ಬಿಡಿಎ ಹಗರಣದಲ್ಲಿ ಬಿಎಸ್ ವೈ ವಿರುದ್ಧ ಪ್ರಕರಣ ದಾಖಲಾಗಿದೆ ಎಂದ ಮಾತ್ರಕ್ಕೆ ಕೇಂದ್ರೀಯ ಸಂಸದೀಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿ (ಸೆ.16): ಬಿಡಿಎ ಹಗರಣದಲ್ಲಿ ಬಿಎಸ್ ವೈ ವಿರುದ್ಧ ಪ್ರಕರಣ ದಾಖಲಾಗಿದೆ ಎಂದ ಮಾತ್ರಕ್ಕೆ ಕೇಂದ್ರೀಯ ಸಂಸದೀಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಅಗತ್ಯವಿಲ್ಲ ಎಂದು ಕೇಂದ್ರ ಗಣಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಸಂವಿಧಾನಾತ್ಮಕ ಹುದ್ದೆಯಲ್ಲಿ ಇಲ್ಲ. ಬಿ.ಡಿ.ಎ ಹಗರಣ ವಿಚಾರದಲ್ಲಿ ಯಡಿಯೂರಪ್ಪ ಶುದ್ದ ಹಸ್ತರಾಗಿ ಬರ್ತಾರೆ. ಯಡಿಯೂರಪ್ಪ ಯಾವುದೇ ಸಂವಿಧಾನಾತ್ಮಕ ಹುದ್ದೆಯಲ್ಲಿ ಇಲ್ಲದೇ ಇರೋದರಿಂದ ರಾಜೀನಾಮೆ ಅವಶ್ಯಕತೆ ಇಲ್ಲ ಎಂದರು. ಯಡಿಯೂರಪ್ಪ ಬಗ್ಗೆ ಯತ್ನಾಳ್ ಮಾತಾಡಿರೋದು ನನಗೆ ಗೊತ್ತಿಲ್ಲ ಎಂದ ಜೋಶಿ, ಆ ಬಗ್ಗೆ ಪ್ರತಿಕ್ರಿಯಿಸೋಕೆ ನಿರಾಕರಿಸಿದರು. ಸಿಟಿ ರವಿ ಸಿದ್ದರಾಮಯ್ಯ ಅವರ ಕುರಿತು ಕಚ್ಚೆಹರುಕ ಪದ ಬಳಕೆ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಯಾರೇ ಮಾತನಾಡುವಾಗಲೂ ಜವಬ್ದಾರಿಯಿಂದ ಮಾತನಾಡಬೇಕು. ನಮ್ಮ ಪಕ್ಷದವರೇ ಇರಲಿ, ಬೇರೆ ಪಕ್ಷದವರೇ ಇರಲಿ. ಜವಾಬ್ದಾರಿಯಿಂದ ಶಬ್ದ ಬಳಸಬೇಕು. ಸಿದ್ದರಾಮಯ್ಯ ಸಿಟಿ ರವಿ ಗೆ ಹೇಗೆ ಲೂಟಿ ರವಿ ಎಂದು ಕರೆದ್ರು.? ಅದೇ ಇದೆಲ್ಲಕ್ಕೂ ಕಾರಣವಾಯಿತು ಅಂತ ಸಿದ್ದರಾಮಯ್ಯ ವಿರುದ್ದ ಜೋಶಿ ವಾಗ್ದಾಳಿ ನಡೆಸಿದರು. ಲೂಟಿ ರವಿ ಅಂತಾ ಕರೆಯೋದಕ್ಕೆ ಏನ್ ಆಧಾರ ಇದೆ ಎಂದ ಜೋಶಿ, ಯತ್ನಾಳ್ ಕುರಿತು ಮಾತಾಡದೆ ಎದ್ದು ಹೋದರು.
ಮೋದಿ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಪಾಕ್ಷಿಕ..!!
ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಸೇವಾ ಪಾಕ್ಷಿಕ ಆಚರಿಸಲು ರಾಷ್ಟ್ರೀಯ ಅಧ್ಯಕ್ಷರು ಕರೆ ನೀಡಿದ್ದಾರೆ. ಅದರಂತೆ 18 ರಂದು ಅತಿದೊಡ್ಡ ಉಚಿತ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ. 50-60 ತಜ್ಞ ವೈದ್ಯರು ತಪಾಸಣೆ ನಡೆಸಲಿದ್ದಾರೆ. ಶಸ್ತ್ರ ಚಿಕಿತ್ಸೆ ಸೇರಿದಂತೆ ಸಂಪೂರ್ಣ ವೈದ್ಯಕೀಯ ಸೇವೆ ನೀಡಲಿದ್ದಾರೆ.
undefined
ಕೊಲ್ಹಾಪುರದಿಂದ ಮೆಮೋಗ್ರಾಫಿ ಮಷಿನ್ ತರಲಾಗುತ್ತಿದೆ. ಬೃಹತ್ ಶಿಬಿರಕ್ಕೆ- ಡಾ. ಕ್ರಾಂತಿ ಕಿರಣ್, ಡಾ. ಮಹೇಶ್ ನಾಲವಾಡ್ ಇದರ ನೇತೃತ್ವದ ವಹಿಸಲಾಗಿದೆ. ಇದರ ಜೊತೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮೋದಿಯವರ ಸಂದೇಶವನ್ನು ಸೇವೆಯ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ. ಕ್ಷಯರೋಗ ಮುಕ್ತ ಭಾರತ ನಿರ್ಮಾಣ ಗುರಿ ಹಾಕಿಕೊಳ್ಳಲಾಗಿದೆ. ಭಾರತ ಐದನೇ ಅತಿದೊಡ್ಡ ಅರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಜೋಶಿ ತಿಳಿಸಿದ್ದಾರೆ.
ಸಚಿವ ಆರಗ ಜ್ಞಾನೇಂದ್ರ ಬಿಡಿಎ ಸೈಟ್ ವಾಪಸ್, ಕೋರ್ಟಿಗೆ ಹೋಗುವೆ ಎಂದ ಸಚಿವರು
ಅತಿವೃಷ್ಟಿ ಹಾನಿಗೆ ಕೇಂದ್ರದ ತಕ್ಷಣ ಸ್ಪಂದನೆ..!
ಅತಿವೃಷ್ಟಿಯಿಂದ ತೀವ್ರ ಹಾನಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಪ್ರವಾಹದ ಅಡಿ ಪರಿಹಾರ ಕೊಡಲಾಗುತ್ತಿದೆ. ಹಾನಿಯ ತಕ್ಷಣವೇ ಕೇಂದ್ರ ಅಧ್ಯಯನ ತಂಡವನ್ನು ಕಳುಹಿಸಿಕೊಟ್ಟಿತ್ತು. ಕೇಂದ್ರ ತಂಡದ ವರದಿಯ ನಂತರ ಪರಹಾರಕ್ಕೂ ಕ್ರಮ ಕೈಗೊಳ್ಳುತ್ತಿದೆ. ಎನ್.ಡಿ.ಆರ್.ಎಫ್. ಅಡಿ ರೈತರಿಗೆ ಪರಿಹಾರ ಕೊಡಲಾಗುತ್ತದೆ.
BDA ಬ್ರಹ್ಮಾಂಡ ಭ್ರಷ್ಟಾಚಾರ ಬಯಲು: 300 ಅಲ್ಲ, 1,500 ಕೋಟಿ ಅಕ್ರಮ ಪತ್ತೆ!
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಲೋಕಲ್ ಕ್ಯಾಲಮಿಟಿ ತೆಗೆದುಕೊಳ್ಳಲು ಕೆಲ ತೊಡಕುಗಳಿದ್ದವು. ಆ ತೊಡಕುಗಳನ್ನು ನಾವು ನಿವಾರಿಸಿದ್ದೇವೆ. ಲೋಕಲ್ ಕ್ಯಾಲಮಿಟಿಯಲ್ಲಿ ಈ ಭಾಗದ ಶೇಂಗಾ, ಹತ್ತಿ, ಮೆಣಸಿನಕಾಯಿ, ಮೆಕ್ಕೆಜೋಳ, ಸೋಯಾಬಿನ್ ಮತ್ತಿತರ ಬೆಳೆಗಳನ್ನು ಪರಿಹಾರದ ವ್ಯಾಪ್ತಿಗೆ ತರಲಾಗಿದೆ. ಇದಕ್ಕೆ ಪರಿಹಾರ ನೀಡುವಂತೆ ಈಗಾಗಲೇ ಕೇಂದ್ರ ಸರ್ಕಾರ ಆದೇಶಿಸಿದೆ. ಇತರೆ ಬೆಳೆ ಹಾನಿಗೂ ಪರಿಹಾರ ನೀಡಲಾಗುತ್ತದೆ. ನೆರೆ ಸಂಕಷ್ಟಕ್ಕೆ ಕೇಂದ್ರ ತುರ್ತಾಗಿ ಸ್ಪಂದಿಸಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.