15 ಶಾಸಕರಿಗೆ ಮಾತ್ರ ನಿಗಮ ಅಧ್ಯಕ್ಷಗಿರಿ, 2.5 ವರ್ಷ ಮಾತ್ರ ಅಧಿಕಾ​ರಾವಧಿ: ಡಿಕೆಶಿ

By Kannadaprabha News  |  First Published Sep 6, 2023, 2:30 AM IST

ನಾನು ಮಾತ್ರ ಮಂತ್ರಿಯಾಗಿ, ಉಳಿದ ಶಾಸಕರಿಗೆ ಅಧಿಕಾರ ಸಿಗದಿದ್ದರೆ ತಪ್ಪಲ್ಲವೇ? ಎಲ್ಲರಿಗೂ ಅವಕಾಶ ಸಿಕ್ಕೇ ಸಿಗು​ತ್ತದೆ. ನಿಗಮ-ಮಂಡಳಿಗಳಲ್ಲಿ ಶಾಸಕರು ಹಾಗೂ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌


ಕನಕಪುರ/ರಾಮನಗರ(ಸೆ.06):  ನಿಗ​ಮ-ಮಂಡ​ಳಿ ನೇಮ​ಕಾ​ತಿ ವೇಳೆ 15 ಮಂದಿ ಕಾಂಗ್ರೆಸ್‌ ಶಾಸ​ಕ​ರಿಗೆ ಮಾತ್ರ ಅವಕಾಶ ಕೊಡು​ತ್ತೇ​ವೆ. ಉಳಿದ ಸ್ಥಾನಗಳನ್ನು ಕಾರ್ಯಕರ್ತರಿಗೆ ನೀಡಲಿದ್ದು, ಅವರಿಗೆ ಎರಡೂವರೆ ವರ್ಷದ ಅಧಿಕಾ​ರಾ​ವಧಿ ನೀಡು​ತ್ತೇವೆ ಎಂದು ಉಪ ಮುಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಹೇಳಿ​ದ್ದಾರೆ.

ಕನ​ಕ​ಪು​ರ​ದಲ್ಲಿ ಮಂಗ​ಳ​ವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾಡಿ, ನಾನು ಮಾತ್ರ ಮಂತ್ರಿಯಾಗಿ, ಉಳಿದ ಶಾಸಕರಿಗೆ ಅಧಿಕಾರ ಸಿಗದಿದ್ದರೆ ತಪ್ಪಲ್ಲವೇ? ಎಲ್ಲರಿಗೂ ಅವಕಾಶ ಸಿಕ್ಕೇ ಸಿಗು​ತ್ತದೆ. ನಿಗಮ-ಮಂಡಳಿಗಳಲ್ಲಿ ಶಾಸಕರು ಹಾಗೂ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು. ಕಾಂಗ್ರೆ​ಸ್‌ನ ಎಲ್ಲಾ ಶಾಸಕರು ನಿಗಮ-ಮಂಡಳಿಗಳಲ್ಲಿ ಅವಕಾಶ ಕೇಳುತ್ತಿಲ್ಲ. 20-25 ಮಂದಿ ಮಾತ್ರ ಕೇಳುತ್ತಿದ್ದಾರೆ. ಅದರಲ್ಲಿ 15 ಮಂದಿಗೆ ನಿಗ​ಮ-ಮಂಡಳಿ ನೇಮಕ ವೇಳೆ ಅವ​ಕಾಶ ನೀಡು​ತ್ತೇವೆ ಎಂದು ತಿಳಿ​ಸಿ​ದ​ರು.

