ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೊತ್ತಿದೆ ಕಾಂಗ್ರೆಸ್‌ನವರು ಲೋಕಸಭೆ ಚುನಾವಣೆಯಲ್ಲಿ ಎರಡಂಕಿ ದಾಟಲ್ಲ ಎಂದು ಆದರೂ ಸುಮ್ಮನೆ ಬಿಜೆಪಿ ವಿರುದ್ದ ಮಾತನಾಡುತ್ತಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಕೋಲಾರ (ಮಾ.15): ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೊತ್ತಿದೆ ಕಾಂಗ್ರೆಸ್‌ನವರು ಲೋಕಸಭೆ ಚುನಾವಣೆಯಲ್ಲಿ ಎರಡಂಕಿ ದಾಟಲ್ಲ ಎಂದು ಆದರೂ ಸುಮ್ಮನೆ ಬಿಜೆಪಿ ವಿರುದ್ದ ಮಾತನಾಡುತ್ತಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇವರದ್ದು ಇಂಡಿಯಾ ಕೂಟ ಆಲಿಬಾಬ ಚಾಲೀಸ್ ಚೋರ್ ತಂಡ, ಅವರು ಯಾವುದೇ ಗ್ಯಾರಂಟಿಗಳನ್ನ ಕೊಟ್ಟರೂ ಅವರು ಗೆಲ್ಲಲ್ಲ ಎಂದು ಭವಿಷ್ಯ ನುಡಿದರು.
ಬೆಂಗಳೂರಿನಿಂದ ಸ್ಪರ್ಧಿಸಲಿ: ರಾಹುಲ್ ಗಾಂಧಿ ವಯಾನಾಡಲ್ಲ ಬೆಂಗಳೂರಿಗೆ ಬಂದು ನಿಲ್ಲಲಿ ನೋಡೋಣ, ಅಲ್ಲಿ ಒಂದು ಸಮುದಾಯವನ್ನ ನಂಬಿಕೊಂಡು ನಿಲ್ಲುತ್ತಾರೆ, ಅವರನ್ನ ಓಲೈಸಿಕೊಳ್ಳುವ ಸಲುವಾಗಿ ಅಲ್ಲಿ ನಿಲ್ಲುತ್ತಾರೆ ಬೆಂಗಳೂರಿಗೆ ಬಂದು ನಿಲ್ಲಲಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸಂಸದ ಮುನಿಸ್ವಾಮಿ ಸವಾಲು ಹಾಕಿದರು.
ಪೊರತ್ವ ಕಾಯ್ದೆ ಸಮರ್ಥನೆ: ಮೋದಿಗೆ ಸೋಲಿನ ಭಯದಿಂದ ಪೌರತ್ವ ಕಾಯ್ದೆ ತಂದಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಮನಮೋಹನ್ ಸಿಂಗ್ ಪ್ರಣಾಳಿಕೆಯಲ್ಲಿ ಪೌರತ್ವ ಕಾಯ್ದೆ ಇದೆ ಏಕೆಂದೆರೆ ಬೇರೆ ಬೇರೆ ದೇಶಗಳಿಂದ ಬಂದವರಿಗೆ ಪೌರತ್ವ ಕೊಡುವುದು ಇದರ ಉದ್ದೇಶ, ಮಾನ ಪ್ರಾಣ ತೆಗೆಯುತ್ತಾರೆ ಅನ್ನೋ ಕಾರಣಕ್ಕೆ ನಮ್ಮ ದೇಶಕ್ಕೆ ಬಂದವರಿಗೆ ಕೊಡೋದು ಪೌರತ್ವ, ಬಲವಂತವಾಗಿ ಮತಾಂತರ ಮಾಡುತ್ತಾರೆ ಅನ್ನೋ ಕಾರಣಕ್ಕೆ ಬಂದವರಿಗೆ ಇದು ಅನುಕೂಲ ಎಂದು ಹೇಳಿದ್ದನ್ನು ನೆನಪಿಸಿದರು.
ಡಯಾಲಿಸಿಸ್‌ನಲ್ಲಿ 28,000 ಮಂದಿಗೆ ಉಚಿತ ಚಿಕಿತ್ಸೆ: ಶಾಸಕ ಎಚ್.ಡಿ.ರೇವಣ್ಣ
ಕೋಲಾರ ಟಿಕೆಟ್ ವಿಚಾರ ಪ್ರಸ್ತಾಪಿಸಿದ ಅವರು, ಕುಮಾರಸ್ವಾಮಿ ಎನ್ ಡಿಯ ಮೈತ್ರಿ ಕೂಟದಲ್ಲಿದ್ದಾರೆ, ಅವರು ಕೋಲಾರ ಕ್ಷೇತ್ರವನ್ನ ಕೇಳಬಹುದು, ನಮ್ಮಲ್ಲಿ ರಾಜ್ಯ, ರಾಷ್ಟ್ರ ನಾಯಕರಿದ್ದಾರೆ, ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ಬದ್ದ, ಮೊದಲಿನಿಂದಲೂ ಟಿಕೆಟ್‌ಗಾಗಿ ನಾನು ಲಾಬಿ ಮಾಡಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ ಎಂದು ಹೇಳಿದರು.