ರೈತ ವಿರೋಧಿಗಳನ್ನು ಅನುಸರಿಸಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಸೆ.08): ರೈತ ವಿರೋಧಿಗಳನ್ನು ಅನುಸರಿಸಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಮಡಿಕೇರಿ ತಾಲ್ಲೂಕು ಕಚೇರಿ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ರೈತರಿಗೆ ಕೊಡಲಾಗುತ್ತಿದ್ದ ರೈತ ಪ್ರೋತ್ಸಾಹ ನಿಧಿ ಮತ್ತು ಅವರ ಮಕ್ಕಳಿಗೆ ಕೊಡಲಾಗುತ್ತಿದ್ದ ವಿದ್ಯಾಸಿರಿ ಯೋಜನೆಗಳನ್ನು ರದ್ದು ಮಾಡಿ ರೈತರ ವಿರೋಧಿ ನೀತಿಗಳನ್ನು ಅನುಸರಿಲಾಗುತ್ತಿದೆ ಎಂದು ಘೋಷಣೆ ಕೂಗಿದರು. ತಹಶೀಲ್ದಾರ್ ಕಚೇರಿ ಎದುರು ಒಂದು ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಬಳಿಕ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಮಡಿಕೇರಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಕಾಂಗ್ರೆಸ್ ಸರ್ಕಾರ ಎಂದರೆ ಅದೊಂದು ಶನಿಗೆಟ್ಟ ಸರ್ಕಾರ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ದೊಡ್ಡ ಪ್ರಮಾಣದಲ್ಲಿ ಬರಗಾಲ ಬರುತ್ತದೆ. ಜನರಿಗೆ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಹೇಳುತ್ತಾ ಒಬ್ಬರ ವಿದ್ಯುತ್ ಅನ್ನು ಕಿತ್ತು ಬೇರೆಯವರಿಗೆ ಹಂಚುತ್ತಿದ್ದಾರೆ. ಜೊತೆಗೆ 200 ಯುನಿಟ್ ಉಚಿತವಾಗಿ ಕೊಡುತ್ತೇವೆ ಎಂದವರು ಈಗ ಸರಾಸರಿ ವಿದ್ಯುತ್ ಅನ್ನು ಪರಿಗಣಿಸಲಾಗುವುದು ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಜನರಿಗೆ ನಿರಂತರವಾಗಿ ಮೋಸ ಮಾಡುತ್ತಿದೆ ಎಂದಿದ್ದಾರೆ. ವಿರಾಜಪೇಟೆ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಕಾಂಗ್ರೆಸ್ ತಾನುನೂರು ದಿನಗಳ ಅಧಿಕಾರದಲ್ಲಿ ತಾವು ನೀಡಿದ ಭರವಸೆ ಈಡೇರಿಸುತ್ತಿದ್ದೇವೆ ಎನ್ನುತ್ತಿದ್ದಾರೆ.
ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುವ ಬಗ್ಗೆ ಶೆಟ್ಟರ್ ಮಾಡಿರುವ ಆರೋಪ ಸುಳ್ಳು: ಕೆ.ಎಸ್.ಈಶ್ವರಪ್ಪ
ಆದರೆ ಜನರಿಗೆ ಇವರ ಅಧಿಕಾರ ಸಾಕು ಸಾಕಾಗಿ ಹೋಗಿದೆ. ವಿದ್ಯುತ್ ಬಿಲ್ಲನ್ನು ಸಿಕ್ಕಾಪಟ್ಟೆ ಹೆಚ್ಚಳ ಮಾಡಿ ಜನರಿಗೆ ಬರೆ ಹಾಕುತ್ತಿದ್ದಾರೆ. ಇವರದು ವರ್ಗಾವಣೆ ದಂಧೆ ಬಿಟ್ಟರೆ ಬೇರೆ ಏನೂ ಸಾಧನೆ ಇಲ್ಲ. ಕಾಡು ಪ್ರಾಣಿಗಳ ನಿಯಂತ್ರಕ್ಕೂ ಆಗದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ಕೇಂದ್ರವೇ ಮಾಡುವುದಾದರೆ ಇವರು ಯಾಕೆ ಇದ್ದಾರೆ. ಮನೆಗೆ ಹೋಗಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ ಎನ್ನುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅಪ್ಪಚ್ಚು ರಂಜನ್ ಅವರು ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ.
