
ಹಾವೇರಿ (ಮಾ.18): ಕಳೆದ 3 ಬಾರಿ ಈ ಭಾಗದಲ್ಲಿ ನಾನು ಲೋಕಸಭೆ ಪ್ರತಿನಿಧಿಸಿದ್ದೇನೆ. ಮೂರು ಬಾರಿಯೂ ನನಗೆ ಈ ಭಾಗದ ಜನರು ಬಹು ಅಂತರ ಮತ ನೀಡಿದ್ದೀರಿ, ನಿಮ್ಮ ಆಶೀರ್ವಾದದಿಂದ ದೇಶದ ಮೂರು ಪ್ರಮುಖ ಖಾತೆ ಮೋದಿ ಅವರು ನೀಡಿದರು. ಅದಕ್ಕೆ ನೀವೇ ಕಾರಣ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಈ ಬಾರಿಯ ಲೋಕಸಭೆ ಚುನಾವಣೆ ದೇಶದ ಭವಿಷ್ಯಕ್ಕಾಗಿ, 75 ವರ್ಷದಲ್ಲಿ ದೇಶದ ಪರಿಸ್ಥಿತಿ ಏನು ಇತ್ತು ಎಂಬುದು ನಿಮಗೆ ಗೊತ್ತು. ಪ್ರಧಾನಿ ಮೋದಿ ಅವರು ಬಂದ ಬಳಿಕ ದೇಶದ ಭವಿಷ್ಯ ಜನರಿಗೆ ಕಾಣುತ್ತಿದೆ ಎಂದರು.
ದೇಶದಲ್ಲಿ ಭ್ರಷ್ಟಾಚಾರ ತಡೆಯಲು ನಾವು 5 ವರ್ಷ ತೆಗೆದುಕೊಂಡ್ವಿ, ದೇಶದಲ್ಲಿ ಎಷ್ಟು ಭ್ರಷ್ಟಾಚಾರ ಇತ್ತು ಅಂದ್ರೆ ದೇಶದ ಬ್ಯಾಂಕ್ ಮುಚ್ಚುವ ಸ್ಥಿತಿಗೆ ಬಂದಿದ್ದವು. ಪ್ರಧಾನಿ ಮೋದಿ ಅಂದು ಅವರು ಒಂದು ಯೋಚನೆ ಮಾಡಿದರು. ಬ್ಯಾಂಕ್‌ನಲ್ಲಿ ಕೋಟ್ಯಂತರ ಸಾಲ ಮಾಡಿ ಓಡಿ ಹೋದವರ ವಿರುದ್ಧ ಕಾನೂನು ತಂದಿದ್ದೇವೆ ಎಂದರು. ₹85 ಸಾವಿರ ಕೋಟಿ ನಷ್ಟದಲ್ಲಿ ಇರುವ ಬ್ಯಾಂಕ್‌ಗಳು ಇಂದು ಲಾಭದಲ್ಲಿವೆ. ದೇಶದ ಬ್ಯಾಂಕ್‌ಗಳು ₹1 ಲಕ್ಷ 500 ಸಾವಿರ ಕೋಟಿಯಷ್ಟು ಲಾಭದಲ್ಲಿವೆ. ದೇಶದಲ್ಲಿ ಇರುವ ಜನರಿಗೆ 5 ಕೆಜಿ ಅಕ್ಕಿ ನೀಡಿದ್ದು ನಾವು, ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗಬೇಕು.
ಬೆಳಗಾವಿಗೆ ಜಗದೀಶ್ ಶೆಟ್ಟರ್ ಹೆಸರೇ ಮುಂಚೂಣಿಯಲ್ಲಿದೆ: ಪ್ರಲ್ಹಾದ್ ಜೋಶಿ
ಮಾನ ಮರ್ಯಾದೆ ಈ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರದ ಅಕ್ಕಿ ಮೇಲೆ ತಮ್ಮ ಭಾವಚಿತ್ರವನ್ನು ಹಾಕ್ತಾರೆ. ಸುಳ್ಳು ಹೇಳುವ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಎಂದು ಜೋಶಿ ವಾಗ್ದಾಳಿ ನಡೆಸಿದರು. ಭಯೋತ್ಪಾದನೆ ಮಾಡ್ತಿದ್ದ ಪಾಕಿಸ್ತಾದ ಒಳಗೆ ಹೊಕ್ಕು ಹೊಡದ್ವಿ, ಪಾಕಿಸ್ತಾನ ಭಾರತದ ಮೇಲೆ ಬಾಂಬ್ ಹಾಕಿದ್ರೆ ಮೊದಲು ಮೇಣಬತ್ತಿ ಹಚ್ಚುತ್ತಿದ್ರು, ಮೋದಿ ಸರ್ಕಾರ ಬಂದ ಮೇಲೆ ಎಟಿಗೆ ಎದುರೇಟು ನೀಡಿದೆ ಎಂದರು. ಶೇ. 80ರಷ್ಟು ದೇಶದಲ್ಲಿ ಬಡತನ ನಿರ್ಮೂಲನೆ ಮಾಡಬೇಕು ಎಂದು ಮೋದಿ ಅವರು ಹೇಳಿದ್ದಾರೆ. ಬಡತನ ಹೋಗಬೇಕು ಅಂದ್ರೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು.
ಕಾಂಗ್ರೆಸ್ ಸರ್ಕಾರದಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ: ಪ್ರಲ್ಹಾದ್ ಜೋಶಿ
ನನ್ನ ಕ್ಷೇತ್ರದ ಪ್ರತಿ ಮಕ್ಕಳು ಮುಂದಿನ 5 ವರ್ಷದಲ್ಲಿ ನೆಲದ ಮೇಲೆ ಕುಳಿತು ಪಾಠ ಕೇಳದಂತೆ ನಾನು ಮಾಡ್ತೇನೆ. ಹೈಟೆಕ್ ಶಿಕ್ಷಣ ನನ್ನ ಕ್ಷೇತ್ರದ ಮಕ್ಕಳು ಪಡೆಯಬೇಕು ಎಂದರು. ಮೂರನೇ ಬಾರಿ ಶಿಗ್ಗಾಂವಿ ಜನತೆ ಬೊಮ್ಮಾಯಿ ಅವರಿಗೆ ಆಶೀರ್ವಾದ ಮಾಡಿದ್ದೀರಿ, ಸಿಎಂ ಸ್ಥಾನದಲ್ಲಿ ಕೂತರು, ಕ್ಷೇತ್ರಕ್ಕೆ ಅವರು ತುಂಬಾ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಎಲ್ಲ ಸೇರಿ ಮತ್ತೊಮ್ಮೆ ಮೋದಿಗಾಗಿ ದುಡಿಯೋಣ, ನೀವು ತಲೆತಗ್ಗಿಸುವಂತೆ ಕೆಲಸ ಮಾಡುವುದಿಲ್ಲ ಎಂದು ನಾನು 2009ರಲ್ಲಿ ಹೇಳಿದ್ದೆ, ಹಾಗೇ ನಾನು ಕಲ್ಲಿದಲು ಸಚಿವನಾಗಿ ಕೆಲಸ ಮಾಡಿದೆ. ಕಲ್ಲಿದ್ದಲು ಕಪ್ಪು ಆದರೂ ನನ್ನ ರಾಜಕೀಯದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ ಎಂದು ಸಮರ್ಥಿಸಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.