Karnataka Politics: ವಿಜಯೇಂದ್ರಗೆ ಭೇಷ್‌ ಎಂದ ಅಮಿತ್‌ ಶಾ

By Girish Goudar  |  First Published Apr 2, 2022, 4:29 AM IST

*   ಸಿದ್ಧಗಂಗೆ ಕಾರ್ಯಕ್ರಮ ಯಶಸ್ಸಿಗೆ ಮೆಚ್ಚುಗೆ
*   2 ತಿಂಗಳಿಂದ ಸಿದ್ಧತೆ ನಡೆಸಿದ್ದ ವಿಜಯೇಂದ್ರ
*  ರಾಜಕೀಯ ಚಾಣಾಕ್ಷನನ್ನು ಕರೆ ತರುವಲ್ಲಿ ಯಶಸ್ವಿ
 


ತುಮಕೂರು(ಏ.02): 2 ವರ್ಷಗಳ ಕೊರೋನಾ(Coronavirus) ಬಳಿಕ ಲಿಂಗೈಕ್ಯ ಡಾ.  ಶಿವಕುಮಾರ ಸ್ವಾಮೀಜಿ(Dr Shivakumar Swamioji) ಅವರ ಜಯಂತ್ಯುತ್ಸವ ಕಾರ್ಯಕ್ರಮ ಮಾಡಲು ತೀರ್ಮಾನವಾದಾಗಿನಿಂದಲೂ ಉಸ್ತುವಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ನೆರವೇರುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶ್ರೀಗಳ ಜಯಂತ್ಯುತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ಅವರು ಕೇಂದ್ರ ಸಚಿವ ಅಮಿತ್‌ ಶಾ(Amit Shah) ಅವರ ಪ್ರಶಂಸೆಗೆ ಪಾತ್ರರಾದರು.

ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾ ಅವರು ತಮ್ಮ ಭಾಷಣದ ಕೊನೆಯಲ್ಲಿ ‘ವಿಜಯೇಂದ್ರ ಮತ್ತವರ ತಂಡ ಉತ್ತಮ ಕೆಲಸ ಮಾಡಿದೆ’ ಎಂದು ಮುಕ್ತಕಂಠದಿಂದ ಹೊಗಳಿದರು. ಕಳೆದ ಎರಡು ತಿಂಗಳಿನಿಂದ ಯುವಕರ ತಂಡವನ್ನು ಕಟ್ಟಿ ಕಾರ್ಯಕ್ರಮದ ಸಿದ್ಧತೆಗೆ ಶ್ರಮಿಸಿದ್ದ ವಿಜಯೇಂದ್ರ ಕಾರ್ಯಕ್ರಮಕ್ಕೆ ಒಂದು ವಾರ ಇರುವಾಗಲೇ ತುಮಕೂರಿನಲ್ಲೇ(Tumakuru) ನೆಲೆ ನಿಂತು ಬೆಳಗ್ಗೆಯಿಂದ ರಾತ್ರಿಯವರೆಗೂ ಉಸ್ತುವಾರಿ ವಹಿಸಿದ್ದರು. ಕಾರ್ಯಕ್ರಮಕ್ಕೆ ಕೇಂದ್ರ ನಾಯಕರು ಅದರಲ್ಲೂ ಅಮಿತ್‌ ಶಾ ಅವರನ್ನು ಕರೆ ತರುವ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರ ಪಾತ್ರ ದೊಡ್ಡದಿತ್ತು. ನಿರಂತರವಾಗಿ ಕೇಂದ್ರ ಸಚಿವರ ಜೊತೆ ಚರ್ಚೆ ನಡೆಸಿ ಮಠದ ಕಾರ್ಯಕ್ರಮವನ್ನು ಮನವರಿಕೆ ಮಾಡಿಕೊಟ್ಟು ರಾಜಕೀಯ ಚಾಣಾಕ್ಷನನ್ನು ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಶ್ರೀ ಮಠಕ್ಕೆ ಆಗಮಿಸುತ್ತಿದ್ದ ವಿಜಯೇಂದ್ರ ಕಾರ್ಯಕ್ರಮ ನಡೆದ ವೇದಿಕೆ ಸೇರಿದಂತೆ ಬೇರೆಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವೆಲ್ಲಾ ಮಠದ ಭಕ್ತರು ಹಾಗೂ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

Tap to resize

Latest Videos

Karnataka Politics: ಕುತೂಹಲ ಮೂಡಿಸಿದ ಯಡಿಯೂರಪ್ಪ ಪುತ್ರನ ಹೇಳಿಕೆ

ಕೊರೋನಾ ಬಳಿಕ ನಡೆದ ಮೊದಲ ದೊಡ್ಡ ಕಾರ್ಯಕ್ರಮ ಇದಾಗಿದ್ದು ಸ್ವಾಮೀಜಿ ಅವರ ಭಕ್ತರು ರಾಜ್ಯದ ಮೂಲೆ ಮೂಲೆಗಳಿಂದ ಬರುವುದರಿಂದ ಅವರಿಗೆ ಅಚ್ಚುಕಟ್ಟಾಗಿ ದಾಸೋಹ ವ್ಯವಸ್ಥೆ ಮಾಡುವುದು ದೊಡ್ಡ ಜವಾಬ್ದಾರಿಯಾಗಿದ್ದು ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಅಮಿತ್‌ ಶಾ ಮಾತ್ರವಲ್ಲದೆ ಸುತ್ತೂರು ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಡಾ. ಜಿ.ಪರಮೇಶ್ವರ್‌ ಸೇರಿದಂತೆ ಹಲವಾರು ಗಣ್ಯರು ಸಹ ತಮ್ಮ ಭಾಷಣದ ವೇಳೆ ವಿಜಯೇಂದ್ರರನ್ನು ಶ್ಲಾಘಿಸಿದರು.

