ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನಿಶ್ಚಿತ: ರಫೀಕ್‌ ಪಕಾಲಿ

By Kannadaprabha NewsFirst Published Jan 31, 2023, 8:30 PM IST
Highlights

ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ: ರಫೀಕ್‌ ಪಕಾಲಿ 

ಕೊಲ್ಹಾರ(ಜ.31):  ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೊಲ್ಹಾರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಫೀಕ್‌ ಪಕಾಲಿ ಹೇಳಿದರು.

ಪಟ್ಟಣದ ಟಿಪ್ಪುಸುಲ್ತಾನ್‌ ಸರ್ಕಲ್‌ ಬಳಿ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಮ್ಮಿಕೊಂಡಿದ್ದ ಭಾರತ ಜೋಡೋ ಪಾದಯಾತ್ರೆ ಅಂತಿಮ ದಿನವಾದ ಸೋಮವಾರ ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಮುಕ್ತಾಯಗೊಳ್ಳುವುದರ ಪ್ರಯುಕ್ತ ಪಕ್ಷದ ಆದೇಶದ ಹಿನ್ನೆಲೆಯಲ್ಲಿ ದೇಶಾದ್ಯಂತ ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆಯ ದಿನದಂದು ಡಾ.ಬಾಬಾಸಾಹೇಬ ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮತದಾರರ ಜೊತೆ ನಿರಂತರ ಸಂಪರ್ಕದಲ್ಲಿ ಇರಬೇಕು ಎಂದರು.

VIJAYAPURA: ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಿ: ಬಿ.ಎಲ್‌.ಸಂತೋಷ್

ಮಾಜಿ ಜಿಪಂ ಸದಸ್ಯ ಕಲ್ಲು ದೇಸಾಯಿ ಮಾತನಾಡಿ, ನಮ್ಮ ನಾಯಕ ರಾಹುಲ್‌ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4080 ಕಿಮೀ ಪಾದಯಾತ್ರೆಯನ್ನು 12 ರಾಜ್ಯಗಳಲ್ಲಿ ಕ್ರಮಿಸುವ ಮೂಲಕ ಜನರ ನಾಡಿಮಿಡಿತವನ್ನು ಅರಿತು ದೇಶದಲ್ಲಿ ಬದಲಾವಣೆ ತರಲು ಸಾಮಾನ್ಯ ಜನರ ಕೂಗು ಹಾಗೂ ರೈತಾಪಿ ಜನರ ಸಂಕಷ್ಟಗಳನ್ನು ಅರಿಯಲು ದೇಶಾದ್ಯಂತ ಭಾರತ ಜೋಡೋ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು. ಅದು ಇಂದು ಕಾಶ್ಮೀರದಲ್ಲಿ ರಾಷ್ಟ್ರಧಜಾರೋಹಣ ಮಾಡುವುದರ ಮೂಲಕ ಮುಕ್ತಾಯಗೊಂಡಿತು. ದೇಶದಲ್ಲಿ ಬದಲಾವಣೆ ತರಲು ಹಮ್ಮಿಕೊಂಡ ಪಾದಯಾತ್ರೆಗೆ ಎಲ್ಲ ರಾಜ್ಯಗಳಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರು ಹೇಳಿದರು.

ಈ ಸಂದರ್ಭದಲ್ಲಿ ಪಪಂ ಸದಸ್ಯ ಚನಮ್ಮಲ್ಲಪ್ಪ ಗಿಡ್ಡಪ್ಪಗೋಳ, ನಿಂಗಪ್ಪ ಗಣಿ, ವಿಜಯ ಮಹಾಂತೇಶ ಗಿಡ್ಡಪ್ಪಗೋಳ, ಶ್ರೀಶೈಲ ಮುಳವಾಡ, ಕಾಂಗ್ರೆಸ್‌ ಮುಖಂಡರಾದ ಬಸವರಾಜ ಹುಲ್ಯಾಳ, ನಬೀಸಾಬ ಹೊನ್ಯಾಳ, ದಸ್ತಗೀರ ಕಾಖಂಡಕಿ, ಗೈಬುಸಾಬ ನದಾಫ್‌, ದಶರಥ ಈಟಿ, ರಾಜು ಇವಣಗಿ, ಹನೀಫ್‌ ಮಕಾನದಾರ, ಸಿಡ್ಲೆಪ್ಪ ಮಾದರ, ಯಮನೂರಿ ಮಾಕಾಳೆ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಇದ್ದರು.

click me!