PayCM Posters: ರಾತ್ರೋರಾತ್ರಿ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಎಂಎಲ್‌ಸಿ ಪುತ್ರ

By Ravi JanekalFirst Published Sep 24, 2022, 11:20 AM IST
Highlights

ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಕಾಂಗ್ರೆಸ್ ನ payCM ಅಭಿಯಾನ ಇದೀಗ ದಕ್ಷಿಣ ಕನ್ನಡ ಜಿಲ್ಲೆಗೂ ಕಾಲಿಟ್ಟಿದ್ದು, ಬೆಳ್ತಂಗಡಿ ತಾಲೂಕಿನ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು payCM ಸ್ಟಿಕ್ಕರ್ ಅಂಟಿಸಿ 40% ಸರ್ಕಾರ ಅಂತ ಅಭಿಯಾನ ಶುರು ಮಾಡಿದ್ದಾರೆ.

ಮಂಗಳೂರು (ಸೆ.24): ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಕಾಂಗ್ರೆಸ್ ನ payCM ಅಭಿಯಾನ ಇದೀಗ ದಕ್ಷಿಣ ಕನ್ನಡ ಜಿಲ್ಲೆಗೂ ಕಾಲಿಟ್ಟಿದ್ದು, ಬೆಳ್ತಂಗಡಿ ತಾಲೂಕಿನ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು payCM ಸ್ಟಿಕ್ಕರ್ ಅಂಟಿಸಿ 40% ಸರ್ಕಾರ ಅಂತ ಅಭಿಯಾನ ಶುರು ಮಾಡಿದ್ದಾರೆ.

PayCM Posters: ಬಿಜೆಪಿಗೆ ಸವಾಲ್ ಹಾಕಿ ಸಿದ್ದರಾಮಯ್ಯ ಸರಣಿ ಟ್ವೀಟ್

ದ.ಕ ಜಿಲ್ಲೆಯ ಬೆಳ್ತಂಗಡಿ(Belthangady) ತಾಲೂಕಿನ ಹಲವಡೆ ಸ್ವತಃ ಕಾಂಗ್ರೆಸ್(Congress) ಎಂಎಲ್‌ಸಿ ಹರೀಶ್ ಕುಮಾರ್(MLC Harish Kumar) ಪುತ್ರನೇ ಸ್ಟಿಕ್ಕರ್(Sticker) ಅಂಟಿಸಿದ್ದಾರೆ‌‌. ಬೆಳ್ತಂಗಡಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಸೇರಿಸಿ ಹರೀಶ್ ಕುಮಾರ್ ಪುತ್ರ ಅಭಿನಂದನ್(Abhinandan) ತಾಲೂಕಿನ ಪ್ರಮುಖ ಜಾಗಗಳಲ್ಲಿ ಕ್ಯೂಆರ್ ಕೋಡ್(QR code) ಇರೋ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಭಾವಚಿತ್ರದ ಸ್ಟಿಕ್ಕರ್ ಅಂಟಿಸಿದ್ದಾರೆ‌‌. ಬೆಳ್ತಂಗಡಿ ಬಸ್ ನಿಲ್ದಾಣ, ಅಂಗಡಿಗಳು ಹಾಗೂ ಸರ್ಕಾರಿ ಬಸ್ಸುಗಳಿಗೂ payCM ಸ್ಟಿಕ್ಕರ್ ಅಂಟಿಸಿದ್ದು, ಬೆಳ್ತಂಗಡಿ ತಾಲೂಕಿನ ಹಲವಡೆ ರಾತ್ರೋರಾತ್ರಿ ಸ್ಟಿಕ್ಕರ್ ಪ್ರಮುಖ ಸ್ಥಳಗಳಲ್ಲಿಅಂಟಿಸಲಾಗಿದೆ.

ಏನಿದು ಪೇಸಿಎಂ? : ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ಅಭಿಯಾನವಾಗಿದೆ. ಪೇಸಿಎಂ ಸ್ಟಿಕರ್ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವ ಮೂಲಕ ಸರ್ಕಾರದ ಭ್ರಷ್ಟಾಚಾರ, ಹಗರಣಗಳನ್ನು ಜನತೆಗೆ ತಿಳಿಸುವ ಅಭಿಯಾನವಾಗಿದೆ. ಇತ್ತೀಚೆಗೆ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ, 40% ಕಮಿಷನ್ ಪಡೆಯುತ್ತಿದೆ ಎಂದು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಸದನದಲ್ಲಿ ಆಕ್ರೋಶವ್ಯಕ್ತಪಡಿಸಿದ್ದವು.

Pay CM Posters: ಕಾಂಗ್ರೆಸ್‌, ಬಿಜೆಪಿ ಪೋಸ್ಟರ್‌ ಫೈಟ್‌: ಪೇ ಸಿಎಂಗೆ ಕಮಲ ಪಡೆ ಕೌಂಟರ್

ಅದರ ಮುಂದುವರಿದ ಭಾಗವಾಗಿ ಇದೀಗ ಪೇಸಿಎಂ ಪೋಸ್ಟರ್ ಅಂಟಿಸಲಾಗುತ್ತಿದೆ. ಮೊದಲಿಗೆ ಬೆಂಗಳೂರಿನಲ್ಲಿ ಕೆಲವಡೆ ರಾತ್ರೋರಾತ್ರಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸದಸ್ಯರು ಸಿಎಂ ಭಾವಚಿತ್ರವಿರುವ ಸ್ಟಿಕರ್ ಅಂಟಿಸಿದ್ದರು. ಇದು ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಇದೀಗ ಎಲ್ಲ ಜಿಲ್ಲೆಗಳಿಗೂ ಹರಡಿದೆ. ಅಂತೆಯೇ ದಕ್ಷಿಣ ಕನ್ನಡದಲ್ಲೂ ಸರ್ಕಾರದ ವಿರುದ್ಧ ಪೇಸಿಎಂ ಪೋಸ್ಟರ್ ಅಂಟಿಸಲಾಗಿದೆ. 

click me!