ನಟ ಶಶಿಕುಮಾರ್‌ ಚುನಾವನಾ ಸ್ಪರ್ಧೆ : ಕ್ಷೇತ್ರವೂ ಫಿಕ್ಸ್

Kannadaprabha News   | Asianet News
Published : Oct 27, 2021, 06:34 AM ISTUpdated : Oct 27, 2021, 05:48 PM IST
ನಟ ಶಶಿಕುಮಾರ್‌ ಚುನಾವನಾ ಸ್ಪರ್ಧೆ : ಕ್ಷೇತ್ರವೂ ಫಿಕ್ಸ್

ಸಾರಾಂಶ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಸ್ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಎಸ್ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮಾಜಿ ಸಂಸದ, ನಟ ಶಶಿಕುಮಾರ್‌ ಇಂಗಿತ

ಮೊಳಕಾಲ್ಮುರು  (ಅ.27): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Assembly Election) ಚಿತ್ರದುರ್ಗ (Chitradurga) ಜಿಲ್ಲೆಯ ಎಸ್ಟಿ (ST) ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮಾಜಿ ಸಂಸದ, ನಟ ಶಶಿಕುಮಾರ್‌ (shashikumar) ಇಂಗಿತ ವ್ಯಕಪಡಿಸಿದರು. 

ಚಿತ್ರದುರ್ಗ ಜಿಲ್ಲೆ ನನಗೆ ರಾಜಕೀಯ (politics) ಭವಿಷ್ಯ ಕಲ್ಪಿಸಿದ್ದು, ಸಂಸದನಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಪರಿಣಾಮ ಜಿಲ್ಲೆಯ ಜನರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದ್ದೇನೆ. ಅಭಿಮಾನಿಗಳು ಮತ್ತು ಕಾರ್ಯಕರ್ತರು ತೋರುತ್ತಿರುವ ಪ್ರೀತಿ ಮತ್ತು ಅಭಿಮಾನ ಮರೆಯಲಾರದಂತಾಗಿದೆ. 

'ಮತ್ತಷ್ಟು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ : ಸ್ವಾಗತಿಸಿದ ಮಾಜಿ ಡಿಸಿಎಂ'

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Election) ಜಿಲ್ಲೆಯ ಚಳ್ಳಕೆರೆ ಅಥವಾ ಮೊಳಕಾಲ್ಮುರು ಎಸ್ಟಿಮೀಸಲು ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧಿಸುವುದಾಗಿ ಹೇಳಿದರು. ಸಂಸದನಾಗಿದ್ದ ವೇಳೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ನನಗೆ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿವೆ ಎನ್ನುವ ಭರವಸೆ ಇದೆ ಎಂದರು.

ಹಾಗಾಗಿ, ಬರುವ ದಿನಗಳಲ್ಲಿ ನಾನು ಈ ಎರಡೂ ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ನಟ ಶಶಿಕುಮಾರ್‌ ಅವರನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.

ಮಾಜಿ ಸಚಿವರಿಬ್ಬರ ಪುತ್ರರು ಕೈ ಸೇರ್ಪಡೆ

 ಜೆಡಿಎಸ್‌ನ (JDS) ಮಾಜಿ ಸಚಿವ ಸಿ.ಚನ್ನಿಗಪ್ಪ (c chennigappa) ಅವರ ಹಿರಿ ಮಗ ಹಾಗೂ ಹಾಲಿ ತುಮಕೂರು (Tumakur) ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್ ಸಹೋದರ ಡಿಸಿ ಅರುಣ್ ಕುಮಾರ್ ಹಾಗೂ ತಮ್ಮ ವೇಣುಗೋಪಾಲ್ ಕಾಂಗ್ರೆಸ್ ಸೇರ್ಪಡೆ ಯಾಗುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.

ಅವರು ಭಾನುವಾರ ಕೊರಟಗೆರೆ (Koratagere) ತಾಲೂಕಿನ ಎಲೆರಾಂಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬೈಚೇನಹಳ್ಳಿ ಬಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ (Temple) ಪೂಜೆ ಸಲ್ಲಿಸಿ ಮುಂದಿನ ನನ್ನ ರಾಜಕೀಯ (Politics) ಭವಿಷ್ಯವನ್ನು ಕಾಂಗ್ರೆಸ್ (congress) ಪಕ್ಷದಿಂದ ರೂಪಿಸಿಕೊಳ್ಳಲಾಗುವುದು ಎಂದರು. 

