ಕಾಂಗ್ರೆಸ್ ಸೇರಲ್ಲ, ಆದರೆ ಬಿಜೆಪಿ ಶುದ್ದ ಮಾಡುವೆ: ಡಿ.ವಿ.ಸದಾನಂದಗೌಡ

Published : Mar 22, 2024, 11:52 AM IST
ಕಾಂಗ್ರೆಸ್ ಸೇರಲ್ಲ, ಆದರೆ ಬಿಜೆಪಿ ಶುದ್ದ ಮಾಡುವೆ: ಡಿ.ವಿ.ಸದಾನಂದಗೌಡ

ಸಾರಾಂಶ

ಯಾವುದೇ ಕಾರಣಕ್ಕೂ ತಾವು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವುದಿಲ್ಲ ಎಂದು ಸ್ಪಷ್ಟಪ ಡಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರು, ನನ್ನ ಮುಂದಿನ ನಡಿಗೆ ಬಿಜೆಪಿ ಶುದ್ದೀಕರಣಗೊಳಿಸುವತ್ತ ಎಂದು ಘೋಷಿಸಿದ್ದಾರೆ.   

ಬೆಂಗಳೂರು (ಮಾ.22): ಯಾವುದೇ ಕಾರಣಕ್ಕೂ ತಾವು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವುದಿಲ್ಲ ಎಂದು ಸ್ಪಷ್ಟಪ ಡಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರು, ನನ್ನ ಮುಂದಿನ ನಡಿಗೆ ಬಿಜೆಪಿ ಶುದ್ದೀಕರಣಗೊಳಿಸುವತ್ತ ಎಂದು ಘೋಷಿಸಿದ್ದಾರೆ. ತಮ್ಮ ನಿವಾಸದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡುವ ಮೂಲಕ ಸದಾನಂದಗೌಡರು ಕಳೆದ ಮೂರು ದಿನಗಳಿಂದ ಕೇಳಿ ಬರುತ್ತಿದ್ದ ವದಂತಿ ಮತ್ತು ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ಕಾಂಗ್ರೆಸ್ ಪಕ್ಷದಿಂದ ನನಗೆ ಆಹ್ವಾನ ಬಂದಿದ್ದು ನಿಜ. ನೀವು ಯಾವುದಾದರೂ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂಬ ಸಲಹೆಯನ್ನೂ ನೀಡಿದರು.  ಜತೆಗೆ ಗೆಲ್ಲಿಸಿಕೊಂಡು ಬರುತೇವೆ ಎಂಬ ಭರವಸೆಯನ್ನೂ ಕೊಟ್ಟರು. ಆದರೆ, ನಾನು ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೂ ವಲಸೆ ಹೋಗುವ ಉದ್ದೇಶವಿಲ್ಲ ಎಂದರು. 

ವಿಜಯೇಂದ್ರ, ಬಿಎಸ್‌ವೈ ವಿರುದ್ಧ ಕಿಡಿ: ನನಗೆ ಈ ಬಾರಿ ಬೆಂ. ಉತ್ತರದ ಟಿಕೆಟ್ ತಪ್ಪಿರುವುದಕ್ಕೆ ಬೇಸರ ಉಂಟಾಗಿದೆ. ಟಿಕೆಟ್ ತಪ್ಪಿಸಿದವರು ಯಾರು ಎಂಬುದು ನನಗೂ ಗೊತ್ತು, ನಿಮಗೂ ಗೊತ್ತು. ನಮ್ಮ ರಾಜ್ಯದಲ್ಲಿ ಬಿಜೆಪಿಯಲ್ಲಿ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ.  ಪಕ್ಷದಲ್ಲಿ ತಾನು ತನ್ನ ಮಕ್ಕಳು, ಕುಟುಂಬ, ತನ್ನ ಚೇಲಾಗಳಿಗೆ, ತನ್ನ ಜಾತಿಯವರಿಗೆ ಮಾತ್ರ ಸೀಮಿತ ಎಂಬಂತಾಗಿದೆ. 

ಬಿಜೆಪಿ ಜನಪರ ಪಕ್ಷ ವಾಗಬೇಕು, ಕುಟುಂಬ ರಾಜಕಾರಣದಿಂದ ಹೊರಬರ ಬೇಕು ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದರು. ಟಿಕೆಟ್ ಕೈ ತಪ್ಪಿದಾಗ ಮನಸ್ಸಿಗೆ ಬೇಸರವಾಗಿದ್ದು ಹೌದು. ನಾನು ಚುನಾವಣಾ ರಾಜಕಾರಣದಿಂದ ದೂರ ಸರಿಯುವ ಹೇಳಿಕೆ ನೀಡಿದಾಗ ಎಲ್ಲರೂ ನನ್ನನ್ನು ಮನವೊಲಿಸಿದರು. ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಬಂದು ನೀವು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಮನವಿ ಮಾಡಿದ್ದರು. ಆದರೆ ಪಕ್ಷ ಅವರ ಮಾತುಗಳಿಗೆ ಬೆಲೆ ಕೊಡಲಿಲ್ಲ ಎಂದರು. 

Lok Sabha Election 2024: ನನ್ನ ಪರ ಪ್ರಚಾರಕ್ಕೆ ಬನ್ನಿ: ಬಿಎಸ್‌ವೈಗೆ ಪ್ರಜ್ವಲ್ ರೇವಣ್ಣ ಮನವಿ

ನಾನು ಪುರೋಹಿತರ ಥರ: ಸದಾನಂದಗೌಡ ಏನು ಮಾಡಬಹುದು ಎಂಬ ಪ್ರಶ್ನೆ ಮೂಡಬಹುದು. ನಾನು ಸಿಂಗಲ್ ಮ್ಯಾನ್ ಆರ್ಮಿ ಅಂದುಕೊಳ್ಳಬಹುದು. ಪೂಜೆ ಮಾಡುವಾಗ ಶುದೀಕರಣ ಮಾಡಲು ಹಲವರು ಇರಬಹುದು. ಆದರೆ ಪುರೋಹಿತರು ಒಬ್ಬರೇ ಇರುತ್ತಾರೆ. ಹಾಗೇ ನಾನು. ಸಮಾನ ಮನಸ್ಕರೊಂದಿಗೆ ಶುದ್ದೀಕರಣ ದತ್ತ ಗಮನಹರಿಸುತ್ತೇನೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: BBK 12 - ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ - ರಘು ವಿರುದ್ಧ ರೊಚ್ಚಿಗೆದ್ದ ಜನತೆ