ಬಿಜೆಪಿ ಯಾವಾಗಲೂ ನಮ್ಮಂತಹವರನ್ನು ಇಟ್ಟುಕೊಂಡೇ ಅಧಿಕಾರಕ್ಕೆ ಬಂದಿದೆ. ಅಲ್ಲಿನ ಬಂಡವಾಳ ನನಗೆ ಗೊತ್ತಿದೆ. ನಾನು ಬಾಯಿ ಬಿಟ್ಟರೆ ಬಿಜೆಪಿಯ ಸದಸ್ಯರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್‌ನ ಪುಟ್ಟಣ್ಣ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ (ಜು.19): ಬಿಜೆಪಿ ಯಾವಾಗಲೂ ನಮ್ಮಂತಹವರನ್ನು ಇಟ್ಟುಕೊಂಡೇ ಅಧಿಕಾರಕ್ಕೆ ಬಂದಿದೆ. ಅಲ್ಲಿನ ಬಂಡವಾಳ ನನಗೆ ಗೊತ್ತಿದೆ. ನಾನು ಬಾಯಿ ಬಿಟ್ಟರೆ ಬಿಜೆಪಿಯ ಸದಸ್ಯರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್‌ನ ಪುಟ್ಟಣ್ಣ ಆಕ್ರೋಶ ವ್ಯಕ್ತಪಡಿಸಿದರು. ವಾಲ್ಮೀಕಿ ನಿಗಮ ಅಕ್ರಮದ ಚರ್ಚೆ ವೇಳೆ ಬಿಜೆಪಿ ಸದಸ್ಯರ ಆರೋಪಕ್ಕೆ ಪ್ರತಿಯಾಗಿ ಮಾತನಾಡುತ್ತಿದ್ದ ಪುಟ್ಟಣ್ಣ ಅವರನ್ನು ಉದ್ದೇಶಿಸಿ ಬಿಜೆಪಿಯ ರವಿಕುಮಾರ್, ನೀವು ಎಷ್ಟೇ ಮಾತನಾಡಿದರೂ ಸಚಿವರಾಗುವುದಿಲ್ಲ ಎಂದರು. ಅದರಿಂದ ಮತ್ತಷ್ಟು ಸಿಟ್ಟಾದ ಪುಟ್ಟಣ್ಣ, ಬಿಜೆಪಿಯಲ್ಲಿನ ಪರಿಸ್ಥಿತಿಯೂ ನನಗೆ ಗೊತ್ತಿದೆ. ಅಲ್ಲಿರಲಾಗದೆಯೇ ನಾನು ಕಾಂಗ್ರೆಸ್‌ಗೆ ಬಂದಿದ್ದೇನೆ.
ನಾನು ಬಿಜೆಪಿಯಲ್ಲಿ ನೋಡಿದ್ದೆಲ್ಲವನ್ನೂ ಹೇಳಿದರೆ ನೀವ್ಯಾರೂ ಇಲ್ಲಿರುವುದಿಲ್ಲ. ನಾನು ಬಾಯಿ ಬಿಟ್ಟರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದರು. ಬಿಜೆಪಿ ಯಾವತ್ತೂ ಸ್ವಂತವಾಗಿ ಅಧಿಕಾರಕ್ಕೆ ಬಂದಿಲ್ಲ. ನಮ್ಮಂತಹವರನ್ನು ಇಟ್ಟುಕೊಂಡೇ ಅಧಿಕಾರಕ್ಕೆ ಬಂದಿದ್ದು. ಇನ್ನುಮುಂದೆ ನೀವು ಅಧಿಕಾರಕ್ಕೆ ಬರುವುದಿಲ್ಲ ಬಿಡಿ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಭಾರತಿ ಶೆಟ್ಟಿ, ಎಲ್ಲ ಪಕ್ಷಗಳು ನಿಮ್ಮ ಪಾಲಿಗೆ ಮುಗಿದಿವೆ. ಕಾಂಗ್ರೆಸ್‌ನಿಂದ ಬೇರೆಲ್ಲಿಗೂ ಹೋಗಲಾಗುವುದಿಲ್ಲ. ಹೀಗಾಗಿ ಮಾತನಾಡುತ್ತಿದ್ದೀರಿ ಎಂದರು. ಆಗ ಪುಟ್ಟಣ್ಣ, ನಾನು ಯಾರಿಗೂ ಬಕೆಟ್ ಹಿಡಿದು ಬಂದವನಲ್ಲ. ನನ್ನ ಸ್ವಂತ ಸಾಮರ್ಥ್ಯದಿಂದ ಬಂದವನು. ಅದನ್ನು ತಿಳಿದುಕೊಳ್ಳಿ ಎಂದು ಪ್ರತ್ಯುತ್ತರ ನೀಡಿದರು.
