ಗುಲಾಂ ನಬಿ ಆಜಾದ್ ಜನ ದ್ರೋಹಿ ನಿರ್ಣಯ ತೆಗೆದುಕೊಂಡಿದ್ದಾರೆ: ಎಚ್.ಕೆ.ಪಾಟೀಲ್‌

By Govindaraj S  |  First Published Aug 27, 2022, 3:19 PM IST

ಭಾರತ್ ಜೋಡೋ ಕಾರ್ಯಕ್ರಮದ ನಡೆಸುವ ಸಂದರ್ಭದಲ್ಲಿ ಆಜಾದ್ ಕಾಂಗ್ರೆಸ್ ತೊರೆದಿದ್ದು ಕೋಮುವಾದಿ ಶಕ್ತಿಗಳಿಗೆ ಬಲ ತಂದಿದೆ ಅಂತಾ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ್‌ ಹೇಳಿದರು. 


ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣನ್ಯೂಸ್, ಗದಗ

ಗದಗ (ಆ.27): ಭಾರತ್ ಜೋಡೋ ಕಾರ್ಯಕ್ರಮದ ನಡೆಸುವ ಸಂದರ್ಭದಲ್ಲಿ ಆಜಾದ್ ಕಾಂಗ್ರೆಸ್ ತೊರೆದಿದ್ದು ಕೋಮುವಾದಿ ಶಕ್ತಿಗಳಿಗೆ ಬಲ ತಂದಿದೆ ಅಂತಾ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ್‌ ಹೇಳಿದರು. ಗದಗನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಭಾರತ್ ಜೋಡೋ ಕಾರ್ಯಕ್ರಮ ಚಾಲನೆ ನೀಡುವಾಗ ಗುಲಾಂ ನಬಿ ಅವರು ಇದ್ದರು. ಈಗ ಪತ್ರದಲ್ಲಿ ಮೊದಲು ಕಾಂಗ್ರೆಸ್ ಜೋಡೋ ಕಾರ್ಯಕ್ರಮ ಆಗಲಿ ಅಂತ ಹೇಳಿದ್ದಾರೆ. ನಾವು, ಅವರು ಕೂತು ಭಾರತ್ ಜೋಡೋ ಕಾಆರ್ಯಕ್ರಮ ನಿರ್ಧರಿಸಿದ್ವಿ. ಆಗಲೇ ಮೊದಲು ಕಾಂಗ್ರೆಸ್ ಜೋಡೋ ಕಾರ್ಯಕ್ರಮ ಮಾಡಿ ಅಂತಾ ಹೇಳಬೇಕಿತ್ತು. ಗುಲಾಂ ನಬಿ ಆಜಾದ್ ಅವರ ರಾಜೀನಾಮೆ ಕೊಟ್ಟಿರೋದು ಪಕ್ಷ ಗಟ್ಟಿಗೊಳಿಸೋದಕ್ಕೆ ಕಾರಣವಾಗುತ್ತೆ ಅಂತಾ ಹೇಳಿದರು.

Tap to resize

Latest Videos

undefined

ಕಾಂಗ್ರೆಸ್ ಹೋರಾಟದಲ್ಲಿದ್ದಾಗ ಬುದ್ಧನಿಗೆ ಜ್ಞಾನೋದಯ ಆದಂತೆ ಆಜಾದ್ ಅವರಿಗೆ ಜ್ಞಾನೋದಯವಾಗಿದೆ: ಪಕ್ಷದಲ್ಲಿ ಚಟುವಟಿಕೆ ಇಲ್ಲದ ಸಮಯದಲ್ಲಿ ಗುಲಾಂ ನಬಿ ಮಲಗಿಕೊಂಡಿದ್ದರು. ಈಗ ಪಕ್ಷ ಕ್ರಿಯಾಶೀಲವಾಗಿ ಹೋರಾಟ ಮಾಡ್ತಿರುವಾಗ ಆಜಾದ್ ಅವರು ಜನ ದ್ರೋಹಿ ನಿರ್ಣಯ ತೆಗೆದುಕೊಂಡಿದ್ದಾರೆ. ದೆಹಲಿಯಲ್ಲಿ ದೊಡ್ಡ ಪ್ರಮಾಣದ ರ್ಯಾಲಿ ಮಾಡುತ್ತಿದ್ದೇವೆ‌. ಬೆಲೆ ಏರಿಕೆ ಸೇರಿದಂತೆ ಜನ ವಿರೋಧಿ ನೀತಿ ಬಗ್ಗೆ ಹೋರಾಟಗಳು ಬಲಗೊಳ್ಳುತ್ತಿವೆ. ರಾಷ್ಟ್ರದಲ್ಲಿ ಬೇರೆ ಬೇರೆ ಕಡೆ ಕೋಮುವಾದಿ ಶಕ್ತಿಗಳು ಪಕ್ಷ ಒಡೆಯುತ್ತಿವೆ. ಪ್ರಜಾಪ್ರಭುತ್ವವನ್ನ ಅಶಕ್ತಗೊಳಿಸುವುದು. 

