ಜೆಡಿಎಸ್‌ ಸೇರಲು ಕಾಂಗ್ರೆಸ್ ಹಿರಿಯ ನಾಯಕ ಉತ್ಸುಕ: ದೇವೇಗೌಡ್ರನ್ನ ಭೇಟಿಯಾಗಿ ಮಾತುಕತೆ

By Suvarna News  |  First Published Jan 7, 2021, 4:51 PM IST

ಈಗಾಗಲೇ ಕಾಂಗ್ರೆಸ್‌ನಿಂದ ಒಂದು ಕಾಲು ಆಚೆ ಇಟ್ಟಿರುವ ಹಿರಿಯ ನಾಯಕ ಜೆಡಿಎಸ್‌ ಸೇರ್ಪಡೆಗೆ ಉತ್ಸುಕರಾಗಿದ್ದು, ಈ ಬಗ್ಗೆ ಮತ್ತೊಂದು ಸುತ್ತಿನ ಮಾತುಕತೆಗಾಗಿ ದೇವೇಗೌಡ್ರನ್ನ ಭೇಟಿಯಾಗಿದ್ದಾರೆ.


ಬೆಂಗಳೂರು, (ಜ.07): ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಅವರು ಮಾಜಿ ಪ್ರಧಾನಿ ಎಚ್‌. ​​ಡಿ ದೇವೇಗೌಡರನ್ನ ಭೇಟಿ ಮಾಡಿದರು. ಪದ್ಮನಾಭನಗರದಲ್ಲಿರುವ ಹೆಚ್​ಡಿ ದೇವೇಗೌಡರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.

ನಿನ್ನೆಯಷ್ಟೆ (ಬುಧವಾರ) ನಾನು ಜೆಡಿಎಸ್​ ಪಕ್ಷಕ್ಕೆ ಸೇರ್ಪಡೆಯಾಗ್ತಿದ್ದೇನೆ ಎಂಬ ಹೇಳಿಕೆ ನೀಡಿದ್ದ ಇಬ್ರಾಹಿಂ, ಇಂದು (ಗುರುವಾರ) ಆ ಸಂಬಂಧ ಮತ್ತೊಂದು ಸುತ್ತಿನ ಚರ್ಚೆ ನಡೆಸಲು ದೇವೇಗೌಡ್ರನ್ನ ಭೇಟಿ ಮಾಡಿದರು.

Tap to resize

Latest Videos

ಪಕ್ಷ ಸೇರ್ಪಡೆ ಕಾರ್ಯಕ್ರಮ ಹೇಗೆ ಮಾಡಬೇಕು? ಯಾವ ದಿನ ಪಕ್ಷ ಸೇರಬೇಕು ಎಂಬಿತ್ಯಾದಿ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಹಿರಿಯ ನಾಯಕ ಕಾಂಗ್ರೆಸ್ ತೊರೆಯುವುದು ಖಚಿತ, ಜೆಡಿಎಸ್ ಸೇರ್ಪಡೆ ಫಿಕ್ಸ್ ..! 

ಕಾಂಗ್ರೆಸ್‌ನ ಕೆಲ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಸಿಎಂ ಇಬ್ರಾಹಿಂ, ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರ ಉಳಿದಿದ್ದು, ಜೆಡಿಎಸ್​ ಸೇರಲು ನಿರ್ಧರಿಸಿದ್ದಾರೆ.

 ಹೀಗಾಗಿ ಕಳೆದೊಂದು ತಿಂಗಳಿನಿಂದ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಒಮ್ಮೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವುಮಾರ್ ಅವರು ಸಿಎಂ ಇಬ್ರಾಹಿಂ ಅವರನ್ನ ಭೇಟಿ ಮಾಡಿ ಮನವೊಲಿಸುವ ಎಲ್ಲಾ ಪ್ರಯತ್ನಳು ಮಾಡಿದ್ದರು. ಆದ್ರೆ, ಇಬ್ರಾಹಿಂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜೆಡಿಎಸ್‌ ಸೇರಲು ನಿರ್ಧರಿಸಿದ್ದಾರೆ.

click me!