ರಾಜ್ಯ ವಿಧಾನಮಂಡಲ ಸದನದಲ್ಲಿ ಎಲ್ಲರ ಗಮನಸೆಳೆದ ಕಾಂಗ್ರೆಸ್ ಶಾಸಕನ ಮಾಸ್ಕ್..!

Published : Sep 23, 2020, 03:31 PM ISTUpdated : Sep 23, 2020, 07:41 PM IST
ರಾಜ್ಯ ವಿಧಾನಮಂಡಲ ಸದನದಲ್ಲಿ ಎಲ್ಲರ ಗಮನಸೆಳೆದ ಕಾಂಗ್ರೆಸ್ ಶಾಸಕನ ಮಾಸ್ಕ್..!

ಸಾರಾಂಶ

ಸುಮಾರು 10ಕ್ಕೂ ಹೆಚ್ಚು ವೆರೈಟಿ ಮಾಸ್ಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲೂ ಜನರು ಡ್ರೆಸ್‌ಗೆ ಮ್ಯಾಚಿಂಗ್‌ ಆಗುವಂತ ಮಾಸ್ಕ್‌ ಧರಿಸುವುದು ಟ್ರೆಂಡ್ ಆಗುತ್ತಿದೆ. ಮತ್ತೊಂದೆಡೆ, ಶಾಸಕರೊಬ್ಬರು ಹಾಕಿಕೊಂಡಿದ್ದ ಮಾಸ್ಕ್ ಇಡೀ ವಿಧಾನಮಂಡಲ ಸದನದಲ್ಲಿ ಎಲ್ಲರ ಗಮನಸೆಳೆದಿದೆ.

ಬೆಂಗಳೂರು, (ಸೆ.23) : ಇಂದು (ಬುಧವಾರ) ಮೂರನೇ ದಿನದ ವಿಧಾನಮಂಡಲದ ಅಧಿವೇಶನದಲ್ಲಿ ಮೆಡಿಕಲ್ ಕಿಟ್ ಖರೀದಿ ಹಗರಣದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಬಾರಿ ಗದ್ದಲ, ಜಟಾಪಟಿ ನಡುವೆಯೂ ಸದನ ನಡೆಯುತ್ತಿದೆ. 

ಇದರ ಮಧ್ಯೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯವರು ಧರಿಸಿದ್ದಂತ ಮಾಸ್ಕ್ ಎಲ್ಲರ ಗಮನ ಸೆಳೆಯಿತು. 'ಸೋಂಕಿತ ಸರ್ಕಾರ' ಎಂದು ಬರೆದಿದ್ದಂತ ಪ್ರಿಂಟೆಡ್ ಮಾಸ್ಕ್ ಹಾಕಿಕೊಂಡಿದ್ದು ಎಲ್ಲರ ಗಮನಸೆಳೆಯಿತು.

ಮಾಸ್ಕ್‌ ಹಾಕಿ​ಕೊಂಡೇ ಮಾತಾ​ಡಿ: ಸದಸ್ಯರಿಗೆ ಸ್ಪೀಕರ್‌ ಕಾಗೇರಿ ತಾಕೀ​ತು

 ಇಂದಿನ ಪ್ರಶ್ನೋತ್ತರ ಸಮಯದಲ್ಲಿ ಮಾತನಾಡಲು ಮೇಲೆ ಎದ್ದ ಪ್ರಿಯಾಂಕ್ ಖರ್ಗೆ, ಸೋಂಕಿತ ಸರ್ಕಾರ ಎಂಬ ಸ್ಲೋಗನ್ ಇರುವ ಮಾಸ್ಕ್ ನೋಡಿ ಸದನದಲ್ಲಿದ್ದ ಎಲ್ಲರೂ ಅವರನ್ನೇ ನೋಡುತ್ತಿದ್ದರು. 

'ಸೋಂಕಿತ ಸರ್ಕಾರ' ಎನ್ನುವ ಪ್ರಿಂಟೆಡ್ ಮಾಸ್ಕ್ ಹಾಕಿಕೊಳ್ಳುವ ಮೂಲಕ ಆಡಳಿತರೂಢ ಬಿಜೆಪಿ ಸರ್ಕಾರ ಪರೋಕ್ಷವಾಗಿ ಮೌನ ಪ್ರತಿಭಟನೆ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