
ಬೆಂಗಳೂರು, (ಆ.25): ಕಾಂಗ್ರೆಸ್‌ನಲ್ಲಿ ಪ್ರಮೋಷನ್ ಸಿಗಬೇಕು ಎಂದರೆ ಜೈಲಿಗೆ ಹೋಗಬೇಕು ಎಂದಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಗೆ ಬ್ರಿಜೇಶ್ ಕಾಳಪ್ಪ ತಿರುಗೇಟು ಕೊಟ್ಟಿದ್ದಾರೆ.
ಇಂದು (ಆ,25) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ, ಸಿಟಿ ರವಿ ತೆಲೆಯಲ್ಲಿ ಬುದ್ದಿ ಇಟ್ಟುಕೊಂಡು ಮಾತನಾಡಬೇಕು. ಅಮೀತ್ ಶಾ, ಯಡಿಯೂರಪ್ಪ, ಅಶೋಕ್, ಹಾಲಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಇವೆರೆಲ್ಲ ಜೈಲಿಗೆ ಹೋಗಿದ್ದರು. ಯಡಿಯೂರಪ್ಪ ಅರ್ಧ ಸಂಪುಟ ಜೈಲಿನಲ್ಲಿ ಇತ್ತು. ಇದನ್ನು ತಿಳಿದುಕೊಂಡು ಮಾತನಾಡಿ ಎಂದು ಸಿಟಿ ರವಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ಸಿಗರ ವಿರುದ್ಧ ಮಾನಹಾನಿ ದಾವೆ : ಸಿ.ಟಿ. ರವಿ
ಇಂದೀರಾ,ನೆಹರು ಬಗ್ಗೆ ಮಾತನಾಡುತ್ತಿದ್ದೀರಿ. ಅವರ ಆಸ್ತಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದೀರಿ. ನಿಮಗೆ ಸಾವಿರ ಕೋಟಿ ಆಸ್ತಿ ಇದೆ. ಇದು ಎಲ್ಲಿಂದ ಬಂತು ಅಂತ ಜನರಿಗೆ ಹೇಳಿ. ನಮಗೂ ಎಲ್ಲಾ ಗೊತ್ತಿದೆ, ಮಾತನಾಡುವಾಗ ಎಚ್ಚರ ಇರಲಿ. ನೆಹರು, ಇಂದೀರಾಗೆ ನಿಮ್ಮ ತಂದೆ ಕೂಡ ವೋಟ್ ಹಾಕಿದ್ದಾರೆ. ಹಾಗಾಗಿ ಗೌರವದಿಂದ ನಡೆದುಕೊಳ್ಳುವಂತೆ ಸಿಟಿ ರವಿಗೆ ಕಾಳಪ್ಪ ತಾಕೀತು ಮಾಡಿದರು.
ಇಂದಲ್ಲ ನಾಳೆ ಸಿಟಿ ರವಿ ಸಿಎಂ ಆಗ್ತಾರೆ. ಈಗಲೇ ಹತಾಶೆಯಿಂದ ರವಿ ಮಾತನಾಡಬರದು. ನಿಮ್ಮದೆ ನಾಯಕ ನಿಮ್ಮ ಬಗ್ಗೆ ಮಾತನಾಡಿದ್ರು. ರವಿದು ಎಲುಬಿಲ್ಲದ ನಾಲಿಗೆ ಅಂತ. ನಮ್ಮ ಕಾರ್ಯಕರ್ತರು ಕೂಡ ಹೆಳ್ತಾರೆ ನಿಮ್ಮದು ಬಚ್ಚಲಮನೆ ಚಪ್ಪಲಿ ನಾಲಿಗೆ ಎಂದು. ನೀವು ಅದರಂತೆ ಮಾತನಾಡುತ್ತಿದ್ದೀರಿ ಎಂದು ಬ್ರಿಜೇಶ್ ಕಾಳಪ್ಪ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.