ಬಿಜೆಪಿ ಕೋಟೆ ಬೇಧಿಸಲು ಕಾಂಗ್ರೆಸ್ ಸನ್ನದ್ಧ: ಆಯನೂರು ಮಂಜುನಾಥ್‌

By Kannadaprabha News  |  First Published May 29, 2024, 11:45 PM IST

ಕಳೆದ 42 ವರ್ಷದಿಂದ ಬಿಜೆಪಿ ವಶದಲ್ಲಿರುವ ನೈಋತ್ಯ ಪದವೀಧರ ಕ್ಷೇತ್ರ ಗೆಲ್ಲುವ ಮೂಲಕ ಕಾಂಗ್ರೆಸ್ ತನ್ನ ಪ್ರಾಬಲ್ಯ ಪ್ರಚುರಪಡಿಸಲಿದೆ. ಬಿಜೆಪಿ ಕೋಟೆ ಬೇಧಿಸಲು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರು ಸನ್ನದ್ಧರಾಗಿದ್ದಾರೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್‌ ಹೇಳಿದರು.


ಸೊರಬ (ಮೇ.29): ಕಳೆದ 42 ವರ್ಷದಿಂದ ಬಿಜೆಪಿ ವಶದಲ್ಲಿರುವ ನೈಋತ್ಯ ಪದವೀಧರ ಕ್ಷೇತ್ರ ಗೆಲ್ಲುವ ಮೂಲಕ ಕಾಂಗ್ರೆಸ್ ತನ್ನ ಪ್ರಾಬಲ್ಯ ಪ್ರಚುರಪಡಿಸಲಿದೆ. ಬಿಜೆಪಿ ಕೋಟೆ ಬೇಧಿಸಲು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರು ಸನ್ನದ್ಧರಾಗಿದ್ದಾರೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್‌ ಹೇಳಿದರು. ಪಟ್ಟಣದ ಬಂಗಾರಧಾಮದಲ್ಲಿರುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬುಧವಾರ ಕಾರ್ಯಕರ್ತರು ಮತ್ತು ಮತದಾರರ ಸಭೆ ನಡೆಸಿ ಮಾತನಾಡಿ

ರಾಜ್ಯದಲ್ಲಿ ಬಿಜೆಪಿ ಸ್ವಲ್ಪವಾದರೂ ಬೆಳೆದಿದ್ದರೆ ಅದಕ್ಕೆ ವಿಧಾನ ಪರಿಷತ್ ಚುನಾವಣೆಗಳೇ ಕಾರಣ. ಆದರೆ ಪದವೀಧರ ಮತ್ತು ಶಿಕ್ಷಕರ ಪ್ರಜ್ಞಾವಂತ ಮತದಾರರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದ ಕಾರಣ ಇತ್ತೀಚಿನ ದಿನಗಳಲ್ಲಿ ಪರಿಷತ್ ಚುನಾವಣೆಗಳಲ್ಲೂ ಸೋಲುತ್ತಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕ್ಷೇತ್ರದ ಕಾರ್ಮಿಕರು, ನೌಕರರು ಮತ್ತು ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ವಿರೋಧಿ ನಿಲುವುಗಳ ತೆಗೆದುಕೊಂಡ ಪರಿಣಾಮ ತಾವು ಅವಧಿಗೂ ಮೊದಲೇ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 

Tap to resize

Latest Videos

undefined

ನನ್ನ ದೂಷಿಸುವ ಸಚಿವ ಪ್ರಿಯಾಂಕ್‌ ತಾವೇ ಮೈಪೂರ್ತಿ ಗ್ರೀಸ್‌ ಮೆತ್ತಿಕೊಂಡಿದ್ದಾರೆ: ಆಂದೋಲಾ ಶ್ರೀ ಲೇವಡಿ

ಈ ಬಾರಿಯ ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ತಮಗೆ ಮತ ನೀಡಬೇಕು. ಅದರ ಋಣ ತೀರಿಸುವ ಕೆಲಸ ತಾವು ಮಾಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಬಿಜೆಪಿಗರಿಗೆ ತಮ್ಮ ಮೇಲೆ ಸಲ್ಲದ ಸಿಟ್ಟು ಮತ್ತು ಆಕ್ರೋಶ ಬಂದಿದೆ. ತಾವು ಗೆಲುವು ಸಾಧಿಸದಂತೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ ಬಿಜೆಪಿಯ ಎಲ್ಲಾ ಪಟ್ಟುಗಳನ್ನು ಬಲ್ಲ ತಾವು ಪ್ರತಿತಂತ್ರ ರೂಪಿಸಿದ್ದೇವೆ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೆಚ್ಚಿನ ಕಾಳಜಿ ವಹಿಸಿ ಪ್ರಚಾರ ನಡೆಸಿದ್ದಾರೆ. ಈ ಕಾರಣದಿಂದ ನೈರುತ್ಯ ಕ್ಷೇತ್ರ ಕಾಂಗ್ರೆಸ್ ಕೋಟೆ ಭದ್ರವಾಗಿದೆ ಎಂದರು.

ಈ ಸಂದರ್ಭದಲ್ಲಿ ಬೋವಿ ಸಮಾಜದ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಮುಖಂಡ ಹುಲ್ತಿಕೊಪ್ಪ ಶ್ರೀಧರ, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಜೋತಾಡಿ, ಮುಖಂಡರಾದ ಎಚ್.ಗಣಪತಿ, ಎಂ.ಡಿ. ಶೇಖರ್, ಜಯಶೀಲಗೌಡ್ರು ಅಂಕರವಳ್ಳಿ, ಜಯಶೀಲಪ್ಪ, ಜೆ.ಪ್ರಕಾಶ್, ರಶೀದ್ ಸಾಬ್, ಹೂವಪ್ಪ ಕೊಡಕಣಿ, ಸುರೇಶ್ ಬಿಳವಾಣಿ, ಪ್ರವೀಣ್ ಶಾಂತಗೇರಿ, ಮೊಹಮ್ಮದ್ ಸಾಜಿದ್, ಸುಲ್ತಾನ ಬೇಗಂ ಇತರರಿದ್ದರು.

ರಾಮಮಂದಿರ ನಿರ್ಮಾಣ ಮಾಡಿದ್ರೆ ಜವಾಬ್ದಾರಿ ಮುಗಿಯಲ್ಲ: ಪೇಜಾವರ ಶ್ರೀ

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಸ್.ಪಿ.ದಿನೇಶ್ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅವರಿಗೆ ಸ್ಪರ್ಧಿಸಲು ಹೇಳಿರುವುದೇ ಬಿ.ವೈ.ರಾಘವೇಂದ್ರ. ನೈಋತ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದವರ ಇತಿಹಾಸವಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಪಿ. ದಿನೇಶ್ ಅತ್ಯಂತ ಕನಿಷ್ಠ ಮತಗಳ ಮಾತ್ರ ಪಡೆದಿದ್ದಾರೆ. ಹೀಗಿದ್ದೂ ಮತ್ತೆ ಸ್ಪರ್ಧಿಸಿರುವುದರ ಹಿಂದೆ ಬಿಜೆಪಿಯ ಕೈವಾಡವಿದೆ. ಆದರೆ ಅವರ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.
-ಆಯನೂರು ಮಂಜುನಾಥ, ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ

click me!