ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಬಿ. ಶ್ರೀರಾಮುಲು ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮಾರ್ಗವನ್ನೇ ಅನುಸರಿಸಿದ್ದಾರೆ.
ಬೆಂಗಳೂರು(ಆ.11): ಕೊರೋನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಿಂದಲೇ ಆಡಳಿತದ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ.
ಹೌದು..ಕೋವಿಡ್ ಸೋಂಕಿಗೆ ತುತ್ತಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಶ್ರೀರಾಮುಲು ತಮ್ಮ ಇಲಾಖೆಯ ಕಡತಗಳ ಪರಿಶೀಲನೆ ಮಾಡಿದರು.
ಆಸ್ಪತ್ರೆಯಿಂದಲೇ ಸಿಎಂ ಬಿಎಸ್‌ವೈ ಕೆಲಸ: ಚಿಕಿತ್ಸೆ ಪಡೆಯುತ್ತಲೇ ಕಡತ ಪರಿಶೀಲನೆ!
ಈ ಬಗ್ಗೆ ಟ್ವೀಟ್ ಮಾಡಿರುವ ರಾಮುಲು, ಕೊರೋನಾ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ, ಸೂಕ್ತ ಸುರಕ್ಷಿತ ಕ್ರಮಗಳ ನಡುವೆ ಕೆಲವು ಕಡತಗಳ ಪರಿಶೀಲನೆ ಮಾಡಲಾಯಿತು.
ಕೊರೊನ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ, ಸೂಕ್ತ ಸುರಕ್ಷಿತ ಕ್ರಮಗಳ ನಡುವೆ ಕೆಲವು ಕಡತಗಳ ಪರಿಶೀಲನೆ ಮಾಡಲಾಯಿತು.
ಅಗತ್ಯ ಸಾರ್ವಜನಿಕ ಕೆಲಸಗಳು ನಿಲ್ಲಬಾರದೆಂಬ ದೃಷ್ಟಿಯಿಂದ ಕೆಲವು ತುರ್ತು ಕೆಲಸಗಳನ್ನು ಆಸ್ಪತ್ರೆಯಿಂದಲೇ ನಿರ್ವಹಿಸುತ್ತಿದ್ದೇನೆ.
ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು. pic.twitter.com/UGnMf61UE1
ಅಗತ್ಯ ಸಾರ್ವಜನಿಕ ಕೆಲಸಗಳು ನಿಲ್ಲಬಾರದೆಂಬ ದೃಷ್ಟಿಯಿಂದ ಕೆಲವು ತುರ್ತು ಕೆಲಸಗಳನ್ನು ಆಸ್ಪತ್ರೆಯಿಂದಲೇ ನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ಸಚಿವ ರಾಮುಲು ದಾಖಲು: ಚಿಕಿತ್ಸೆ ಪಡೆಯುತ್ತಿರೋ ಫೋಟೋಗಳು ವೈರಲ್
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹ ಕೊರೋನಾ ಸೋಂಕಿನಿಂದ ಮಣಿಪಾಲ್ ಆಸ್ಪತ್ರೆಯಲ್ಲಿದ್ದ ವೇಳೆ ಅಲ್ಲಿಯೇ ಕಡತಗಳನ್ನ ಪರಿಶೀಲನೆ ಮಾಡುವ ಮೂಲಕ ಆಡಳಿತ ನಿಭಾಯಿಸಿದ್ದರು. ಇದೀಗ ಸಿಎಂ ಮಾರ್ಗವನ್ನು ಶ್ರೀರಾಮುಲಯ ಅನುಸರಿಸಿದ್ದಾರೆ.