ಹಾಗೆ, ಹೀಗೆ ಎಂದು ಹೇಳುತ್ತಿರುವ ಡಿಸಿಎಂ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯನವರ ಪರಿಸ್ಥಿತಿಗಳು ಒಂದು ವರ್ಷದಲ್ಲಿ ಹೇಗಿರುತ್ತೇ ಎನ್ನುವುದು ಗೊತ್ತಾಗುತ್ತದೆ ಎಂದು ಮಡಿಕೇರಿ ಬಿಜೆಪಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ವ್ಯಂಗ್ಯವಾಡಿದ್ದಾರೆ. ಬಿಜೆಪಿಯ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದು ರಾಯರೆಡ್ಡಿ, ಪಾಟೀಲ್ ಇವರೆಲ್ಲಾ ಹೇಳುತ್ತಿದ್ದಾರೆ. ಆದರೆ ಬಿಜೆಪಿಯ ಯಾವ ಶಾಸಕರು, ಮಾಜಿ ಶಾಸಕರು ಕಾಂಗ್ರೆಸ್ಗೆ ಹೋಗುವುದಿಲ್ಲ. ನಾವೆಲ್ಲರೂ ಸ್ಥಿರವಾಗಿಯೇ ಇದ್ದೇವೆ. ಆದರೆ ಕಾಂಗ್ರೆಸ್ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ ನೋಡೋಣ ಎಂದು ಹೇಳಿದ್ದಾರೆ. ಪ್ರೆಸಿಡೆಂಟ್ ಆಫ್ ಭಾರತ್ ಎಂದು ನಾಮಕಾರಣ ಮಾಡುತ್ತಿರುವುದಕ್ಕೆ ವಿರೋಧ ಪಕ್ಷಗಳ ವಿರೋಧಕ್ಕೆ ಪ್ರತಿಕ್ರಿಯಿಸಿದ ಕೆ.ಜಿ. ಬೋಪಯ್ಯ I N D I A ಎಂದು ಮಾಡಿಕೊಂಡಿರುವ ಕೂಟ ಇದೊಂದು ದೇಶ ದ್ರೋಹಿ ಕೂಟ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉದಯನಿಧಿ ಸ್ಟಾಲಿನ್ ಸನಾತನ ಹೇಳಿಕೆಯನ್ನು ಕಾಂಗ್ರೆಸ್ ಯಾಕೆ ಖಂಡಿಸಿಲ್ಲ: ಪ್ರಲ್ಹಾದ್ ಜೋಶಿ
I N D I A ಎಂದು ಹೆಸರು ಇಟ್ಟುಕೊಂಡಿದ್ದಾರೆ. ಆದರೆ I N D I A ಎನ್ನುವುದು ಒಂದೇ ಪದವಲ್ಲ. ಪ್ರತೀ ಅಕ್ಷರದ ಮುಂದೆ ಫುಲ್ ಸ್ಟಾಫ್ ಇಟ್ಟುಕೊಂಡಿದ್ದಾರಲ್ಲ, ಅದರ ಅರ್ಥವೇನು ಎಂದು ಅವರೇ ಉತ್ತರ ಹೇಳಬೇಕು. ದೇಶಾಭಿಮಾನವನ್ನು ತೋರಿಸಲಾರದ ಕೂಟದಿಂದ ಮುಂದೆ ದೇಶ ಏನಾಗಬಹುದು ಎಂಬುದನ್ನು ನಾಗರಿಕರು ಯೋಚಿಸಬೇಕು ಎಂದಿದ್ದಾರೆ. ಇಂಡಿಯಾ ಭಾರತ್ ಎನ್ನುವುದನ್ನು ಅಂಬೇಡ್ಕರ್ ಅವರೇ ಮೊದಲ ಆರ್ಟಿಕಲ್ ನಲ್ಲಿ ಇಂಡಿಯಾ ದಟ್ ಈಸ್ ಭಾರತ್ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇಂಡಿಯಾ ಪದವನ್ನು ಹಿಂದಿ ಅಥವಾ ಕನ್ನಡದಲ್ಲಿ ಭಾರತ್ ಎಂದೇ ಕರೆಯುತ್ತೇವೆ ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ಹೇಳಿದ್ದಾರೆ.