* ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ ಮಾಜಿ ಶಿಷ್ಯ
* ಎಚ್‌ಡಿಕೆ ಅಧಿಕಾರಕ್ಕಾಗಿ ಯಾರ್ ಕಾಲು ಬೇಕಾದ್ರೂ ಹಿಡಿತಾರೆ ಎಂದ ಕಾಂಗ್ರೆಸ್ ಶಾಸಕ
*ದೇವೇಗೌಡರು ಹಾಗಲ್ಲ, ಅವರು ಸೆಕ್ಯೂಲರ್ ಸಿದ್ಧಾಂತದವರು ಎಂದ ಜಮೀರ್
ಬೆಂಗಳೂರು, (ಜೂನ್.09): ಶಾಸಕ ಜಮೀರ್ ಅಹ್ಮದ್ ಖಾನ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ಕುಮಾರಸ್ವಾಮಿ ಲಾಭ ಇದೆ ಅಂದ್ರೆ ಸಾಕು ಪಲ್ಟಿ ಹೊಡೆಯುತ್ತಾರೆ. ದೇವೇಗೌಡರು ಹಾಗಲ್ಲ, ಅವರು ಸೆಕ್ಯೂಲರ್ ಸಿದ್ಧಾಂತದವರು. ಕುಮಾರಸ್ವಾಮಿಗೆ ಯಾವ ಸಿದ್ಧಾಂತವೂ ಇಲ್ಲ. ಹಣ, ಅಧಿಕಾರ ಸಿಕ್ಕರೆ ಎಲ್ಲಿಗೆ ಬೇಕಾದ್ರೂ ಹೋಗ್ತಾರೆ. ಅಧಿಕಾರಕ್ಕಾಗಿ ಯಾರ ಕಾಲು ಬೇಕಾದ್ರೂ ಹಿಡಿಯುತ್ತಾರೆ ಎಂದು ಕಿಡಿಕಾರಿದರು.
ರಾಜ್ಯ ಸಂದಿಗ್ಧತೆಗೆ ಸಿಲುಕಿರುವ ಈ ಹೊತ್ತಿನಲ್ಲಿ ಇದೆಂಥ ರಾಜಕೀಯ? ಎಚ್‌ಡಿಕೆ ಕ್ಲಾಸ್
ಪದೇ ಪದೇ ಸಿಎಂ ಹತ್ತಿರ ಕುಮಾರಸ್ವಾಮಿ ಯಾಕೆ ಹೋಗಬೇಕು? ಕುಮಾರಸ್ವಾಮಿ ಪಲ್ಟಿ ಗಿರಾಕಿ. ಯಾವಾಗ ಎಲ್ಲಿ ಬೇಕಾದ್ರೂ ಪಲ್ಟಿ ಹೊಡೆಯುತ್ತಾರೆ. ಕುಮಾರಸ್ವಾಮಿಗೆ ದುಡ್ಡು ಅಧಿಕಾರ ಎರಡೇ ಬೇಕಾಗಿರೋದು ಎಂದು ಎಡಿಕೆ ವಿರುದ್ಧ ಜಮೀರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಇದೇ ವೇಳೆ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ ಜಮೀರ್, ರಾಜ್ಯದಲ್ಲಿ ಬಿಜೆಪಿ ನೆಲ ಕಚ್ಚಿತ್ತು. ಅದು ಮೇಲೆಳೆಲು ಕುಮಾರಸ್ವಾಮಿಯವರೇ ಸಹಾಯ ಮಾಡಿದ್ದು. 20/20 ಅಧಿಕಾರ ಕೊಡಬೇಕಿತ್ತು. ಬಿಜೆಪಿಯವರಿಗೆ ಕೊಡಿ ಅಂತ ಹೇಳಿದ್ದೆ. ಕೊಟ್ಟಿದ್ದರೆ ಅವತ್ತೇ ಅವರು ಕಿತ್ತಾಡಿಕೊಂಡು ಹೋಗ್ತಿದ್ರು. ಆಗ ಮಾಡಿದ ತಪ್ಪಿಗೆ ಈಗ ಅಧಿಕಾರ ಹಿಡಿದಿದ್ದಾರೆ.ಸಿ.ಟಿ ರವಿಯರು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.
ಜನ ಇವತ್ತು ಶಾಪ ಹಾಕ್ತಿದ್ದಾರೆ. ಸರ್ಕಾರಕ್ಕೆ ಥೂ ಛೀ ಅಂತ ಛಿಮಾರಿ ಹಾಕುತ್ತಿದ್ದಾರೆ. ನಾವಿದ್ದರೆ ಸಹಾಯ ಹಸ್ತ ಚಾಚುತ್ತಿದ್ದೆವು. ಬಿಜೆಪಿಗೆ ಜನ ಬಹುಮತ ಕೊಟ್ಟಿಲ್ಲ. ಆಪರೇಷನ್ ಕಮಲ ಮಾಡಿ ಬಂದವರು ಎಂದು ಹೇಳಿದರು.