ಸಚಿವ ಡಾ.ಸಿಎನ್. ಅಶ್ವತ್ಥ್ ನಾರಾಯಣ ಹಾಗೂ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಮಧ್ಯೆ ಮತ್ತೆ ಆರೋಪ-ಪ್ರತ್ಯಾರೋಪ ಜೋರಾಗಿದೆ.
ರಾಮನಗರ, (ಸೆಪ್ಟೆಂಬರ್.16): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಇಡಿ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ಅವರ ಸಹೊದರ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದು, ಇದು ಇಡಿ ನೋಟಿಸ್ ಅಲ್ಲ, ಬಿಜೆಪಿ ಬೆದರಿಕೆ ಪತ್ರ ಎಂದು ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣದಲ್ಲಿ ಇಂದು(ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್ ಮೇಲೆ ಆಗಾಗ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಇದು ಇಡಿ ನೋಟಿಸ್ ಅಲ್ಲ, ಬಿಜೆಪಿ ಬೆದರಿಕೆ ಪತ್ರ. ಬಿಜೆಪಿ ಬೆದರಿಕೆ ಪತ್ರಕ್ಕೆ ಡಿ.ಕೆ. ಶಿವಕುಮಾರ್ ಆಗಲಿ ಕಾಂಗ್ರೆಸ್ ಆಗಲಿ ಎದರುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.
undefined
ಅವರು ಏನೇ ಮಾಡಿದ್ರು ಅದನ್ನ ಎದುರಿಸಲು ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ತಯಾರಿದೆ. ಶಿವಕುಮಾರ್ ಅವರನ್ನ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಏನು ಮಾಡುತ್ತಾರೋ ಗೊತ್ತಿಲ್ಲ. ಆದ್ರೆ ಇದು ಬಿಜೆಪಿ ಪಕ್ಷದ ನೋಟಿಸ್ ಅಷ್ಟೇ ಎಂದು ಕಿಡಿಕಾರಿದರು.
ಡಿಕೆಶಿಗೆ ಇ.ಡಿ ಸಮನ್ಸ್; ಭಾರತ ಏಕತಾ ಯಾತ್ರೆ, ಅಧಿವೇಶನದ ವೇಳೆ ಕಿರುಕುಳ ಎಂದ ಕಾಂಗ್ರೆಸ್ ಅಧ್ಯಕ್ಷ
ಕಳೆದ 75 ವರ್ಷಗಳಿಂದ ರಾಮನಗರ ಅಭಿವೃದ್ಧಿ ಪಡಿಸಿಲ್ಲ ಎಂಬ ಅಶ್ವಥ್ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಅವರ ಕೊಳಕು ಹಾಗೂ ಭ್ರಷ್ಟ ರಾಜಕೀಯ 75 ವರ್ಷ ಇರಲಿಲ್ಲ. ನಾಡ ಕಛೇರಿ ಹಾಗೂ ತಹಶಿಲ್ದಾರ್ ಕಚೇರಿಯಲ್ಲಿ ಕೆಲಸ ಆಗ ಬೇಕು ಅಂದ್ರೆ ಹಣ ಕೊಡಬೇಕು. ಪೊಲೀಸ್ ಠಾಣೆಯಲ್ಲಿ ಕೆಲಸ ಆಗಬೇಕಾದರೆ ಹಣ ಕೊಡಬೇಕು. ಯಾರಿಗಾದರೂ ಉದ್ಯೋಗ ಕೊಡಬೇಕಾದ್ರು ಹಣ ಕೊಡಬೇಕು. ಭ್ರಷ್ಟಾಚಾರ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿದೆ. ಈಗಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವಧಿಯಿಂದ ತನಿಖೆ ಮಾಡ್ತೇವೆ ಅಂತಿದ್ದಾರೆ. ಅವರ ತಾಕತ್ತನ್ನ ಪ್ರದರ್ಶನ ಮಾಡಲಿ, ಬರೀ ಭಾಷಣದಲ್ಲಿ ತಾಕತ್ತು ಪ್ರದರ್ಶನ ಆಗೋದು ಬೇಡ. ಅವರ ಬಳಿ ಆಧಾರ ಇದ್ರೆ ರಾಜ್ಯದ ಜನರ ಬಳಿ ಬಹಿರಂಗ ಪಡಿಸಲಿ. ಇವರ ಈ ಬೆದರಿಕೆಗೆ ಎದರುವಂತಹ ವ್ಯಕ್ತಿತ್ವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಗೆ ಇಲ್ಲ ಎಂದು ಅಶ್ವಥ್ ನಾರಾಯಣ್ ಹೇಳಿಕೆಗೆ ಟಾಂಗ್ ಕೊಟ್ಟರು.
ರಾಜಕಾಲುವೆ ಒತ್ತುವರಿ ಮಾಡಿದ್ದು ಘಟಾನುಘಟಿ ನಾಯಕರ ಕಾಲದಲ್ಲಿ ಎನ್ನುವ ಹೇಳಿಕೆಗೂ ಡಿ.ಕೆ ಸುರೇಶ್ ಮಾತನಾಡಿ, ಅಶ್ವಥ್ ನಾರಾಯಣ್ ಮೊದಲು ರಾಮನಗರವನ್ನ ಕ್ಲೀನ್ ಮಾಡಲಿ. ಅವರು ಏನ್ ಏನ್ ಕ್ಲೀನ್ ಮಾಡಿದ್ದಾರೆ ಅಂತ ನೀವೇ ನೋಡುತ್ತಿದ್ದೀರಾ?. ರೈತರ ಭೂಮಿಯನ್ನ ಕಸಿದುಕೊಂಡಿದ್ದಾರೆ. ಜಮೀನು ಕೊಡಲು ಯೋಗ್ಯತೆ ಇಲ್ಲದಿದ್ದವರು ಇವರು. ಮಾಗಡಿ ಭಾಗದ ರೈತರ ಹಾಗೂ ದಲಿತರ ಬಳಿ ಭೂಮಿ ಕಸಿಕೊಂಡಿದ್ದಾರೆ. ಆತ ನೀಚ ಪ್ರವೃತ್ತಿ ಹೊಂದಿರುವವರ ಬಗ್ಗೆ ನಾನು ಮಾತಾಡ್ಲಾ? ಮೊದಲು ಬೆಂಗಳೂರಿನ ಸ್ಯಾಂಕಿ ಟ್ಯಾಕಿ ಬಳಿ ಕ್ಲೀನ್ ಮಾಡ್ಲಿ ಅವನು ಎಂದು ಏಕವಚನದಲ್ಲೇ ಸಚಿವ ಅಶ್ವತ್ಥ್ ನಾರಾಯಾನ ವಿರುದ್ದ ವಾಗ್ದಾಳಿ ನಡೆಸಿದರು/