'ಮತ್ತಷ್ಟು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ : ಸ್ವಾಗತಿಸಿದ ಮಾಜಿ ಡಿಸಿಎಂ'

ಜೆಡಿಎಸ್‌ನ ಮಾಜಿ ಜನಪ್ರಿಯ ಸಚಿವರಾದ ಸಿ. ಚನ್ನಿಗಪ್ಪನವರು ಕೊರಟಗೆರೆ ತಾಲೂಕಿನಲ್ಲಿ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆಯೊಂದಿಗೆ ಕೊರಟಗೆರೆ ಮನೆ ಮಗನಾಗಿ ಸತತ ಜನರ ಸೇವೆ ಮಾಡುತ್ತಾ ಜನ ಬೆಂಬಲದೊಂದಿಗೆ ಹಲವು ಖಾತೆಗಳ ಮೂಲಕ ಜನಪ್ರಿಯರಾಗಿದ್ದರು. ಅಂಥ ನಮ್ಮ ತಂದೆ ಆಶಯದಂತೆ ಕೊರಟಗೆರೆ ತಾಲೂಕಿನಲ್ಲಿ ನನ್ನ ರಾಜಕೀಯ ಭವಿಷ್ಯವನ್ನು ಪ್ರಾರಂಭಿಸಲಾಗುವುದು ಎಂದು ಇಂಗಿತ ವ್ಯಕ್ತಪಡಿಸಿದ್ದರು.

ಕಲಘಟಗಿ ಆಕಾಂಕ್ಷಿ ಲಾಡ್ 

 

ನಾನು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಲ್ಲ. ಕಾಂಗ್ರೆಸ್‌(Congress) ಬಲವರ್ಧನೆ ಮಾಡುವ ಉದ್ದೇಶ ಹೊಂದಿದ್ದೇನೆ ಎಂದಿರುವ ಮಾಜಿ ಸಚಿವ ಸಂತೋಷ ಲಾಡ್‌(Santosh Lad) ಅವರು ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

 ಪಕ್ಷ ಬಲವರ್ಧನೆಗಾಗಿ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದು, ಸಂತೋಷ್‌ ಲಾಡ್‌ ಫೌಂಡೇಶನ್‌ನಿಂದ(Santosh Lad Foundation) ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದೇನೆ ಹೊರತು ಇನ್ಯಾವುದೇ ಬೇರೆ ಉದ್ದೇಶವಿಲ್ಲ ಎಂದರು.

ನನ್ನದು ಇಲ್ಲಿ ಯಾವುದೇ ಗುಂಪು ಇಲ್ಲ. ನನ್ನದು ಒಂದೇ ಗುಂಪು, ಅದು ಕಾಂಗ್ರೆಸ್‌ ಗುಂಪು. ಹರಪನಹಳ್ಳಿಯಲ್ಲಿ ಉಚಿತ ಆಹಾರ ವಿತರಣೆಯಲ್ಲಿ ಯಾವುದೇ ವಿಶೇಷತೆ ಇಲ್ಲ. ನನ್ನ ಈ ಸಾಮಾಜಿಕ ಕಾರ್ಯಗಳಿಂದ ಬಡವರ ಹಸಿವು ನೀಗಿ ಪಕ್ಷಕ್ಕೆ ಬಲ ಸಿಕ್ಕರೆ ಸಾಕು. ನಾನು ಕಲಘಟಗಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದು ಖಚಿತ ಎಂದ ಅವರು, ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಎದ್ದಿದ್ದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರು

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌
ಕಾಂಗ್ರೆಸ್‌ನಲ್ಲಿ ಡಿನ್ನರ್‌, ಇನ್ನರ್‌ ಪಾಲಿಟಿಕ್ಸ್‌ ನಿಲ್ಲುತ್ತಿಲ್ಲ: ಛಲವಾದಿ ನಾರಾಯಣಸ್ವಾಮಿ