಯಾರ ಅವಧಿಯಲ್ಲಿ ಮಂಜೂರಾಗಿದ್ದು ಎಂದು ನೆನಪು ಮಾಡಿಕೊಳ್ಳಬೇಕಿದೆ. ನಮ್ಮ ಸಿದ್ದರಾಮಯ್ಯ ಸಿಎಂ ಆಗಿದ್ದಾಗ DMF ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ರು. ತಿಪ್ಪಾರೆಡ್ಡಿ ಅವರದ್ದು ಕಾಂಗ್ರೆಸ್ ರಕ್ತ, ಸದ್ಯ ಬಿಜೆಪಿಯಲ್ಲಿ ಇದೀವಿ ಅಂತ ಈ ರೀತಿ ಮಾತಾಡ್ತಾರೆ. ಮೊದಲು ಅವರು ಯಾರ ಅವಧಿಯಲ್ಲಿ ಮಂಜೂರು ಮಾಡಲಾಗಿದೆ ಎಂದು ತಿಳಿದುಕೊಳ್ಳಲಿ. ಕಳೆದ ಕೇಂದ್ರ ಬಜೆಟ್ ನಲ್ಲಿ ಅವರು ಘೋಷಣೆ ಮಾಡಿರುವ 5300 ಕೋಟಿ ಹಣ ಮೊದಲು ಬಿಡುಗಡೆ ಮಾಡಿಸಲಿ ಎಂದು ಸವಾಲಾಕಿದರು. ಅಲ್ಲದೇ ಈ ಬಾರಿಯ ಬಜೆಟ್ ನಲ್ಲಿ ಮೆಡಿಕಲ್ ಕಾಲೇಜಿಗೆ ಹಣ ಬಿಡುಗಡೆ ಆಗಿದೆ ಎಂದು ನಾವು ಹೇಳಿಲ್ಲ. ಕಾಮಗಾರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದ್ದಾರೆ. 

ಈಗಾಗಲೇ ಸರ್ಕಾರಿ ಜಿಲ್ಲಾ ಆಸ್ಪತ್ರೆ ಹಿಂಭಾಗ ಮೆಡಿಕಲ್‌ ಕಾಲೇಜು ನಿರ್ಮಾಣದ ಕಾಮಗಾರಿ ಶುರುವಾಗಿದ್ದು, ಇತ್ತ ಕೈ, ಕಮಲ ಕಲಿಗಳು ಕ್ರೆಡಿಟ್ ಗಾಗಿ ನಾ ಮುಂದು ತಾ ಮುಂದು ಎಂದು ವಾಕ್ಸಮರ ಶುರು ಮಾಡಿಕೊಂಡಿದ್ದಾರೆ. ಅದೇನೆ ಇರ್ಲಿ ಜಿಲ್ಲೆಗೆ ಅನುಕೂಲ ಆಗಿದ್ದೇ ಪುಣ್ಯ ಎಂತಿದ್ದಾರೆ ಸ್ಥಳೀಯರು.

click me!