Karnataka Politics: ಕಾಂಗ್ರೆಸ್ಸಿಗೆ ಸೈದ್ಧಾಂತಿಕ ಸ್ಪಷ್ಟತೆ ಬೇಕು: ಸಿದ್ದರಾಮಯ್ಯ

Published : Apr 02, 2022, 12:04 PM IST
Karnataka Politics: ಕಾಂಗ್ರೆಸ್ಸಿಗೆ ಸೈದ್ಧಾಂತಿಕ ಸ್ಪಷ್ಟತೆ ಬೇಕು: ಸಿದ್ದರಾಮಯ್ಯ

ಸಾರಾಂಶ

*   ಕೋಮುವಾದದ ವಿರುದ್ಧ ನಿಂತರೆ ಮತ್ತೊಂದು ವರ್ಗ ತಪ್ಪು ತಿಳಿಯುತ್ತೆ ಎಂಬುದನ್ನು ಮೊದಲು ಬಿಡಿ *   ಜಾತ್ಯತೀತತೆ ರಕ್ಷಣೆಗೆ ಕಾಂಗ್ರೆಸ್‌ ಆಕ್ರಮಣಶೀಲವಾಗಿ ಕೆಲಸ ಮಾಡಬೇಕು *   ರಾಹುಲ್‌ ಸಮ್ಮುಖವೇ ಪ್ರತಿಪಕ್ಷ ನಾಯಕ ಆಗ್ರಹ  

ಬೆಂಗಳೂರು(ಏ.02):  ಶೋಷಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಸುರಕ್ಷತೆ ದೃಷ್ಟಿಯಿಂದ ಕಾಂಗ್ರೆಸ್‌(Congress) ತನ್ನ ಸಿದ್ಧಾಂತದ ಬಗ್ಗೆ ಸ್ಪಷ್ಟತೆ ಹೊಂದಿರಬೇಕು. ಕೋಮುವಾದದ ವಿರುದ್ಧ ಹಾಗೂ ಜಾತ್ಯತೀತತೆ ಪರ ಸ್ಪಷ್ಟಹಾಗೂ ಕಠಿಣ ನಿಲುವು ತಾಳಬೇಕು. ಅನ್ಯರು ತಪ್ಪು ಭಾವಿಸುತ್ತಾರೆ ಎಂಬ ಅಳಕು ಭಾವನೆಯನ್ನು ಬಿಟ್ಟು ತನ್ನ ಸಿದ್ಧಾಂತದ ಪರ ಆಕ್ರಮಣಶೀಲವಾಗಿ ಮುನ್ನಡೆಯಬೇಕು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಒತ್ತಾಯಿಸಿದ್ದಾರೆ.

ಕೆಪಿಸಿಸಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ(Rahul Gandhi) ಸಮ್ಮುಖ ಈ ಒತ್ತಾಯ ಮಾಡಿದ ಸಿದ್ದರಾಮಯ್ಯ ಅವರು, ಶೋಷಿತರು, ಅಲ್ಪಸಂಖ್ಯಾತರ(Minorities) ರಕ್ಷಣೆಗಾಗಿ ಕೋಮುವಾದದ(Communal) ವಿರುದ್ಧ ಹಾಗೂ ಜಾತ್ಯತೀತತೆ ಪರ ಕಠಿಣ ಮತ್ತು ಸ್ಪಷ್ಟನಿಲುವು ಕಾಂಗ್ರೆಸ್‌ ಹೊಂದಬೇಕು. ಸಂವಿಧಾನದಡಿ ಜಾತ್ಯತೀತತೆಯನ್ನು ರಕ್ಷಿಸಲು ಪಕ್ಷ ಮತ್ತಷ್ಟು ಆಕ್ರಮಣಶೀಲವಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ, ಜಾತ್ಯತೀತ(Secular) ಮೌಲ್ಯಗಳ ರಕ್ಷಣೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.