Tap to resize

Latest Videos

ರಾಹುಲ್‌ಗಾಂಧಿ ಯಾತ್ರೆಗೆ 1 ವರ್ಷ ಹಿನ್ನೆಲೆ; ನಾಡಿದ್ದು ಕಾಂಗ್ರೆಸ್‌ ಮತ್ತೆ ಪಾದಯಾತ್ರೆ

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮುಖ್ಯಮಂತ್ರಿಗಳು ನಿಯಮ ಬದಲಾವಣೆ ಮಾಡುತ್ತಿರುವ ಕುರಿತ ಪ್ರಶ್ನೆ​ಗೆ, ಅದು ಆಡಳಿತಾತ್ಮಕ ವಿಚಾರ. ಆಡಳಿತಕ್ಕೆ ಅನುಕೂಲವಾಗುವಂತೆ ಕೆಲ​ವೊಂದು ಬದ​ಲಾ​ವಣೆ ಮಾಡಲಾಗುತ್ತದೆ. ಪ್ರತಿ ಸರ್ಕಾರ ಬಂದಾಗಲೂ ಈ ರೀತಿಯ ಬದ​ಲಾ​ವಣೆ ಆಗು​ತ್ತದೆ ಎಂದು ಪ್ರತಿ​ಕ್ರಿ​ಯಿ​ಸಿ​ದ​ರು.

ನಾಳೆ ಪಾದ​ಯಾ​ತ್ರೆ:

ಭಾರತ್‌ ಜೋಡೋ ಯಾತ್ರೆಗೆ ಸೆ.7ರಂದು ಒಂದು ವರ್ಷ ತುಂಬುತ್ತದೆ. ಇದೇ ನೆನಪಿಗೆ ಬೆಂಗ​ಳೂ​ರಿ​ನ​ಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಬೇಕು ಎನ್ನುವ ಆಲೋಚನೆ ಇತ್ತು. ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ರಾಮನಗರದಲ್ಲಿ ಆ ಕಾರ್ಯ​ಕ್ರಮ ಮಾಡುತ್ತಿದ್ದೇವೆ. ಪಾದ​ಯಾ​ತ್ರೆ​ಯಲ್ಲಿ ಮುಖ್ಯಮಂತ್ರಿಗಳೂ ನಮ್ಮ ಜೊತೆ ಹೆಜ್ಜೆ ಹಾಕಲಿದ್ದಾರೆ ಎಂದು ಡಿ.ಕೆ.​ಶಿ​ವ​ಕು​ಮಾರ್‌ ತಿಳಿ​ಸಿ​ದ​ರು.

ಮೇಕೆದಾಟು ಪಾದಯಾತ್ರೆ ವೇಳೆ ಚಳವಳಿಗಾರರು ಎಲ್ಲಿದ್ರು?: ಡಿಕೆಶಿ

ಅದೇ ದಿನ ಸಚಿವ ಸಂಪುಟ ಸಭೆಯೂ ಇರುವ ಕಾರಣ ಇತರೆ ಸಚಿವರಿಗೆ ಸೆ.8ರಂದು ಪಾದ​ಯಾತ್ರೆ ಮಾಡಬಹುದು ಎಂದು ಸೂಚನೆ ನೀಡಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದು ಗಂಟೆ ಕಾಲ ಸಂಜೆ 5ರಿಂದ 6 ಗಂಟೆ ತನಕ ಈ ಕಾರ್ಯಕ್ರಮ ನಡೆಯಲಿದೆ ಎಂದು ಶಿವಕುಮಾರ್‌ ಹೇಳಿದರು.

20-25 ಶಾಸಕರಷ್ಟೇ ಹುದ್ದೆ ಕೇಳುತ್ತಿದ್ದಾರೆ

ನಾನು ಮಾತ್ರ ಮಂತ್ರಿಯಾಗಿ, ಉಳಿದ ಶಾಸಕರಿಗೆ ಅಧಿಕಾರ ಸಿಗದಿದ್ದರೆ ತಪ್ಪಲ್ಲವೇ? ಎಲ್ಲರಿಗೂ ಅವಕಾಶ ಸಿಕ್ಕೇ ಸಿಗು​ತ್ತದೆ. ನಿಗಮ-ಮಂಡಳಿಗಳಲ್ಲಿ ಅವಕಾಶ ನೀಡಲಾಗುವುದು. ಕಾಂಗ್ರೆ​ಸ್‌ನ ಎಲ್ಲಾ ಶಾಸಕರು ನಿಗಮ-ಮಂಡಳಿಗಳಲ್ಲಿ ಅವಕಾಶ ಕೇಳುತ್ತಿಲ್ಲ. 20-25 ಮಂದಿ ಮಾತ್ರ ಕೇಳುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 

click me!