ಅನಾಚಾರ ಮಾಡಿ ಅಧಿಕಾರ ಕಳೆದುಕೊಂಡವರು ಬಿಜೆಪಿ, ಎಲ್ಲಾ ಹಗರಣ ಹೊರತೆಗೆಯುವೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಜಿಂದಾಲ್ ತ್ಯಾಜ್ಯ ನೀರು ಹಳ್ಳದ ಮೂಲಕ ದರೋಜಿ ಕೆರೆಗೆ: ಜಿಂದಾಲ್ ಕಾರ್ಖಾನೆಯ ರಾಸಾಯನಿಕ ನೀರು ತೋರಣಗಲ್ ಬಳಿಯ ಕಾಣಿಗನಹಳ್ಳದ ಮೂಲಕ ದರೋಜಿ ಕೆರೆಯನ್ನು ಸೇರುತ್ತಿದ್ದು, ಕೆರೆಯ ನೀರು ಮಲೀನಗೊಂಡು ಜಲಚರಗಳು ಸಾಯುತ್ತಿವೆ. ಸಾರ್ವಜನಿಕರ ಆರೋಗ್ಯದ ಮೇಲೆ ಸಹ ಮಲಿನ ನೀರು ದುಷ್ಟಪರಿಣಾಮ ಬೀರಿದ್ದು ತಕ್ಷಣವೇ ಈ ನೀರನ್ನು ತಡೆಯಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾರೆ.
ವಿಧಾನಪರಿಷತ್‍ನಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಜಿಂದಾಲ್‌ನ ಕಾರ್ಖಾನೆಯ ಮಲೀನ ನೀರಿನಿಂದಾಗುತ್ತಿರುವ ಸಮಸ್ಯೆಗಳ ಕುರಿತು ಧ್ವನಿ ಎತ್ತಿದರು. ಇದಕ್ಕೆ ಉತ್ತರಿಸಿದ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಅವರು, ಜಿಂದಾಲ್ ಕಂಪನಿಯು ರಸಾಯನಿಕ ಮಿಶ್ರಿತ (ಕೆಮಿಕಲ್ ಮಿಶ್ರಿತ) ನೀರನ್ನು ಸಂಸ್ಕರಿಸದೇ ಕಾಣಿಗನ ಹಳ್ಳದ ಮೂಲಕ ದರೋಜಿ ಕೆರೆಗೆ ಬಿಡುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಈ ಕುರಿತು ಸರ್ಕಾರ ತಕ್ಷಣವೇ ಕ್ರಮಕೈಗೊಳ್ಳಲು ನೋಟಿಸ್ ಜಾರಿ ಮಾಡಿತ್ತಲ್ಲದೆ, ಕ್ರಮಕೈಗೊಳ್ಳಲು ಸಹ ಆದೇಶ ನೀಡಲಾಗಿತ್ತು.
ಚನ್ನಪಟ್ಟಣದ ಎನ್‌ಡಿಎ ಮೈತ್ರಿಯಲ್ಲಿ ಒಡಕು: ಉಪಚುನಾವಣೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ
ನೋಟೀಸ್‍ಗೆ ಸ್ಪಂದಿಸಿರುವ ಜಿಂದಾಲ್ ಕಂಪನಿಯು 9 ಸಾವಿರ ಕ್ಯೂಬಿಕ್ ಮೀಟರ್ ಪ್ರಮಾಣದ ನೀರು ಸಂಸ್ಕರಣಾ ಘಟಕವನ್ನು ಅಳವಡಿಸಿಕೊಂಡಿದೆ. ಅಲ್ಲದೇ, ರಸಾಯನಿಕಯುಕ್ತ ನೀರನ್ನು ಕಾಣಿಗಹಳ್ಳದ ಮೂಲಕ ಹರಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ದರೋಜಿ ಕೆರೆ ಮತ್ತು ಕಾಣಿಗನಹಳ್ಳದಲ್ಲಿ ಹರಿಯುವ ನೀರನ್ನು ಪ್ರತೀ ಮೂರು ತಿಂಗಳಿಗೊಮ್ಮೆ ಪರೀಕ್ಷಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.