2014ರಲ್ಲಿ ಭರವಸೆ ಹುಸಿ, 2019ರಲ್ಲಿ ನಂಬಿಕೆಗೆ ದ್ರೋಹ, 2024ರಲ್ಲಿ ನಿರ್ಗಮನ ಗ್ಯಾರಂಟಿ: ಬಿಜೆಪಿ ವಿರುದ್ಧ 'ಕೈ' ಕಿಡಿ

By Kannadaprabha NewsFirst Published Apr 18, 2024, 7:30 AM IST
Highlights

2014ರಲ್ಲಿ ಪ್ರಧಾನಿ ಮೋದಿ ನೀಡಿದ್ದ ಭರವಸೆ ಹುಸಿಗೊಳಿಸಿದರು, 2019ರಲ್ಲಿ ಜನರ ನಂಬಿಕೆಗೆ ದ್ರೋಹ ಬಗೆದ ಹಿನ್ನೆಲೆಯಲ್ಲಿ 2024ರಲ್ಲಿ ಅವರು ನಿರ್ಗಮಿಸುವುದು ಗ್ಯಾರಂಟಿಯಾಗಿದೆ ಎಂದು ಕಿಡಿಕಾರಿದ ಕಾಂಗ್ರೆಸ್

ನವದೆಹಲಿ(ಏ.18):  ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಬಹಿರಂಗ ಪ್ರಚಾರ ಅಂತ್ಯ ಗೊಳ್ಳುವ ಮೊದಲು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರ ತಾರಕ ಕ್ಕೇರಿದ್ದು, 2014ರಲ್ಲಿ ಪ್ರಧಾನಿ ಮೋದಿ ನೀಡಿದ್ದ ಭರವಸೆ ಹುಸಿಗೊಳಿಸಿದರು, 2019ರಲ್ಲಿ ಜನರ ನಂಬಿಕೆಗೆ ದ್ರೋಹ ಬಗೆದ ಹಿನ್ನೆಲೆಯಲ್ಲಿ 2024ರಲ್ಲಿ ಅವರು ನಿರ್ಗಮಿಸುವುದು ಗ್ಯಾರಂಟಿಯಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಈ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, 'ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಭರವಸೆ, 2019ರಲ್ಲಿನಂಬಿಕೆಯೊಂದಿಗೆ ಆಯ್ಕೆಯಾಗಿದ್ದು, 2024ರಲ್ಲಿ ತಮ್ಮ ಗ್ಯಾರಂಟಿಗಳ ಮೂಲಕ ಆಯ್ಕೆ ಯಾಗುವುದಾಗಿ ತಿಳಿಸಿದ್ದಾರೆ. ಆದರೆ 201400 ಅವರು ನೀಡಿದ್ದ ಭರವಸೆಗಳನ್ನು ಈಡೇರಿಸದೆ ಹುಸಿಗೊಳಿಸಿದರು. 2019ರಲ್ಲಿ ಅವರ ಮೇಲೆ ಜನತೆ ಇಟ್ಟಿದ್ದ ನಂಬಿಕೆಗೆ ದ್ರೋಹಬಗೆದರು.

ಚುನಾವಣಾ ಕಣ ರಂಗೇರುತ್ತಿದ್ದಂತೆ ಗುಲಾಮ್ ನಬಿ ಆಜಾದ್ ಯೂ ಟರ್ನ್, ಕಣದಿಂದ ಹಿಂದೆ ಸರಿದ ನಾಯಕ!

ಹೀಗಾಗಿ ಅವರು 2024ರಲ್ಲಿ ನಿರ್ಗಮಿಸುವುದು ಗ್ಯಾರಂಟಿಯಾಗಿದೆ' ಎಂದು ಜೈರಾಂ ರಮೇಶ್ ಕಿಡಿ ಕಾರಿದ್ದಾರೆ.

click me!