ಹಿಜಾಬ್ ತೀರ್ಪು ವಿರೋಧಿಸಿದ್ದೇ Muslims Traders Boycott ವಿವಾದಕ್ಕೆ ಕಾರಣ

ಗದಗ: ದಕ್ಷಿಣ ಕನ್ನಡ (Dakshina Kannada), ಶಿವಮೊಗ್ಗ (Shivamogga) ಸೇರಿ ಕೆಲ ಜಿಲ್ಲೆಗಳ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ (Muslim) ವ್ಯಾಪಾರಿಗಳನ್ನ ಬ್ಯಾನ್ ಮಾಡಿರೋ ವಿಚಾರಕ್ಕೆ ಗದಗದಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಇದು ಕ್ರಿಯೆಗೆ ಪ್ರತಿಕ್ರಿಯೆ ಎಂದಿದ್ದರು. 

ಮಾ.23 ರಂದು ಗದಗ ಜಿಲ್ಲಾ ಬಿಜೆಪಿ ನೂತನ ಕಟ್ಟಡ ವೀಕ್ಷಿಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ವಿಜಯೇಂದ್ರ ಎಲ್ಲ ವಿವಾದ ಆರಂಭವಾಗಿದ್ದ ಹಿಜಾಬ್ ನಿಂದ. ಕೋರ್ಟ್ ಆದೇಶ ವಿರುದ್ಧ ಬಂದ್ ಮಾಡಿದ್ದಕ್ಕೆ ವ್ಯಾಪಾರ ಬ್ಯಾನ್ ಮಾಡಲಾಗಿದೆ.

ಹೈಕೋರ್ಟ್  (High Court) ನಿರ್ಧಾರ ಬಂದರೂ ಈ ರೀತಿ ಚಟುವಟಿಕೆ ಮಾಡಿದ್ದು ಯಾರೂ ಒಪ್ಪುವುವಂಥದ್ದಲ್ಲ. ಎಲ್ಲರೂ ಸಮಾಧಾನದಿಂದ ಕೂತು ಚರ್ಚಿಸಬೇಕಾಗಿದೆ.ಕೋರ್ಟ್ ಆದೇಶದ ವಿರುದ್ಧ ಬಂದ್ ಮಾಡಿದಾಗ ಕಣ್ಣು ಮುಚ್ಚಿ ಕೂರಕ್ಕೆ ಸಾಧ್ಯವಿಲ್ಲ ಎಂದು ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ಬ್ಯಾನ್ ಮಾಡಿದ್ದರ ಬಗ್ಗೆ ಬಿವೈ ವಿಜಯೇಂದ್ರ ಸಮರ್ಥಿಸಿಕೊಂಡಿದ್ದರು. 

ಕರುನಾಡು ಕೈವಶಕ್ಕೆ ಬಿಜೆಪಿ ಹೈಕಮಾಂಡ್‌ ಬತ್ತಳಿಕೆಯಲ್ಲಿ ವಿಜಯೇಂದ್ರ ಅಸ್ತ್ರ

ಎರಡೂ ಕೈ ಸೇರಿದರೇ ಚಪ್ಪಾಳೆಯಾಗುತ್ತೆ. ಒಂದೇ ಕೈ ಸೇರಿದರೆ ಚಪ್ಪಾಳೆ ಆಗಲ್ಲ.  ಎಲ್ಲರೂ ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು. ಹಿಜಾಬ್ ನಂತರ ಆದ ಬೆಳವಣಿಗೆ ಯಾರಿಗೂ ಶೋಭೆ ತರುವಂತದ್ದಲ್ಲ. ಹಿಜಾಬ್ ಹೆಸರಲ್ಲಿ ಮಕ್ಕಳ ಮನಸ್ಸು ಹಾಳು ಮಾಡುವ ಪ್ರಕ್ರಿಯೆ ನಡೀತು.ಹೈಕೋರ್ಟ್ ತೀರ್ಪು ನೀಡಿದ ನಂತರವಾದರೂ ಅರ್ಥ ಮಾಡಿಕೊಳ್ಳಬೇಕಿತ್ತು. ಜೆಡ್ಜಮೆಂಟ್ ವಿರುದ್ಧ ಬಂದ್ ಗೆ ಕರೆ ನೀಡಿದ್ದು. ಅಂಗಡಿ ಮುಂಗಟ್ಟು ಬಂದ್ ಮಾಡುವುದು, ಬಂದ್ ಮಾಡಿದ ನಂತರ ಪ್ರತಿಕ್ರಿಯೆ ನಡೀತಿದೆ.

ಬರುವ ದಿನಗಳಲ್ಲಿ ಯಾವ ರೀತಿಯ ಪ್ರತಿಕ್ರಿಯೆ ನಡೆಯುತ್ತೆ ಅನ್ನೋದು ನೋಡಬೇಕು. ಎಲ್ಲವೂ ಹಿಜಾಬ್ ನಿಂದಲೇ ಶುರುವಾಗಿದ್ದು. ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹಾಗೂ ಮಾಜಿ ಸಿಎಮ್ ಯಡಿಯೂರಪ್ಪ ಅವರು ಈ ಸಂಗತಿಯನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಬರುವ ದಿನದಲ್ಲಿ ಚರ್ಚಿಸಿ ಮುಂದೆ ಯಾವ ರೀತಿ ಸ್ಪಂದಿಸಬೇಕೆಂದು ನಿರ್ಧರಿಸಲಿದ್ದಾರೆ ಎಂದು ಹೇಳಿದ್ದರು. 
 

click me!