ಉತ್ತರ ಕರ್ನಾಟಕ ಅಲ್ಲ, ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗಿದೆ; ಉಮೇಶ್ ಕತ್ತಿ

ಜನರ ಮನಸ್ಸನ್ನ ಕೆಡಿಸುವುದು ಮಾಡ್ತಿವೆ. ಇದೇ ಸಂದರ್ಭದಲ್ಲಿ ನಮ್ಮ ಪಕ್ಷದವರೇ ಆಗಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಜೊತೆಗೆ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಆಪಾದನೆ ಮಾಡಿದ್ದಾರೆ. ಆಜಾದ್ ಅವರ ರಾಜೀನಾಮೆ ಬಳಿಕವೂ ಕಾಂಗ್ರೆಸ್ ಕೋಮುವಾದಿ ಶಕ್ತಿಗಳ ವಿರುದ್ಧ ಗಟ್ಟಿಯಾಗಿ ಹೋರಾಡುತ್ತೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು. ಗುಲಾಂ ನಬಿ ಆಜಾದ್ ದುರಾದೃಷ್ಟಕರ ಸಮಯದಲ್ಲಿ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪ್ರೇಮಿ, ಕೋಮುವಾದಿ ವಿರುದ್ಧ ಹೋರಾಡುವವರು ಈಗ ರಾಜೀನಾಮೆ ನೀಡಬಾರದಿತ್ತು ಎಂದು ಖೇದ ವ್ಯಕ್ತಪಡಿಸಿದರು.

ಭಾರತದಲ್ಲಿ ಚುನಾಯಿತ ಸರ್ವಾಧಿಕಾರಿ ವ್ಯವಸ್ಥೆ ಇದೆ, ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ: ಬಿಜೆಪಿ ರಾಜ್ಯ ಸರ್ಕಾರಗಳ ಸರಣಿ ಹಂತಕ ಎಂಬ ಕೇಜ್ರಿವಾಲ್ ಟ್ವೀಟ್‌ಗೆ ಧ್ವನಿಗೂಡಿಸಿದ ಶಾಸಕ ಎಚ್.ಕೆ.ಪಾಟೀಲ್‌, ಕೇಜ್ರಿವಾಲ್ ಹೇಳಿದ್ದನ್ನ ಕಾಂಗ್ರೆಸ್ ನಾಯಕರು ಹತ್ತು ಸಾರಿ ಹೇಳಿದ್ದಾರೆ. ಆಪರೇಷನ್ ಕಮಲ ಮಾಡಿಯೇ ರಾಜ್ಯದಲ್ಲಿ ಸರ್ಕಾರ ಬದಲಾಯಿಸಿದೆ. ಮಹಾರಾಷ್ಟ್ರದಲ್ಲಿ ಒಂದು ಪಕ್ಷ ಒಡೆದು ಸರ್ಕಾರ ಬದಲಾಯಿಸಲಾಯ್ತು. ದೆಹಲಿಯಲ್ಲಿ 40 ಎಂಎಲ್‌ಎಗಳಿಗೆ 800 ಕೋಟಿ ರೂಪಾಯಿ ಕೊಡುತ್ತೇವೆ ಅನ್ನೋ ಹುನ್ನಾರ ನಡೆದಿದೆ.

ಆ್ಯಕ್ಸಿಡೆಂಟ್ ಆದ ರೀತಿಯಲ್ಲಿ ಶವ ಪತ್ತೆ : ವ್ಯಕ್ತಿ ಸಾವಿನ ಹಿಂದೆ ಅನುಮಾನದ ಮೂಟೆ..!

ಪ್ರಜಾಪ್ರಭುತ್ವದಲ್ಲಿ ಬಿಜೆಪಿ ವಿಶ್ವಾಸ ಇಟ್ಟಿಲ್ಲ. ರಾಷ್ಟ್ರದಲ್ಲಿ ಸಂಪೂರ್ಣ ಅಧಿಕಾರ ಇಟ್ಟುಕೊಂಡು ಬಿಜೆಪಿ ನಿರಂಕುಶವಾದಿಯಾಗಲು ಪ್ರಯತ್ನಿಸುತ್ತಿದೆ. ಭಾರದಲ್ಲಿ ಚುನಾಯಿತ ಸರ್ವಾಧಿಕಾರಿ ವ್ಯವಸ್ಥೆ ಇದೆ. ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ. ವಿಶ್ವ ವಿದ್ಯಾಲಯಗಳು ಸಂಶೋಧನೆ ಮಾಡಿ, ಭಾರತದಲ್ಲಿ ಗುಣಮಟ್ಟದ ಪ್ರಜಾಪ್ರಭುತ್ವ ಇಲ್ಲ ಅಂತಾ ಹೇಳಿವೆ.‌ ನಿರಂಕುಶ, ಸರ್ವಾಧಿಕಾರಿ ಧೋರಣೆಯ ಮೋದಿ ವಿರುದ್ಧ ಹೋರಾಟ ಮಾಡಬೇಕಿದೆ ಅಂತಾ ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

click me!