ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಕೈ ಟಿಕೆಟ್‌ಗಾಗಿ ಬಾದಾಮಿಯ ಬನಶಂಕರಿ ದೇವಿಗೆ ಹರಕೆ ಹೊತ್ತು ದೀರ್ಘದಂಡ ನಮಸ್ಕಾರ ಹಾಕಿದ ಕೈ ಮುಖಂಡ ಮಹೇಶ ಹೊಸಗೌಡರ ಅಭಿಮಾನಿಗಳು. ಗುಲದಲ್ಲಿ ಯುವಕರಿಂದ ದೀರ್ಘ ದಂಡ ನಮಸ್ಕಾರ ಹಾಕಿ ಹರಕೆ. ಕಾಂಗ್ರೆಸ್ ಯುವ ಮುಖಂಡ ಮಹೇಶ ಹೊಸಗೌಡರಗೆ ಟಿಕೆಟ್ ನೀಡಲು ಒತ್ತಾಯ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ಏ.05): ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಬಾದಾಮಿ ವಿಧಾನಸಭಾ ಮತಕ್ಷೇತ್ರದಿಂದ ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಫರ್ಧೆ ಮಾಡದೇ ವರುಣಾ ಕಡೆಗೆ ಮುಖ ಮಾಡಿರೋ ಬೆನ್ನಲ್ಲೇ ಬಾದಾಮಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಗರಿಗೆದರಿದ್ದು, ಇವುಗಳ ಮಧ್ಯೆ ಕಾಂಗ್ರೆಸ್ ಯುವ ಮುಖಂಡ ಮಹೇಶ ಹೊಸಗೌಡರ ಅಭಿಮಾನಿಗಳು ನಿನ್ನೆ(ಮಂಗಳವಾರ) ದೇವಿಗೆ ಹರಕೆ ಹೊತ್ತು ದೀರ್ಘದಂಡ ನಮಸ್ಕಾರ ಹಾಕಿದ ಪ್ರಸಂಗ ನಡೆದಿದೆ.
undefined
ಹೌದು, ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿಯಲ್ಲಿ ಯುವ ಮುಖಂಡ ಮಹೇಶ ಹೊಸಗೌಡರ ಅವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಆಗ್ರಹಿಸಿ ಸುಕ್ಷೇತ್ರ ಐತಿಹಾಸಿಕ ಬಾದಾಮಿಯ ಬನಶಂಕರಿ ದೇವಿಯಲ್ಲಿ ಮೊರೆಯಿಟ್ಟು ಯುವಕರು ಹರಕೆ ಹೊತ್ತು ದೀರ್ಘದಂಡ ನಮಸ್ಕಾರ ಹಾಕಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ದೇಗುಲದಲ್ಲಿ ನಡೆಯಿತು. ಕ್ಷೇತ್ರ ಸೇರಿದಂತೆ ಬೇರೆ ಬೇರೆ ಕಡೆಯಿಂದ ಬಂದಿದ್ದ ಯುವಕರು ಪುಷ್ಕರಣಿಯಿಂದ ನೀರನ್ನ ತಲೆ ಮೇಲೆ ಸುರಿದುಕೊಂಡು ನಂತರ ದೀರ್ಘದಂಡ ನಮಸ್ಕಾರ ಹಾಕುತ್ತಾ ಬನಶಂಕರಿ ದೇವಿಗೆ ವಿಶೇಷ ಪೂಜೆಯನ್ನ ಸಲ್ಲಿಸಿದ್ರು. ಸಿದ್ದರಾಮಯ್ಯನವರು ಬಾದಾಮಿಗೆ ಈ ಬಾರಿ ಬರದೇ ಇರುವ ಹಿನ್ನೆಲೆಯಲ್ಲಿ ಯುವ ಮುಖಂಡ ಮಹೇಶ ಹೊಸಗೌಡರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ ಬೆಂಬಲಿಗರು ಹೊಸಗೌಡರ ಪರ ಘೋಷಣೆಗಳನ್ನ ಹಾಕಿದ್ರು. ಇನ್ನು ದೀರ್ಘ ದಂಡ ನಮಸ್ಕಾರ ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು ಸಹ ಪಾಲ್ಗೊಂಡಿದ್ರು.
KARNATAKA ASSEMBLY ELECTIONS 2023: ತೇರದಾಳ ಕಾಂಗ್ರೆಸ್ ಬಚಾವೋ..ಉಮಾಶ್ರೀ ಹಟಾವೋ..!
ಘೋಷಣೆ ಕೂಗಿದ ಹೊಸಗೌಡರ ಅಭಿಮಾನಿಗಳು...
ಇನ್ನು ಇತ್ತ ಟಿಕೆಟ್ ಆಕಾಂಕ್ಷಿಯಾಗಿರುವ ಮಹೇಶ ಹೊಸಗೌಡರ ಪರ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರೆ ಅತ್ತ ಅವರ ಅಭಿಮಾನಿಗಳು ಭಿತ್ತಪತ್ರ ಹಿಡಿದು ಬಾದಾಮಿಯಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಪಟ್ಟು ಹಿಡಿದು ಘೋಷಣೆಗಳನ್ನು ಕೂಗಿದರು.
ಪಕ್ಷಕ್ಕಾಗಿ ದುಡಿದಿದ್ದೇನೆ ಈಗ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆಂದ ಮಹೇಶ ಹೊಸಗೌಡರ
ಇನ್ನು ಇದೇ ವೇಳೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಯುವ ಮುಖಂಡ ಮಹೇಶ ಹೊಸಗೌಡರ, ಹಿಂದಿನಿಂದಲೂ ನಮ್ಮ ಕುಟುಂಬ ಕಾಂಗ್ರೆಸ್ ಪಕ್ಷದ ಜೊತೆ ನಿಲ್ಲುತ್ತಾ ಬಂದಿದ್ದು, ಕಳೆದ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯನವರು ಬಂದ ಮೇಲೆ ಅವರೊಂದಿಗೆ ಸೇರಿ ಸಾಕಷ್ಟು ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದೇವೆ, ಸಿದ್ದರಾಮಯ್ಯನವರಂತಹ ನಾಯಕರ ಜೊತೆ ಸೇರಿ ಕೆಲಸ ಮಾಡಿದ್ದೇವೆ, ಈ ಬಾರಿ ಸಿದ್ದರಾಮಯ್ಯನವರು ವರುಣಾದಿಂದ ಸ್ಫರ್ದೆ ಮಾಡಲು ನಿರ್ಧರಿಸಿದ್ದು, ಹೀಗಾಗಿ ಈ ಬಾರಿ ಬಾದಾಮಿ ಟಿಕೆಟ್ ತಮಗೆ ನೀಡುವಂತೆ ಹೈಕಮಾಂಡ್ ಗೆ ಮನವಿ ಮಾಡಿದ್ದೇನೆ ಎಂದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.