ಎಚ್‌ಡಿಕೆ ಆಪ್ತ ಸಹಾಯಕ ಆಯ್ತು, ಇದೀಗ ಮತ್ತೋರ್ವ ಶಾಸಕನ ಗನ್‍ಮ್ಯಾನ್‍ಗೂ ಕೊರೋನಾ

By Suvarna News  |  First Published Jul 8, 2020, 9:23 PM IST

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಪ್ತ ಸಹಾಯಕನಿಗೆ ಕೊರೋನಾ ಬೆನ್ನಲ್ಲೇ ಇದೀಗ ಶಾಸಕ ಯುಟಿ ಖಾದರ್ ಗನ್‌ಮ್ಯಾನ್‌ಗೂ ಕೊರೋನಾ ಅಟ್ಯಾಕ್ ಆಗಿದೆ.


ಮಂಗಳೂರು, (ಜುಲೈ.08):  ಉಳ್ಳಾಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಅವರ ಗನ್‍ಮ್ಯಾನ್‍ಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 

ಯು.ಟಿ ಖಾದರ್ ಅವರಿಗೆ ಗನ್‍ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರು ಡಿಎಆರ್ ಪೊಲೀಸ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. 

Tap to resize

Latest Videos

undefined

ಕೊರೋನಾ ವೈರಸ್‌ಗೆ ತುತ್ತಾದ ಕರ್ನಾಟಕದ ಪ್ರಮುಖ ರಾಜಕಾರಣಿಗಳಿವರು....

ಕೊರೋನಾ ಸೋಂಕಿತ ಗನ್‍ಮ್ಯಾನ್, ಖಾದರ್ ಬೆಂಗಾವಲು ವಾಹನದಲ್ಲಿದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದರಿಂದ ಆತಂಕಗೊಂಡಿದ್ದ ಶಾಸಕ ಖಾದರ್, ಕೊರೋನಾ ಪರೀಕ್ಷೆ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿದೆ. ಇದರಿಂದ ಅವರು ನಿಟ್ಟುಸಿರು ಬಿಟ್ಟಿದ್ದಾರೆ.

  ಆದರೆ ಕಳೆದ ಹತ್ತು ದಿನದ ಹಿಂದೆ ಅನಾರೋಗ್ಯ ಎಂದು ಮನೆಯಲ್ಲಿದ್ದ ಪೊಲೀಸ್ ಪೇದೆಗೆ ಕೊರೋನಾ ಟೆಸ್ಟ್ ಮಾಡಿಸಲಾಗಿತ್ತು. ಇಂದು (ಬುಧವಾರ) ಬಂದ ವರದಿಯಲ್ಲಿ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಆತನ ಜೊತೆ ಕಾರ್ಯನಿರ್ವಹಿಸುತ್ತಿದ್ದ ಉಳಿದ ಮೂವರು ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ.

ಮಾಜಿ ಸಿಎಂ ಆಪ್ತ ಸಹಾಯಕನಿಗೆ ಕೊರೋನಾ: ಎಚ್‌ಡಿಕೆ ಜತೆ ಚಿಕ್ಕಮಗಳೂರಿಗೆ ಹೋಗಿದ್ದ ಪಿಎ

ಇನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಆಪ್ತ ಸಹಾಯಕನಿಗೂ ಕೊರೋನಾ ಸೋಂಕು ತಗುಲಿದೆ. ಆದ್ರೆ, ಎಚ್‌ಡಿಕೆ ಕೊರೋನಾ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ.

ಆದರೂ ಅವರ ಕುಟುಂಬದವರಿಗೆ ಆತಂಕ ಎದುರಾಗಿದ್ದು, ಮನೆಯವರೆಲ್ಲರನ್ನೂ ಕೊರೋನಾ ಟೆಸ್ಟ್‌ಗೆ ಒಳಪಡಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ.

click me!