* ಕೊರೋನಾ ಗೆದ್ದಿದ್ದ ಕಾಂಗ್ರೆಸ್ ಮುಖಂಡ ಬ್ಲಾಕ್ ಫಂಗಸ್ಗೆ ಬಲಿ
* ಬ್ಲಾಕ್ ಫಂಗಸ್ಗೆ ಬಲಿಯಾದ ಮುಧೋಳ ತಾಲೂಕಿನ ಲೋಕಾಪುರ ಕ್ಷೇತ್ರದ ಜಿಪಂ ಮಾಜಿ ಸದಸ್ಯ
* ಈ ಮೊದಲ ಅವರಿಗೆ ಕೊರೋನಾ ಪಾಸಿಟಿವ್ ಆಗಿತ್ತು
ಬಾಗಲಕೋಟೆ, (ಜೂನ್.02): ಕೊರೋನಾ ವಿರುದ್ಧ ಹೋರಾಡಿ ಗೆದ್ದು ಬಂದವರಿಗೆ ಬ್ಲ್ಯಾಕ್ ಫಂಗಸ್ ಮಹಾಮಾರಿಯಾಗಿ ಕಾಡುತ್ತಿದೆ.
ಹೌದು...ಕೊರೋನಾ ವಿರುದ್ಧ ಗೆದ್ದಿದ್ದ ಕಾಂಗ್ರೆಸ್ ಮುಖಂಡರೊಬ್ಬರು ಬ್ಲಾಕ್ ಫಂಗಸ್ಗೆ ಬಲಿಯಾಗಿದ್ದಾರೆ. ಬಾಗಲಕೋಟೆಯ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಕ್ಷೇತ್ರದ ಜಿಪಂ ಮಾಜಿ ಸದಸ್ಯರಾಗಿದ್ದ ಮಾಂತೇಶ್ ಉದಪುಡಿ ಎನ್ನುವರನ್ನ ಬ್ಲ್ಯಾಕ್ ಫಂಗಸ್ ಬಲಿಪಡೆದಿದೆ.
ರಾಜ್ಯದಲ್ಲಿ 50ರ ಗಡಿ ದಾಟಿದ ಬ್ಲಾಕ್ ಫಂಗಸ್ ಸಾವು
ಮಾಂತೇಶ್ ಕಳೆದ 90 ದಿನಗಳಿಂದ ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು (ಬುಧವಾರ) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಮೊದಲು ಅವರಿಗೆ ಕೊರೋನಾ ಕಾಣಿಸಿಕೊಂಡಿತ್ತು. ತಕ್ಷಣವೇ ಮುಧೋಳ ನಗರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ತದನಂತರ ಬ್ಲ್ಯಾಕ್ ಫಂಗಸ್ನಿಂದ ಕಣ್ಣಿಗೆ ತೀವ್ರ ಗಾಯವಾಗಿತ್ತು. ಹೀಗಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.