Karnataka Politics: ಸಿದ್ದರಾಮಯ್ಯರಿಂದ ವೋಟ್‌ ರಾಜಕಾರಣ: ಸಚಿವ ಆರಗ

ಕೋಮುವಾದದ ವಿರುದ್ಧ ನಿಲುವು ತಳೆದರೆ ಮತ್ತೊಂದು ವರ್ಗ ತಪ್ಪು ತಿಳಿಯುತ್ತದೆ ಎಂಬ ಆಲೋಚನೆಗಳಿದ್ದರೆ ಅದನ್ನು ನಾವೆಲ್ಲ ಮೊದಲು ಬಿಡಬೇಕು. ನಮಗೆ ಜಾತ್ಯತೀತತೆಯಲ್ಲಿ ಸ್ಪಷ್ಟತೆ ಇರಬೇಕು. ರಾಹುಲ್‌ ಗಾಂಧಿ ಹಾಗೂ ಸೋನಿಯಾಗಾಂಧಿ ಅವರೂ ಈ ವಿಚಾರದಲ್ಲಿ ರಾಜಿ ಆಗುವುದಿಲ್ಲ. ಕಾಂಗ್ರೆಸ್‌ ಕೂಡ ಆಗಬಾರದು ಎಂದರು.

ರಾಜ್ಯ ಬಿಜೆಪಿ ಸರ್ಕಾರವು(BJP Government) ರಾಜ್ಯದಲ್ಲಿ ಜನರ ಸಮಸ್ಯೆ ಪರಿಹರಿಸುವ ಬದಲಾಗಿ ಸಮಾಜವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಚುನಾವಣೆ(Election) ಹತ್ತಿರ ಬಂದಿರುವುದರಿಂದ ಹೆಚ್ಚು ಹೆಚ್ಚು ಕೋಮು ವೈಷಮ್ಯದ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ. ಮೊದಲಿಗೆ ಅನಗತ್ಯವಾಗಿ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿದರು. ಈಗ ಹಿಜಾಬ್‌, ಭಗವದ್ಗೀತೆ, ಹಲಾಲ್‌ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಈ ಮೂಲಕ ಸಮಾಜದಲ್ಲಿನ ಯುವಕರ ಮನಸ್ಸಿನಲ್ಲಿ ದ್ವೇಷದ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹಿಜಾಬ್‌(Hijab) ವಿವಾದವಾಗುವಂತಹ ವಿಷಯವೇ ಆಗಿರಲಿಲ್ಲ. ನೂರಾರು ವರ್ಷಗಳಿಂದ ಮುಸ್ಲಿಂ(Muslim) ಸಮುದಾಯದವರು ಆಚರಿಸಿಕೊಂಡು ಬಂದ ಪದ್ಧತಿಯಿದು. ಸರ್ಕಾರ ಮನಸ್ಸು ಮಾಡಿದರೆ ಆರಂಭದಲ್ಲೇ ದೇಶಾದ್ಯಂತ ವ್ಯಾಪಿಸದಂತೆ ತಡೆಯಬಹುದಿತ್ತು. ಆರ್‌ಎಸ್‌ಎಸ್‌(RSS), ಬಜರಂಗದಳ, ಹಿಂದೂ ಮಹಾಸಭಾದವರು ಸರ್ಕಾರದ ಕುಮ್ಮಕ್ಕಿನಿಂದ ದೊಡ್ಡ ವಿಷಯವನ್ನಾಗಿ ವಿದ್ಯಾರ್ಥಿಗಳ ಮುಂದಿಟ್ಟು, ಮುಸ್ಲಿಮರನ್ನು ಖಳ ನಾಯಕರನ್ನಾಗಿ ಬಿಂಬಿಸಿದ್ದಾರೆ. ಇದರಲ್ಲಿ ಎಸ್‌ಡಿಪಿಐ ಕುಮ್ಮಕ್ಕು ಕೂಡ ಇದೆ. ಇದಕ್ಕಾಗಿಯೇ ಈ ಸಂಘಟನೆಗಳನ್ನು ನಿಷೇಧಿಸುವಂತೆ ಸದನದಲ್ಲಿ ಒತ್ತಾಯಿಸಿದ್ದೇನೆ. ಆದರೂ ಸರ್ಕಾರ ತಮ್ಮ ಮತ ಧ್ರುವೀಕರಣಕ್ಕಾಗಿ ಇಂತಹ ವಿಚಾರಗಳನ್ನು ಮುನ್ನೆಲೆಗೆ ತರಲು ಅಗತ್ಯವಿರುವುದರಿಂದ ನಿಷೇಧ ಮಾಡುವುದಿಲ್ಲ ಎಂದರು.

