ಅಧಿವೇಶನಗೂ ಮುನ್ನವೇ ಶಾಸಕ ಪ್ರಿಯಾಂಕ್ ಖರ್ಗೆಗೆ ಕೊರೋನಾ

By Suvarna News  |  First Published Sep 19, 2020, 10:31 PM IST

ದೇಶ ಮಾತ್ರವಲ್ಲದೆ ರಾಜ್ಯ ರಾಜಕಾರಣಕ್ಕೂ ಕರೊನಾ ಬಿಸಿ ತಟ್ಟಿದ್ದು, ಒಬ್ಬರಾದ ಮೇಲೊಬ್ಬರಂತೆ ರಾಜಕಾರಣಿಗಳೂ ಸೋಂಕಿತರಾಗುತ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ.


ಬೆಂಗಳೂರು, (ಸೆ.19): ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಕೊರೋನಾ ಸೋಂಕು ತಗುಲಿರುವುದು ಧೃಡವಾಗಿದೆ. ಈ ಬಗ್ಗೆ  ಪ್ರಿಯಾಂಕ್ ಖರ್ಗೆ ಅವರೇ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ನಾನು ಕರೊನಾ ಪರೀಕ್ಷೆಗೆ ಒಳಗಾಗಿದ್ದು, ಕೋವಿಡ್​-19 ಟೆಸ್ಟ್ ವರದಿ ಇವತ್ತು ಪಾಸಿಟಿವ್ ಬಂದಿರುವುದರಿಂದ ಸೋಂಕು ದೃಢಪಟ್ಟಿದೆ. ಆದರೆ ಸದ್ಯ ನನಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

Latest Videos

undefined

ಅಧಿವೇಶನಕ್ಕೂ ಮುನ್ನವೇ ಕರ್ನಾಟಕ ಉಪಮುಖ್ಯಮಂತ್ರಿಗೆ ಕೊರೋನಾ ದೃಢ..!

ಕೊರೋನಾ ಸೋಂಕಿತರಾಗಿರುವ ಹಿನ್ನೆಲೆಯಲ್ಲಿ ತಮ್ಮೊಂದಿಗೆ ಇತ್ತೀಚೆಗೆ ನೇರ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂಪ್ರೇರಿತರಾಗಿ ಕೋವಿಡ್​-19 ಟೆಸ್ಟ್​ಗೆ ಒಳಗಾಗಬೇಕು ಎಂದೂ ಅವರು ಟ್ವಿಟ್ಟರ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

I have been tested positive for today. I have no symptoms.

Request to all those who had come in contact with me in the last couple of days to get themselves tested as a precautionary measure.
Stay safe!

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge)

ಇದೇ ಸೆಪ್ಟೆಂಬರ್ 21ರಂದು ಅಧಿವೇಶನ ಆರಂಭವಾಗುತ್ತಿದೆ. ಆದ್ಎ, ಅಧಿವೇಶ ಆರಂಭಕ್ಕೂ ಮುನ್ನವೇ ಕೋವಿಡ್​ ಸೋಂಕಿಕ ಜನಪ್ರತಿನಿಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಬಾರಿಯ ಅಧಿವೇಶನದಲ್ಲಿ ಬಹುತೇಕರು ಭಾಗವಹಿಸುವುದು ಅನುಮಾನವಾಗಿದೆ.

click me!