ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮೈತ್ರಿಯಿಂದ ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ' ಎಂದು ಹೇಳುವ ಮೂಲಕ ಮತದಾರರ ಗಮನ ಸೆಳೆಯಲು ಪ್ರಯತ್ನಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಅನಂತನಾಗ್(ಜಮ್ಮುಕಾಶ್ಮೀರ)(ಸೆ.12): ಮುಂದಿನ ತಿಂಗಳು ನಡೆಯಲಿರುವ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಕರ್ನಾಟಕ ಮಾದರಿಯಲ್ಲಿಯೇ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಮಹಿಳೆಯ ರಿಗೆ ಮಾಸಿಕ 3 ಸಾವಿರ ರು. ಹಣಕಾಸಿನ ನೆರವು, 11 ಕೇಜಿ ಪಡಿತರ ಸೇರಿದಂತೆ 5 ಭರವಸೆಗಳನ್ನು ನೀಡಿದೆ.
ದಕ್ಷಿಣ ಕಾಶ್ಮೀರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಗ್ಯಾರಂಟಿ ಭರವಸೆಗಳನ್ನು ಪ್ರಕಟಿಸಿದರು. 'ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮೈತ್ರಿಯಿಂದ ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ' ಎಂದು ಹೇಳುವ ಮೂಲಕ ಮತದಾರರ ಗಮನ ಸೆಳೆಯಲು ಪ್ರಯತ್ನಿಸಿದರು.
ಕಾಶ್ಮೀರದಲ್ಲಿ ಕರ್ನಾಟಕದ ರೀತಿ ಉಚಿತ ಭರವಸೆಗಳ ಬಿಜೆಪಿ ಪ್ರಣಾಳಿಕೆ ರಿಲೀಸ್..!
ಬಿಜೆಪಿ ಕೂಡ ಜಮ್ಮು- ಕಾಶ್ಮೀರ ಜನತೆಗೆ ಇಂಥದ್ದೇ ಉಚಿತ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು.
5 ಗ್ಯಾರಂಟಿಗಳು ಏನು?
1 ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ಮಾಸಿಕ 3 ಸಾವಿರ ರು. ಆರ್ಥಿಕ ನೆರವು
2 ಪ್ರತಿ ಕುಟುಂಬಕ್ಕೆ ತಿಂಗಳಿಗೆ 11 .ಕೆ.ಜಿ ಧಾನ್ಯ ನೀಡುವ
3 ಪಡಿತರ ಸ್ಟೀಂ ಮರುಜಾರಿ 3 ಮಹಿಳಾ ಉದ್ಯಮಿಗಳಿಗೆ 5 ಲಕ್ಷ ರು. ರವರೆಗೆ ಬಡ್ಡಿ ರಹಿತ ಸಾಲ
4 ಪ್ರತಿ ಕುಟುಂಬಕ್ಕೆ 25 ಲಕ್ಷ ರು. ವರೆಗಿನ ಆರೋಗ್ಯ ವಿಮೆ
5 ಮನಮೋಹನ ಸಿಂಗ್ ಕಾಲದಲ್ಲಿ ನೀಡಿದ್ದ ಕಾಶ್ಮೀರಿ 5 ಪಂಡಿತರಿಗೆ ಪುನರ್ವಸತಿಯ ಭರವಸೆ ಈಡೇರಿಸುವಿಕೆ