ಕಾಂಗ್ರೆಸ್‌ನಿಂದ ಮೃದು ಹಿಂದುತ್ವ ಜಪ: ನಾವೂ ಹಿಂದುಗಳೇ ಎಂದ ಸಿದ್ದು

135-140 ಸ್ಥಾನ ಗೆಲ್ಲಬೇಕು:

ರಾಜ್ಯದಲ್ಲಿ ಶೇ.40ರಷ್ಟು ಕಮಿಷನ್‌ ಪಡೆಯುವ ಭ್ರಷ್ಟಸರ್ಕಾರ ಅಧಿಕಾರದಲ್ಲಿದೆ. ಇದನ್ನು ಕಿತ್ತೊಗೆಯಲು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಕನಿಷ್ಠ 135-140 ಸ್ಥಾನಗಳನ್ನು ಗೆಲ್ಲಲೇಬೇಕು. ಆ ಮೂಲಕ ಕೋಮುವಾದಿಗಳನ್ನು ಅಧಿಕಾರದಿಂದ ಕಿತ್ತು ಬಿಸಾಕಬೇಕು. ಹೀಗಾಗಿ ಆ ವ್ಯಕ್ತಿ, ಈ ವ್ಯಕ್ತಿ ಎಂದು ವೈಯಕ್ತಿಕ ಚಿಂತನೆ ಮಾಡದೆ ಎಲ್ಲರೂ ಒಟ್ಟಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹೋರಾಟ ಮಾಡಬೇಕು. ಪ್ರತಿ ಮನೆ-ಮನೆಗೂ ಹೋಗಿ ಬಿಜೆಪಿಯ ವೈಫಲ್ಯಗಳನ್ನು ಜನರ ಮುಂದಿಡಬೇಕು ಎಂದು ಕರೆ ನೀಡಿದರು.

6 ತಿಂಗಳ ಮೊದಲೇ ಟಿಕೆಟ್‌ ಹಂಚಿಕೆಗೆ ರಾಹುಲ್‌ ಒಪ್ಪಿಗೆ

ವಿಧಾನಸಭೆ ಚುನಾವಣೆಗೆ(Karnataka Assembly Election) ಆರು ತಿಂಗಳ ಮೊದಲೇ ಅಭ್ಯರ್ಥಿ ಘೋಷಿಸಲು ರಾಹುಲ್‌ ಗಾಂಧಿ ಒಪ್ಪಿದ್ದಾರೆ. ಇದರಿಂದ ಅಭ್ಯರ್ಥಿಗಳು ತಮ್ಮೆಲ್ಲ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಪರಿಣಾಮಕಾರಿಯಾಗಿ ಚುನಾವಣೆ ಎದುರಿಸಲು ಸಾಧ್ಯವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ಚುನಾವಣೆಗೆ 6 ತಿಂಗಳು ಮೊದಲೇ ಟಿಕೆಟ್‌ ಘೋಷಿಸುವಂತೆ ಮನವಿ ಮಾಡಿದ್ದೆವು. ಅದಕ್ಕೆ ರಾಹುಲ್‌ಗಾಂಧಿ ಒಪ್ಪಿದ್ದಾರೆ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ಪ್ರೆಗ್ನಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ - ಯುವತಿ ಆತ್ಮ*ಹತ್ಯೆ