ಹಾನಗಲ್ಲ (ಅ.27): 2023ಕ್ಕೆ ಮತ್ತೆ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುತ್ತದೆ. ಆಗ ಸಿದ್ದರಾಮಯ್ಯ (Siddaramaiah) ಸಿಎಂ ಆಗುತ್ತಾರೆ ಎಂದು ಹಾನಗಲ್ಲ (hanagal) ಚುನಾವಣೆ (Election) ಪ್ರಚಾರದ ವೇಳೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (zameer ahmed khan) ಸಿದ್ದು (siddaramaiah) ಪರ ಬ್ಯಾಟ್ ಬೀಸಿದರು.
ತಾಲೂಕಿನ ಅಕ್ಕಿಆಲೂರಿನಲ್ಲಿ ನಡೆಸಿದ ಸಮುದಾಯದ ಸಭೆಯಲ್ಲಿ ಮಾತನಾಡಿ, ಹಾನಗಲ್ಲ ಕ್ಷೇತ್ರದಲ್ಲಿ ಮಾನೆ ಅಭ್ಯರ್ಥಿಯಲ್ಲ, ನಾನು. ನೀವು ಹಾಕುವ ಪ್ರತಿಯೊಂದು ಮತವೂ ಜಮೀರ್‌ಗೆ ಹಾಕಿದಂತೆ. 2023ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಸಿದ್ದರಾಮಯ್ಯ ಸಿಎಂ ಆಗುತ್ತಾರೆ. ಆಗ ನಾನು ಸಚಿವನಾಗಿ, ಹಾವೇರಿ (Haveri) ಜಿಲ್ಲಾ ಉಸ್ತುವಾರಿಯಾಗುತ್ತೇನೆ ಎಂದು ಹೇಳಿದರು.
undefined
ಮುಂದಿನ ಸಿಎಂ ವಿಚಾರಕ್ಕೆ ಸುಸ್ತು: ಸುರ್ಜೇವಾಲಾ ಶೀಘ್ರ ಬದಲು?
ಎಚ್‌ಡಿಕೆ (HD kumaraswamy) ಜಮೀರ್ ಸಂಬಂಧದ ಬಗ್ಗೆ ಸಿ.ಟಿ. ರವಿ (CT Ravi) ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಅವರು, ನನ್ನ ಹಾಗೂ ಕುಮಾರಸ್ವಾಮಿ (Kumaraswamy) ಬಗ್ಗೆ ಮಾತನಾಡುವುದಕ್ಕೆ ಸಿ.ಟಿ. ರವಿ ಯಾರು? ಅವರೇನು ಜೆಡಿಎಸ್‌ನಲ್ಲಿದ್ದರಾ? ಕುಮಾರಸ್ವಾಮಿ ನನ್ನ ಮಧ್ಯೆ ಏನೇ ಇದ್ದರೂ ಅದಕ್ಕೆ ಸಿಟಿ ರವಿ ಮಾತನಾಡುವುದಕ್ಕೆ ಯಾವುದೇ ಹಕ್ಕಿಲ್ಲ ಎಂದರು.
ಹಿಂದೆಯೂ ಹೇಳಿಕೆ
ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಚಾಮರಾಜಪೇಟೆ (Chamarajanagar) ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಮತ್ತೆ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಘೋಷಣೆ ಮೊಳಗಿಸಿದ್ದಾರೆ.
ಅಲ್ಲದೆ, ಕೆಪಿಸಿಸಿ (KPCC) ಅಧ್ಯಕ್ಷರು ಹಾಗೂ ಹೈಕಮಾಂಡ್ ಸೂಚನೆ ಹೊರತಾಗಿಯೂ ‘ನೀವು ಮತ ಹಾಕಿದರೆ ಸಿದ್ದರಾಮಯ್ಯ (Siddaramaiah) ಮತ್ತೆ ಮುಖ್ಯಮಂತ್ರಿ ಆಗುತ್ತಾರೆ’ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಅಭಿನಂದಿಸಲು ಆಗಮಿಸಿದ್ದ ಸ್ತ್ರೀಶಕ್ತಿ ಸಂಘದ ಸದಸ್ಯರು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು. ಈ ವೇಳೆ ಶಾಸಕ ಜಮೀರ್ ಅಹ್ಮದ್, ‘ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂದರೆ ನೀವೆಲ್ಲಾ ಅವರಿಗೇ ಮತ ಹಾಕಬೇಕು’ ಎಂದರು.
ಸಿದ್ದರಾಮಯ್ಯರನ್ನು ಹೊಗಳಲು ಇದು ಸಮಯವಲ್ಲ ಎಂದ ಕಾಂಗ್ರೆಸ್ ನಾಯಕ
ಅಧಿವೇಶನದಲ್ಲಿ ಅಕ್ರಮ ಗಣಿಗಾರಿಕೆ ವಿಚಾರ ಪ್ರಸ್ತಾಪ: ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಜುಲೈ ತಿಂಗಳಲ್ಲಿ ನಡೆಸಬೇಕಾಗಿದ್ದ ವಿಧಾನಮಂಡಲ ಅಧಿವೇಶನ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಅಧಿವೇಶನದಲ್ಲಿ ಅಕ್ರಮ ಗಣಿಗಾರಿಕೆ, ಕೊರೋನಾ ವೈಫಲ್ಯ, ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸುತ್ತೇವೆ.